ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕುಸಿತವನ್ನು ಕಂಡಿದೆ. ಡಾಲರ್ ಎದುರು ರೂಪಾಯಿ ಕುಸಿದು 79ಕ್ಕೆ ತಲುಪಿದೆ. ತೈಲ ದರ ಹಾಗೂ ಹಣದುಬ್ಬರದ ನಡುವೆ ಬುಧವಾರ ಮತ್ತೆ ಡಾಲರ್ ಎದುರು ರೂಪಾಯಿ ಕುಸಿತವಾಗಿದೆ.
ಮಂಗಳವಾರುವೂ ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕುಸಿತ ಕಂಡಿದೆ. ಬುಧವಾರ ಸುಮಾರು ಡಾಲರ್ ಎದುರು ರೂಪಾಯಿ 18 ಪೈಸೆ ಕುಸಿದು, 79 ರೂಪಾಯಿಗೆ ಇಳಿದಿದೆ. ಈ ಹಿಂದಿನ ಸೆಷನ್‌ನಲ್ಲಿ ರೂಪಾಯಿ 78.86ಕ್ಕೆ ಕುಸಿತ ಕಂಡಿತ್ತು. ಆದರೆ ಇಂದು 79.03ಕ್ಕೆ ಅಂದರೆ ಸಾರ್ವಕಾಲಿಕವಾಗಿ ಕುಸಿತ ಕಂಡಿದೆ.
ಮಂಗಳವಾರ ಡಾಲರ್ ಎದುರು ರೂಪಾಯಿ ಸುಮಾರು 48 ಪೈಸೆ ಕುಸಿದು ರೂಪಾಯಿ 78.85ಕ್ಕೆ ಇಳಿದಿದೆ. ಕಳೆದ ಆರು ಸೆಷನ್‌ನಲ್ಲಿಯೂ ರೂಪಾಯಿ ಕುಸಿತ ಕಂಡಿದೆ. ಅಷ್ಟು ಮಾತ್ರವಲ್ಲದೇ ಈ ಆರು ಸೆಷನ್‌ನಲ್ಲಿಯೂ ಸಾರ್ವಕಾಲಿಕ ಕುಸಿತ ಕಾಣುತ್ತಿದೆ.

ರೂಪಾಯಿ ಕುಸಿತ ಕಾಣುತ್ತಿದ್ದಂತೆ ಇತ್ತೀಚೆಗೆ ಮಧ್ಯ ಪ್ರವೇಶ ಮಾಡಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು ಏರಿಕೆ ಮಾಡಿದೆ. ಇದರಿಂದಾಗಿ ಸಾಲದ ಬಡ್ಡಿದರವು ಹೆಚ್ಚಳವಾಗಿದೆ. ಇಎಂಐ ಹೊರೆಯು ಅಧಿಕವಾಗಿದೆ. ಈಗ ಮತ್ತೆ ಆರ್‌ಬಿಐ ಮಧ್ಯ ಪ್ರವೇಶ ಮಾಡುವ ಸಾಧ್ಯತೆ ಇದೆ.
ತಜ್ಞರು ಹೇಳುವುದು ಏನು?
ಆದರೆ ತಜ್ಞರು ರೂಪಾಯಿ ಕುಸಿತ ಕಾಣುತ್ತಿರುವ ನಡುವೆ ಆರ್‌ಬಿಐ ತನ್ನ ನೀತಿಯನ್ನು ಬದಲಾವಣೆ ಮಾಡಿಕೊಳ್ಳಬೇಕು. ಹೊಸ ನೀತಿಯನ್ನು ಅಳವಡಿಸಿಕೊಳ್ಳಬೇಕು. ಈ ತಿಂಗಳ ಆರಂಭದಲ್ಲಿಯೇ ರೂಪಾಯಿ ಸಾರ್ವಕಾಲಿಕ ಕುಸಿತ ಕಂಡಿತ್ತು. ಈಗ ಮತ್ತೆ ನಿರಂತರವಾಗಿ ಹೊ ಸ ದಾಖಲೆಯನ್ನು ಬರೆಯುತ್ತಿದೆ.
ಮುಖ್ಯವಾಗಿ ಡಾಲರ್ ಮೌಲ್ಯ ಅಧಿಕವಾಗುವುದು ರೂಪಾಯಿ ಪತನಕ್ಕೆ ಕಾರಣವಾಗಿದೆ. ಕಚ್ಚಾ ತೈಲ ಬೆಲೆ ಏರಿಕೆಯಾದಂತೆ ಡಾಲರ್ ಮೌಲ್ಯ ಅಧಿಕವಾಗುತ್ತದೆ. ಈ ಸಂದರ್ಭದಲ್ಲೇ ರೂಪಾಯಿ ಮೌಲ್ಯ ಕುಸಿತವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.


Click it and Unblock the Notifications