ಸೋಮವಾರ ಬುದ್ಧ ಪೂರ್ಣಿಮೆಯ ಕಾರಣ ವಿದೇಶೀ ವಿನಿಮಯ ಮಾರುಕಟ್ಟೆಗಳು ಮುಚ್ಚಲ್ಪಟ್ಟಿದೆ. ಇದಾದ ಒಂದು ದಿನದ ನಂತರ ಮಂಗಳವಾರ ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿ 77.73 ಕ್ಕೆ ದಾಖಲೆಯ ಕುಸಿತವನ್ನು ಕಂಡಿದೆ.
ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ಎದುರು 18 ಪೈಸೆ ಕುಸಿತವಾಗಿದೆ. ಈ ನಡುವೆ ದೇಶೀಯ ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಮಂಗಳವಾರ 242 ಪಾಯಿಂಟ್‌ಗಳ ಏರಿಕೆಯೊಂದಿಗೆ 53,216ರಲ್ಲಿ ವಹಿವಾಟು ಆರಂಭ ಮಾಡಿದರೆ, ನಿಫ್ಟಿ 70 ಪಾಯಿಂಟ್‌ಗಳ ಜಿಗಿದು 15,912 ಕ್ಕೆ ಸ್ಥಿರವಾಗಿದೆ.
ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಒಂದು ಡಾಲರ್‌ಗೆ 77.73ರಂತೆ ವಿನಿಮಯ ನಡೆದಿದೆ. ಈ ನಡುವೆ ರೂಪಾಯಿ ಮೌಲ್ಯ ಇಳಿಕೆಗೆ ಪ್ರಮುಖವಾಗಿ ಅಮೆರಿಕದ ಡಾಲರ್ ಬಳಗೊಳ್ಳುತ್ತಿರುವುದು ಕಾರಣ ಎಂದು ವಿಶ್ಲೇಷಕರು ಹೇಳಿದ್ದಾರೆ.

ಇನ್ನು ದೇಶದ ಬಂಡವಾಳ ಮಾರುಕಟ್ಟೆಗಳಿಂದ ವಿದೇಶಿ ಬಂಡವಾಳ ಹೊರಹೋಗುತ್ತಿರುವುದು ಕೂಡಾ ರೂಪಾಯಿ ಮೌಲ್ಯ ಕುಸಿತಕ್ಕೆ ಮುಖ್ಯ ಕಾರಣ ಎಂದು ವಿಶ್ಲೇಷಕರು ತಿಳಿಸಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಎಲ್‌ಐಸಿ ಮೇಲ ಎಲ್ಲರ ಚಿತ್ತವಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಧ್ಯಪ್ರವೇಶ ಸಾಧ್ಯತೆ
ಈ ಎಲ್ಲಾ ಬೆಳವಣಿಗೆಯ ನಡುವೆ ಆರ್‌ಬಿಐ ಮೇಲೆಯೂ ಎಲ್ಲರ ಗಮನ ಹರಿದಿದೆ. ಭಾರತದ ರೂಪಾಯಿ ಮೌಲ್ಯದ ಕುಸಿತ ಹೀಗೆಯೇ ಮುಂದುವರಿದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಬ್ಯಾಂಕ್) ಮಧ್ಯ ಪ್ರವೇಶ ಮಾಡುವ ನಿರೀಕ್ಷೆ ಇದೆ.
ಈ ಹಿಂದೆ ಮೇ 9ರಂದು ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯವು ಸಾರ್ವಕಾಲಿಕ ಕುಸಿತವನ್ನು ಕಂಡಿದೆ. ಚೀನಾದಲ್ಲಿ ಮತ್ತೆ ಕೊರೊನಾ ಪ್ರಕರಣ ಹೆಚ್ಚಳ ಕಾರಣದಿಂದಾಗಿ ಲಾಕ್‌ಡೌನ್ ಹಾಗೂ ಹಲವಾರು ಜಾಗತಿಕ ಬೆಳವಣಿಗೆಯ ನಡುವೆ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತವನ್ನು ಕಂಡಿತ್ತು. ಮೇ 9ರಂದು ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ 77.42 ಕ್ಕೆ ಕುಸಿದಿದೆ.


Click it and Unblock the Notifications