ಅಮೆರಿಕ ಡಮ್ಮಿ! ಭಾರತದ ಮಹಿಳೆಯರ ಬಳಿಯಿದೆ 24,000 ಟನ್‌ ಬಂಗಾರ; ಇದು 5 ದೇಶಗಳ ಚಿನ್ನಕ್ಕೆ ಸಮ!

ಚಿನ್ನ ಎಂದರೆ ಯಾರಿಗೆ ತಾನೇ ಇಷ್ಟ ಆಗುವುದಿಲ್ಲ ಹೇಳಿ ಎಲ್ಲರಿಗೂ ಚಿನ್ನ ಅಚ್ಚು-ಮೆಚ್ಚು, ಅದರಲ್ಲೂ ಭಾರತೀಯ ಮಹಿಳೆಯರಿಗೆ ಚಿನ್ನದ ಮೇಲೆ ಹೆಚ್ಚಿನ ಒಲವು ಇದೆ. ಚಿನ್ನ ಆಪತ್ತು ಕಾಲದಲ್ಲಿ ಆಗುವ ಬಂಧು ಎಂದೇ ಹೇಳಬಹುದು ಏಕೆಂದರೆ ಕಷ್ಟದ ಕಾಲದಲ್ಲಿ ಕೈ ಹಿಡಿಯುತ್ತದೆ.

ಅನೇಕ ಮಹಿಳೆಯರು ಆಭರಣಗಳನ್ನು ಧರಿಸುವುದಕ್ಕಿಂತ ಕಷ್ಟದ ಸಮಯದಲ್ಲಿ ಆಗುತ್ತೆ ಎಂಬ ಕಾರಣಕ್ಕಾಗಿ ಅತಿ ಹೆಚ್ಚು ಚಿನ್ನ ಖರೀದಿ ಮಾಡುತ್ತಾರೆ. ಹಾಗಿದ್ರೆ ಯಾವ ದೇಶದಲ್ಲಿ ಅತಿ ಹೆಚ್ಚು ಚಿನ್ನದ ಸಂಪತ್ತುನ್ನು ಹೊಂದಿದೆ? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.

 ಭಾರತದ ಮಹಿಳೆಯರ ಬಳಿಯಿದೆ 24,000 ಟನ್‌ ಬಂಗಾರ; ಯಾವ ದೇಶ ನಂ.1?

ಹೌದು, ಭಾರತ ಅಕ್ಷರಶಃ ಚಿನ್ನದ ನಾಡೆಂದು ಮತ್ತೊಮ್ಮೆ ಸಾಬೀತು ಮಾಡಿದೆ. ಇದರಲ್ಲಿ ಭಾರತೀಯ ಮಹಿಳೆಯರು ಗೋಲ್ಡನ್‌ ಸ್ಟಾರ್ಸ್ ಎಂಬುವುದನ್ನು ಖಾತರಿಯಾಗಿದೆ. ಏಕೆಂದರೆ, ಭಾರತದ ಮಹಿಳೆಯರ ಬಳಿ ಇರುವುದು ಅಷ್ಟಿಷ್ಟಲ್ಲ ಬರೋಬ್ಬರಿ 24,000 ಟನ್‌ ಬಂಗಾರವಿದೆ. ಎಂದು ವರ್ಲ್ಡ್ ಗೋಲ್ಡ್‌ ಕೌನ್ಸಿಲ್‌ ವರದಿ ಹೇಳಿದೆ.

ವಿಶ್ವದ ವಿವಿಧ ದೇಶಗಳ ಚಿನ್ನದ ದಾಸ್ತಾನು ಕುರಿತಾದ ಅಂಕಿ-ಅಂಶಗಳಲ್ಲಿ ಈ ಮಾಹಿತಿ ಬಹಿರಂಗಪಡಿಸಿದೆ. ಅಮೆರಿಕ ಸೇರಿದಂತೆ ವಿಶ್ವದ ಅಗ್ರ 5 ದೇಶಗಳಲ್ಲಿರುವ ಒಟ್ಟು ಚಿನ್ನಕ್ಕಿಂತಲೂ ಭಾರತದ ಮಹಿಳೆಯರ ಬಳಿಯೇ ಹೆಚ್ಚು ಚಿನ್ನವಿದೆ ಎಂದು ಹೇಳಿದ್ದಾರೆ.

ವಿಶ್ವದಲ್ಲೇ ಅತಿ ಹೆಚ್ಚು ಚಿನ್ನ ಹೊಂದಿರುವ ದೇಶ ಭಾರತ

ವಿಶ್ವದಲ್ಲೇ ಅತಿ ಹೆಚ್ಚು ಚಿನ್ನ ಹೊಂದಿರುವ ದೇಶಯೆಂಬ ಹೆಗ್ಗಳಿಗೆ ಭಾರತಕ್ಕೆ ಸಿಕ್ಕಿದೆ. ಇಡೀ ವಿಶ್ವದಲ್ಲಿರುವ ಒಟ್ಟು ಚಿನ್ನದಲ್ಲಿ ಶೇ. 11ರಷ್ಟು ಭಾರತದಲ್ಲೇ ಇದೆ.

4 ವರ್ಷದಲ್ಲಿ 3 ಸಾವಿರ ಟನ್‌ ಚಿನ್ನ ಹೆಚ್ಚಳ

ಮಹಿಳೆಯರಿಗೂ ಬಂಗಾರಕ್ಕೂ ಅನಾದಿ ಕಾಲದಿಂದ ಬಿಡಿಸಲಾಗದ ಅನುಬಂಧವಿದೆ. ಭಾರತದಲ್ಲಿ ಚಿನ್ನವೆಂದರೆ ಕೇವಲ ಸಂಪತ್ತಿನ ಸಂಕೇತವಾಗಿಲ್ಲ ಅದು ಸಂಪ್ರದಾಯ, ಸಾಂಸ್ಕೃತಿಕ ಮಹತ್ವವನ್ನೂ ಹೊಂದಿದೆ. ಅದರಲ್ಲೂ ಮನೆಯಲ್ಲಿ ಸಣ್ಣ ನಾಮಕರಣದಿಂದ ಹಿಡಿದು, ಅದ್ಧೂರಿ ಮದುವೆಗಳವರೆಗೆ ಯಾವುದೇ ಕಾರ್ಯಕ್ರಮವಾದರೂ ಅಲ್ಲಿ ಚಿನ್ನ ಬೇಕೇ ಬೇಕು ಅಷ್ಟೋಂದು ಮಹತ್ವವನ್ನು ಚಿನ್ನ ಹೊಂದಿದೆ.

ಚಿನ್ನವನ್ನು ಕೂಡಿ ಇಡುವುದು ಅವರಿಗೆ ಮಾತ್ರವಲ್ಲ ಮಕ್ಕಳಿಗೆ ಮೊಮ್ಮಕ್ಕಳ ಕಾಲಕ್ಕೂ ಇರಲಿ ಎಂಬುದು ಬಹುತೇಕ ಭಾರತೀಯರ ನಂಬಿಕೆ. ಹೀಗಾಗಿ ಚಿನ್ನವನ್ನು ಕೂಡಿಯಿಡುವ ಸಂಪ್ರದಾಯ ಬೆಳೆದುಬಂದಿದೆ. ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಚಿನ್ನದ ಸಂಗ್ರಹ ಹೆಚ್ಚುತ್ತಿದೆ. 2020-21ರಲ್ಲಿ ಭಾರತದಲ್ಲಿ ಒಟ್ಟು 21,000 ಟನ್‌ ಚಿನ್ನವಿತ್ತು. 4 ವರ್ಷದಲ್ಲಿ 3,000 ಟನ್‌ ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.

ಚಿನ್ನದ ಮೇಲೆ ಗರಿಷ್ಠ ಮಿತಿ ತೆರವು:

ಚಿನ್ನ ನಿಗ್ರಹ ಕಾಯಿದೆ ಅಡಿಯಲ್ಲಿ 1968ರಲ್ಲಿ ಜಾರಿಗೊಳಿಸಲಾದ ಭಾರತ ಪ್ರತಿ ಕುಟುಂಬಕ್ಕೂ ಚಿನ್ನ ದಾಸ್ತಾನಿಗೆ ಮಿತಿ ಇತ್ತು. ವಿವಾಹಿತ ಮಹಿಳೆಯರು 500 ಗ್ರಾಂ, ಅವಿವಾಹಿತ ಮಹಿಳೆಯರು 250 ಗ್ರಾಂ ಮತ್ತು ಪುರುಷರು 100 ಗ್ರಾಂ. ಚಿನ್ನವನ್ನು ಹೊಂದಿರಬಹುದಿತ್ತು. ಅದನ್ನು ಮೀರಿದರೆ ಭಾರೀ ದಂಡ ಮತ್ತು ತೆರಿಗೆ ವಿಧಿಸಲಾಗುತ್ತಿತ್ತು.

ಯಾವ ದೇಶದಲ್ಲಿ ಎಷ್ಟು ಚಿನ್ನವಿದೆ?

ಅಮೆರಿಕದಲ್ಲಿ 8,000 ಟನ್‌ ಚಿನ್ನವಿದೆ. ಇನ್ನೂ ಜರ್ಮನಿಯಲ್ಲಿ 3,300 ಟನ್‌ ಗೋಲ್ಡ್‌ ಇದೆ. ಇಟಲಿಯಲ್ಲಿ 2,450 ಟನ್‌ ಬಂಗಾರ ಇದ್ದರೆ, ಫ್ರಾನ್ಸ್‌ನಲ್ಲಿ 2,400 ಟನ್‌ ಬಂಗಾರ ಇದೆ. ರಷ್ಯಾದಲ್ಲಿ 1900 ಟನ್‌ ಚಿನ್ನ ಇದೆ. ಈ ಐದು ದೇಶಗಳಲ್ಲಿರುವ ಚಿನ್ನವನ್ನು ಸೇರಿಸಿದರೆ, 18,050 ಟನ್‌ ಬಂಗಾರ ಆಗಲಿದೆ.

ಆದರೆ, ಭಾರತದ ಮಹಿಳೆಯರ ಬಳಿ 24,000 ಟನ್‌ ಚಿನ್ನ ಇದೆ. 2024ರಲ್ಲಿ ಚಿನ್ನದ ಬೆಲೆ ಏರಿಕೆ ಇಳಿಕೆ ಕಂಡರೂ ಚಿನ್ನದ ಒಲವು ಕಡಿಮೆಯಾಗಿಲ್ಲ.ನವೆಂಬರ್ ವೇಳೆಗೆ ಬೆಲೆಗಳು ಶೇ.28ರಷ್ಟು ಏರಿದ್ದು, ಮೂರು ತಿಂಗಳಲ್ಲಿ ಚಿನ್ನದ ಒಟ್ಟು ಬೇಡಿಕೆಯು 100 ಶತಕೋಟಿ ಡಾಲರ್‌ ಅನ್ನು ದಾಟಿದೆ.

ಚಿನ್ನ ಎಷ್ಟೇ ದುಬಾರಿಯಾದರೂ ಖರೀದಿ ಮಾತ್ರ ನಿಲ್ಲುವುದಿಲ್ಲ

ಬಂಗಾರದ ಮೇಲೆ ಎಷ್ಟೇ ದುಬಾರಿಯಾದರೂ ಭಾರತೀಯ ಮಹಿಳೆಯರು ಚಿನ್ನ ಖರೀದಿ ಮಾಡುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ಚಿನ್ನ ಮೇಲಿನ ಒಲವು ಸಹ ಅವರಿಗೆ ಕಡಿಮೆಯಾಗುವುದಿಲ್ಲ ಯಾಕೆಂದರೆ ಅವರು ಇಷ್ಟಪಡುವ ವಸ್ತುಗಳಲ್ಲಿ ಮೊದಲ ಆಯ್ಕೆ ಚಿನ್ನನ್ನೇ ಆಗಿರುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+