ಅಕ್ಟೋಬರ್ 30ರಂದು ಚಿನ್ನ, ಬೆಳ್ಳಿ ದರಗಳನ್ನು ಚಿನಿವಾರ ಪೇಟೆ ಧಾರಣೆಯಂತೆ ಇಲ್ಲಿ ನೀಡಲಾಗುತ್ತಿದೆ. ಕಳೆದ ಒಂದು ವಾರದಲ್ಲಿ ನಾಲ್ಕು ದಿನ ಏರಿಕೆ ಕಂಡ ಹಳದಿ ಲೋಹ ನಂತರ ಸತತ ಎರಡು ದಿನ ಇಳಿಕೆಯಾಗಿತ್ತು. ಶುಕ್ರವಾರ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿದೆ. ಒಟ್ಟಾರೆ 900 ರು ಅಧಿಕ ಬೆಲೆ ಕಳೆದುಕೊಂಡಿತ್ತು.
ಭಾರತದಲ್ಲಿ ಶುಕ್ರವಾರದಂದು ಖರೀದಿ ಚಿನ್ನ(spot gold) 10 ಗ್ರಾಂಗೆ 50, 690ರು ನಷ್ಟಿದ್ದು, ನಿನ್ನೆಗೆ ಹೋಲಿಸಿದರೆ 0.02% ಏರಿಕೆ ಕಂಡಿದ್ದರೂ ವಾರದ ಸರಾಸರಿ (50, 902.86)ಗೆ ಹೋಲಿಸಿದರೆ ಶೇ 0.42 ಇಳಿಕೆಯಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನ ಪ್ರತಿ ಔನ್ಸಿಗೆ 1875.8 ಡಾಲರ್ ನಷ್ಟಿದೆ. ಕಳೆದ ಒಂದು ತಿಂಗಳಿಗೆ ಹೋಲಿಸಿದರೆ ಇದು ಕೂಡಾ ಇಳಿಕೆಯಾಗಿದೆ. ಕಳೆದ 30 ದಿನಗಳಲ್ಲಿ ಸರಾಸರಿ ಪ್ರತಿ ಔನ್ಸಿಗೆ 1903.8 ಡಾಲರ್ ನಷ್ಟಿದೆ. ಇದೇ ವೇಳೆ ಬೆಳ್ಳಿ 1.14% ಏರಿಕೆ ಕಂಡು 23.5 ಪ್ರತಿ ಔನ್ಸ್ ನಷ್ಟಾಗಿದೆ.

ಎಂಸಿಎಕ್ಸ್ ಚಿನ್ನದ ದರ
ದಿನದ ಆರಂಭದಲ್ಲಿ 50, 465 ರು ನಂತೆ ಆರಂಭಗೊಂಡು 50, 525 ರು ಮುಟ್ಟಿದ್ದರೂ ಸರಾಸರಿ 50, 427.12 ರು ನಂತೆ ವಹಿವಾಟು ನಡೆಸಿ ಸ್ಥಿರತೆ ಕಾಯ್ದುಕೊಂಡಿದೆ. ಒಟ್ಟಾರೆ 0.24% ಅಥವಾ 123 ರು ಹೆಚ್ಚಳ ಕಂಡಿದೆ. ಇನ್ನು 1 ಡಾಲರ್ ಮೊತ್ತ 74.61ರು ನಷ್ಟಿದ್ದು, ಹೆಚ್ಚಿನ ವಿನಿಮಯ ಬದಲಾವಣೆ ಕಂಡು ಬಂದಿಲ್ಲ.


Click it and Unblock the Notifications