ಈ ವರ್ಷ, ಅಂದರೆ 2020ರಲ್ಲಿ ಐಪಿಒಗಳಲ್ಲಿ ಅದ್ಭುತವಾದ ಗಳಿಕೆ ಕಂಡ ಕಂಪೆನಿಗಳನ್ನು ನಿಮಗೆ ಮತ್ತೆ ನೆನಪಿಸುವುದು ಈ ಲೇಖನದ ಉದ್ದೇಶ. ವರ್ಷದ ಕೊನೆಗೆ ಬಂದು ನಿಂತಿದ್ದೇವೆ. ಇಂಥ ಸಂದರ್ಭದಲ್ಲಿ ಕೊರೊನಾ ಎಬ್ಬಿಸಿದ್ದ ಷೇರು ಮಾರುಕಟ್ಟೆಯ ತಲ್ಲಣ ಕಡಿಮೆ ಏನಲ್ಲ. ಆದರೆ ಆ ನಷ್ಟವನ್ನೆಲ್ಲ ತುಂಬಿಕೊಂಡು, ಮತ್ತೆ ಚಿಗಿತು ನಿಂತ ಷೇರುಪೇಟೆಗೆ ಐಪಿಒಗಳು ತಂದದ್ದು ಆನೆಬಲವೇ. ಅಥವಾ ಗಟ್ಟಿಯಾದ ಮಾರ್ಕೆಟ್ ನಿಂದ ಐಪಿಒಗಳಿಗೆ ಬಲ ಬಂತು.
ಈಗ ನಿಮ್ಮೆದುರು ಐದು ಕಂಪೆನಿಯ ಷೇರುಗಳ ಹೆಸರನ್ನು ಇಡಲಾಗುತ್ತಿದೆ. ಅವು ಈ ವರ್ಷ ಲಿಸ್ಟಿಂಗ್ ದಿನ ಹೂಡಿಕೆದಾರರಿಗೆ ಆಹಾ ಓಹೋ ಎಂಬಂತೆ ಗಳಿಕೆ ತಂದುಕೊಟ್ಟಂಥವು. ಯಾವುವು ಅವು? ತಿಳಿದುಕೊಳ್ಳುವುದಕ್ಕೆ ಮುಂದೆ ಓದಿ.
* ಕೆಮ್ ಕಾನ್ ಸ್ಪೆಷಾಲಿಟಿ:
ಲಿಸ್ಟಿಂಗ್ ಆದ ದಿನಾಂಕ: ಅಕ್ಟೋಬರ್ 1, 2020
ದರ ಹಾಗೂ ಪ್ರೀಮಿಯಂ: 115% ಪ್ರೀಮಿಯಂ ಜತೆಗೆ 731 ರುಪಾಯಿಗೆ ಲಿಸ್ಟಿಂಗ್
ಇಷ್ಯೂ ಬೆಲೆ: ರು. 340
ಸದ್ಯದ ದರ: ರು. 407
* ಹ್ಯಾಪಿಯೆಸ್ಟ್ ಮೈಂಡ್ ಟೆಕ್ನಾಲಜೀಸ್:
ಲಿಸ್ಟಿಂಗ್ ಆದ ದಿನಾಂಕ: ಸೆಪ್ಟೆಂಬರ್ 17, 2020
ದರ ಹಾಗೂ ಪ್ರೀಮಿಯಂ: 111% ಪ್ರೀಮಿಯಂ ಜತೆಗೆ 351 ರುಪಾಯಿಗೆ ಲಿಸ್ಟಿಂಗ್
ಇಷ್ಯೂ ಬೆಲೆ: ರು. 166
ಸದ್ಯದ ದರ: ರು. 323.10

* ರೂಟ್ ಮೊಬೈಲ್:
ಲಿಸ್ಟಿಂಗ್ ಆದ ದಿನಾಂಕ: ಸೆಪ್ಟೆಂಬರ್ 21, 2020
ದರ ಹಾಗೂ ಪ್ರೀಮಿಯಂ: 105% ಪ್ರೀಮಿಯಂ ಜತೆಗೆ 708 ರುಪಾಯಿಗೆ ಲಿಸ್ಟಿಂಗ್
ಇಷ್ಯೂ ಬೆಲೆ: ರು. 350
ಸದ್ಯದ ದರ: ರು. 1069.75
* ಬರ್ಗರ್ ಕಿಂಗ್:
ಲಿಸ್ಟಿಂಗ್ ಆದ ದಿನಾಂಕ: ಡಿಸೆಂಬರ್ 14, 2020
ದರ ಹಾಗೂ ಪ್ರೀಮಿಯಂ: 92.25% ಪ್ರೀಮಿಯಂ ಜತೆಗೆ 115.35 ರುಪಾಯಿಗೆ ಲಿಸ್ಟಿಂಗ್
ಇಷ್ಯೂ ಬೆಲೆ: ರು. 60
ಸದ್ಯದ ದರ: ರು. 158.30
* ರೊಸ್ಸಾರಿ ಬಯೋಟೆಕ್:
ಲಿಸ್ಟಿಂಗ್ ಆದ ದಿನಾಂಕ: ಜುಲೈ 23, 2020
ದರ ಹಾಗೂ ಪ್ರೀಮಿಯಂ: 58% ಪ್ರೀಮಿಯಂ ಜತೆಗೆ 670 ರುಪಾಯಿಗೆ ಲಿಸ್ಟಿಂಗ್
ಇಷ್ಯೂ ಬೆಲೆ: ರು. 425
ಸದ್ಯದ ದರ: ರು. 831.15


Click it and Unblock the Notifications