For Quick Alerts
ALLOW NOTIFICATIONS  
For Daily Alerts

ಭಾರತದ ಷೇರು ಮಾರುಕಟ್ಟೆಯಲ್ಲಿ ಸತತ ಇಳಿಕೆ; ಸೆನ್ಸೆಕ್ಸ್, ನಿಫ್ಟಿ ಇಳಿಜಾರು ಹಾದಿಯಲಿ

|

ಸತತ ನಾಲ್ಕನೇ ಸೆಷನ್ ಷೇರು ಮಾರುಕಟ್ಟೆ ಸೂಚ್ಯಂಕಗಳು ಕುಸಿತ ಕಂಡಿವೆ. ಮಂಗಳವಾರದಂದು ನಿಫ್ಟಿ ಸೂಚ್ಯಂಕವು 12 ಸಾವಿರ ಅಂಶಗಳಿಗಿಂತ ಕೆಳಗೆ, 11,992 ಅಂಶದೊಂದಿಗೆ ದಿನದ ವಹಿವಾಟು ಕೊನೆಗೊಳಿಸಿದೆ. ಇನ್ನು ಸೆನ್ಸೆಕ್ಸ್ 161 ಪಾಯೊಂಟ್ ಗಳ ಇಳಿಕೆ ಕಂಡು, 40,894 ಅಂಶಗಳೊಂದಿಗೆ ವ್ಯವಹಾರ ಚುಕ್ತಾ ಮಾಡಿದೆ.

 

ಸೂಚ್ಯಂಕಗಳ ಮೇಲೆ ಹಲವು ಅಂಶಗಳು ಪ್ರಭಾವ ಬೀರಿವೆ. ಈಚೆಗಿನ ಕೇಂದ್ರ ಬಜೆಟ್, ಆರ್ ಬಿಐನ ಹಣಕಾಸು ನೀತಿ ಕಾರಣಕ್ಕೆ ಮಾರುಕಟ್ಟೆ ನಿರಂತರ ಏರಿಕೆ ಆಗಿತ್ತು. ಇದೀಗ ಮಾರುಕಟ್ಟೆ ಸೂಚ್ಯಂಕಗಳು ಇಳಿಕೆಯನ್ನು ಕಾಣುತ್ತಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು, ಲೋಹದ ಷೇರುಗಳು ಭಾರೀ ಇಳಿಕೆಯಾದವು.

 
ಭಾರತ ಷೇರು ಮಾರುಕಟ್ಟೆ ಸತತ ಇಳಿಕೆ; ಸೆನ್ಸೆಕ್ಸ್, ನಿಫ್ಟಿ ಕುಸಿತ

ನಿಫ್ಟಿಯಲ್ಲಿ ಮಾಧ್ಯಮದ ಸೂಚ್ಯಂಕಗಳು ಮಾತ್ರ ಏರಿಕೆ ಕಂಡವು. ಇನ್ನು ಎಲ್ ಐಸಿ ಹೌಸಿಂಗ್ ಫೈನಾನ್ಸ್ ಷೇರುಗಳು ಐದು ಪರ್ಸೆಂಟ್ ಕುಸಿಯಿತು. ವೊಡಾಫೋನ್ ಐಡಿಯಾ ಮತ್ತು ಏರ್ ಟೆಲ್ ಎರಡೂ ಷೇರುಗಳು ಕುಸಿದವು. ವೊಡಾಫೋನ್ ಷೇರುಗಳು 17 ಪರ್ಸೆಂಟ್ ಕುಸಿಯಿತು.

ಮಂಗಳವಾರ ಮಧ್ಯಾಹ್ನ ಅಮೆರಿಕ ಡಾಲರ್ ವಿರುದ್ಧ ರುಪಾಯಿ ಮೌಲ್ಯ 71.55ಕ್ಕೆ ಇಳಿಯಿತು.

English summary

Indian Stock Market Index Sensex And Nifty Closed In Red

Indian stock market index Sensex and Nifty closed red on Tuesday.
Story first published: Tuesday, February 18, 2020, 18:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X