ಇಂಟರ್ ನ್ಯಾಷನಲ್ ಟ್ರಿಪ್ ಹೋಗೋ ಆಸೆ ಎಲ್ಲರಿಗೂ ಇರುತ್ತೆ. ಆದ್ರೆ ವಿಮಾನದಲ್ಲಿ ಹೋಗೋಕೆ ಅಗತ್ಯವಾಗಿರುವ ಪಾಸ್‌ಪೋರ್ಟ್ ಸೇರಿದಂತೆ, ಇನ್ನಿತರ ದಾಖಲೆಗಳು ತಕ್ಷಣಕ್ಕೆ ಸಿಗೋದಿಲ್ಲ. ಇನ್ನೂ ಕೆಲವರು ವಿಮಾನದಲ್ಲಿ ಹೋಗೋಕೆನೆ ಹೆದರುತ್ತಾರೆ. ಕೆಲವರು ಟ್ರೈನ್‌ನಲ್ಲಿ ಹೋಗೋದಾದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ? ಅಂದುಕೊಳ್ತಿರುತ್ತಾರೆ. ಅಂತವರಿಗೊಂದು ಈ ಸುದ್ದಿ. ಎಷ್ಟೋ ಜನರಿಗೆ ಗೊತ್ತೇ ಇಲ್ಲ, ಇಂಟರ್ ನ್ಯಾಷನಲ್ ಟ್ರಿಪ್‌ನ ರೈಲಿನಲ್ಲೂ ಹೋಗಬಹುದು ಎಂದು..

ಹೌದು, ಟ್ರೈನ್‌ನಲ್ಲಿ ವಿದೇಶಕ್ಕೆ ಹೋಗುವ ವ್ಯವಸ್ಥೆ ಇರುವ ಕೆಲವೇ ದೇಶಗಳಲ್ಲಿ ಭಾರತ ಕೂಡ ಒಂದಾಗಿದೆ. ಇನ್ನೊಂದು ವಿಷಯ ಏನಂದ್ರೆ ಈ ರೈಲು ಸಂಪರ್ಕಗಳು ಕೇವಲ ಪ್ರಯಾಣಕ್ಕಾಗಿ ಮಾತ್ರವಲ್ಲ. ಈ ವ್ಯವಸ್ಥೆಯನ್ನ ಗಡಿ ವ್ಯಾಪಾರ, ಸಾಂಸ್ಕೃತಿಕ ಬಾಂಧವ್ಯ ಮತ್ತು ಐತಿಹಾಸಿಕ ಸಂಬಂಧವನ್ನ ಗಟ್ಟಿಗೊಳಿಸೋದಕ್ಕೆ ಕೂಡ, ಬಳಸಲಾಗುತ್ತೆ. ಹಾಗಾದ್ರೆ ಯಾವೆಲ್ಲಾ ದೇಶಗಳಿಗೆ ನಾವು ರೈಲಿನ ಮೂಲಕ ಹೋಗಬೋದು ಅಂತ ನೀವು ಇಲ್ಲಿ ತಿಳಿಯಿರಿ.
ಯಾವೆಲ್ಲಾ ದೇಶಗಳಿಗೆ ರೈಲು ಮೂಲಕ ಹೋಗಬೋದು?
ರೈಲಿನಲ್ಲಿ ವಿದೇಶ ಪ್ರವಾಸ ಮಾಡುವುದಾದರೆ, ನೀವು ಕೆಲವು ದೇಶಗಳಿಗೆ ಮಾತ್ರ ಹೋಗಬಹುದು. ಅಂದರೆ, ನೇಪಾಳ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದೊಂದಿಗೆ ಭಾರತ ಅಭಿವೃದ್ಧಿಸಿದೆ. ಒಂದಷ್ಟು ಭದ್ರತಾ ಕಾರಣಗಳಿಂದ ಸದ್ಯ ಪಾಕಿಸ್ತಾನ ಮಾರ್ಗದಲ್ಲಿ ರೈಲು ಸಂಚಾರ ಇಲ್ಲ.
ನೇಪಾಳಕ್ಕೆ ರೈಲು ಸಂಪರ್ಕ:
ಆಗಲೇ ಹೇಳಿದಂತೆ ನೇಪಾಳಕ್ಕೆ ರೈಲು ಸಂಪರ್ಕ ಇದೆ. ಮುಖ್ಯವಾಗಿ ಇದು ಬಿಹಾರದ ಮಧುಬನಿ ಜಿಲ್ಲೆಯ ಗಡಿಭಾಗದಲ್ಲಿರುವ ಜಯನಗರ ರೈಲು ನಿಲ್ದಾಣದಿಂದ ಹೊರಡುತ್ತದೆ. ಈ ಸ್ಥಳದಲ್ಲಿ ರೈಲುಗಳು ನೇಪಾಳದ ಜನಕಪುರಕ್ಕೆ ತಲುಪುತ್ತದೆ. ಅಷ್ಟೇ ಅಲ್ಲ..ನೇಪಾಳದ ನೇಪಾಳ ಪ್ರವೇಶದ ಮತ್ತೊಂದು ಪ್ರಮುಖ ದ್ವಾರ ರಕ್ಸೌಲ್ ಜಂಕ್ಷನ್. ಇದು ಗಡಿಯಾಚೆಯ ನಿಲ್ದಾಣವಾಗಿದ್ದು, ಭಾರತದ ವಿವಿಧ ನಗರಗಳಿಂದ ಬರುವ ರೈಲುಗಳು ಈ ಮಾರ್ಗದ ಮೂಲಕ ನೇಪಾಳಕ್ಕೆ ಸಂಪರ್ಕ ನೀಡುತ್ತವೆ.
ಭಾರತ-ನೇಪಾಳ ನಡುವೆ ಮುಕ್ತ ಸಾರಿಗೆ ವ್ಯವಸ್ಥೆ ಇದ್ದುದರಿಂದ ರೈಲು ಸೇವೆ ಸಹ ಸಾಮಾನ್ಯವಾಗಿದೆ. ಈ ಮಾರ್ಗದ ಮೂಲಕ ಪ್ರವಾಸಿಗರು ಮತ್ತು ವ್ಯಾಪಾರಿಗಳು ಸುಲಭವಾಗಿ ದೇಶಗಳ ನಡುವಿನ ಸಂಚಾರ ಮಾಡಬಹುದು.
ಬಾಂಗ್ಲಾದೇಶಕ್ಕೆ ರೈಲು ಸಂಪರ್ಕ:
ಬಾಂಗ್ಲಾದೇಶ ಮತ್ತು ಭಾರತದ ನಡುವೆಯೂ ರೈಲು ಸಂಪರ್ಕವಿದ್ದು, ಅಲ್ಲಿಗೆ ತೆರಳಬೇಕಿರುವವರು ಪಶ್ಚಿಮ ಬಂಗಾಳದ ಪೆಟ್ರೋಪೋಲ್ ರೈಲು ನಿಲ್ದಾಣವನ್ನು ಹಿಡಿಯಬೇಕು. ಈ ನಿಲ್ದಾಣವು ಬಾಂಗ್ಲಾದೇಶದ ಖುಲ್ನಾ ಭಾಗಕ್ಕೆ ಸಂಪರ್ಕ ಹೊಂದಿದೆ. ಇಲ್ಲಿ ಪ್ರಸಿದ್ಧ "ಬಂಧನ್ ಎಕ್ಸ್‌ಪ್ರೆಸ್" ರೈಲು ಮೂಲಕ ಸಂಚರಿಸಬೇಕು.
ಗಮನಿಸಬೇಕಾದ ಮತ್ತೊಂದು ವಿಷಯ ಏನಂದ್ರೆ, ಈ ಮಾರ್ಗದಲ್ಲಿ ಪ್ರಯಾಣ ಮಾಡುವವರಿಗೆ ಪಾಸ್‌ಪೋರ್ಟ್ ಮತ್ತು ವೀಸಾ ಅಗತ್ಯವಿದೆ
ಇನ್ನು ಉತ್ತರ ದಿನಾಜ್‌ಪುರ ಜಿಲ್ಲೆಯ ರಾಧಿಕಾಪುರ ನಿಲ್ದಾಣವೂ ಕೂಡ ಬಾಂಗ್ಲಾದೇಶಕ್ಕೆ ತಲುಪಲು ಮಹತ್ವದ ಕೇಂದ್ರವಾಗಿದೆ. ಇಲ್ಲಿ ಸರಕು ಹಾಗೂ ಪ್ರಯಾಣಿಕ ರೈಲುಗಳು ಎರಡೂ ದೇಶಗಳ ನಡುವೆ ಸಂಚರಿಸುತ್ತವೆ. ಹಲ್ದಿಬರಿ ರೈಲು ನಿಲ್ದಾಣವು ಬಾಂಗ್ಲಾದೇಶ ಗಡಿಯ ಹತ್ತಿರದಲ್ಲಿದ್ದು, ಚಿಲಹಟಿ ಮಾರ್ಗದ ಮೂಲಕ ಢಾಕಾ ಸೇರಿದಂತೆ ಹಲವು ಭಾಗಗಳಿಗೆ ಸಂಪರ್ಕ ನೀಡುತ್ತದೆ. ಈ ಮಾರ್ಗ ವ್ಯಾಪಾರ ಮತ್ತು ಪ್ರವಾಸೋದ್ಯಮದ ದೃಷ್ಟಿಯಿಂದ ಅತ್ಯಂತ ಉಪಯುಕ್ತವಾಗಿದೆ.
ಪಾಕಿಸ್ತಾನಕ್ಕೆ ರೈಲು ಸಂಪರ್ಕ:
ಪಾಕಿಸ್ತಾನಕ್ಕೆ ಭಾರತದಿಂದ ಸದ್ಯಕ್ಕೆ ನೇರ ರೈಲು ಸಂಪರ್ಕ ಇಲ್ಲ. ಇದು ಈಗ ಸ್ಥಗಿತಗೊಂಡಿದೆ. ಆದರೆ ಮೊದಲು ರೈಲು ಮೂಲಕ ತೆರಳುತ್ತಿದ್ದವರು, ಅಟ್ಟಾರಿ ರೈಲು ನಿಲ್ದಾಣ ತಲುಪಬೇಕಿತ್ತು. ಏಕೆಂದರೆ ಇದು ಪ್ರಮುಖ ಕೇಂದ್ರವಾಗಿತ್ತು. ಇಲ್ಲಿಂದ ಲಾಹೋರ್‍ಗೆ ಸಂಜೋತಾ ಎಕ್ಸ್‌ಪ್ರೆಸ್ ಸಂಚರಿಸುತ್ತಿತ್ತು. ಆದ್ರೆ ಹಲವು ಭದ್ರತಾ ದೃಷ್ಟಿಯಿಂದ ಈಗ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.
ಹೀಗೆ ಈ ದೇಶಗಳಿಗೆ ಭಾರತದಿಂದ ರೈಲುಗಳ ಮೂಲಕ ತೆರಳಬಹುದು. ಇನ್ನು ಭಾರತದ ಅಂತಾರಾಷ್ಟ್ರೀಯ ರೈಲು ಸೇವೆಗಳು ಪ್ರಯಾಣ, ವ್ಯಾಪಾರ ಮತ್ತು ಸಾಂಸ್ಕೃತಿಕ ವಿನಿಮಯಗಳನ್ನು ಸುಲಭಗೊಳಿಸಲು ಸಹಾಯಕವಾಗುತ್ತವೆ. ಇದರಿಂದ ವ್ಯಾಪಾರಿಗಳು ಸರಕು ಸಾಗಿಸಲು, ಪ್ರವಾಸಿಗರು ಪ್ರವಾಸ ಮಾಡಲು, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಈ ಮಾರ್ಗಗಳನ್ನು ಬಳಸುತ್ತಾರೆ.
ಇದಿಷ್ಟೇ ಅಲ್ಲ ರೈಲುಗಳು ಗಡಿಯಾಚೆ ಪ್ರವೇಶದ ಪ್ರಮುಖ ದ್ವಾರಗಳಾಗಿ ಕಾರ್ಯನಿರ್ವಹಿಸುತ್ತವೆ. ರೈಲುಗಳು ಗಡಿಯಾಚೆ ಪ್ರವೇಶದ ಪ್ರಮುಖ ದ್ವಾರಗಳಾಗಿ ಕಾರ್ಯನಿರ್ವಹಿಸುತ್ತವೆ. ನೇಪಾಳ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದೊಂದಿಗೆ ಸಂಪರ್ಕದೊಂದಿಗೆ ವ್ಯಾಪಾರ ಸುಗಮಗೊಳ್ಳುತ್ತದೆ. ಪಾಸ್‌ಪೋರ್ಟ್ ಮತ್ತು ವೀಸಾ ಅಗತ್ಯವಿರುವ ಮಾರ್ಗಗಳಲ್ಲಿ ಸರಿಯಾದ ದಾಖಲೆಗಳು ಪ್ರಮುಖವಾಗಿವೆ. ಹಾಗೆಯೇ ರೈಲು ಸಂಪರ್ಕವು ದೇಶಗಳ ನಡುವೆ ಭದ್ರತಾ, ಸಾಂಸ್ಕೃತಿಕ ಮತ್ತು ಆರ್ಥಿಕ ಬಾಂಧವ್ಯವನ್ನು ಬಲಪಡಿಸುತ್ತದೆ.
ಒಟ್ನಲ್ಲಿ ಭಾರತದ ಈ ಅಂತಾರಾಷ್ಟ್ರೀಯ ರೈಲು ಸೇವೆಗಳು ದೇಶದ ಸಂಬಂಧಗಳನ್ನು ವಿಶ್ವ ಮಟ್ಟದಲ್ಲಿಯೂ ಸಶಕ್ತಗೊಳಿಸುತ್ತವೆ. ಹೊಸ ಮಾರ್ಗಗಳನ್ನು ಅಭಿವೃದ್ಧಿಪಡಿಸುವ ಮೂಲಕ, ದೇಶಗಳ ನಡುವಿನ ಪ್ರವಾಸ ಮತ್ತು ವ್ಯಾಪಾರ ಇನ್ನಷ್ಟು ಸುಲಭವಾಗುತ್ತಿದೆ.
More From GoodReturns

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Lunar Eclipse 2026: ವರ್ಷದ ಮೊದಲ ಚಂದ್ರಗ್ರಣ...ಯಾವ ರಾಶಿಯವರಿಗೆ ಶುಭ, ಯಾವ ರಾಶಿಯವರಿಗೆ ಎಚ್ಚರಿಕೆ? ತಿಳಿಯಿರಿ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Total Lunar Eclipse: ಭಾರತದಲ್ಲಿ ಅಪರೂಪದ ರಕ್ತ ಚಂದ್ರಗ್ರಹಣ…ಮಾರ್ಚ್ 3ರಂದು ಯಾವಾಗ ವೀಕ್ಷಿಸಬೇಕು? ತಿಳಿಯಿರಿ

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

ಏಪ್ರಿಲ್ 1ರಿಂದ ಈ ರಾಜ್ಯದ ಸರ್ಕಾರಿ ಜನರಿಗೆ ಹೊಸ ಪಿಂಚಣಿ...ಕೊನೆಯ ಸಂಬಳದ 50%ನಷ್ಟು ಖಚಿತ! ಈ ಗುಡ್ನ್ಯೂಸ್ ಯಾರಿಗೆ?

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

Silver Rate Today: ಬೆಳ್ಳಿ ದರಕ್ಕೂ ತಟ್ಟಿದ ಇಸ್ರೇಲ್-ಇರಾನ್ ವಾರ್ ಬಿಸಿ! ಬೆಲೆ ಭಾರೀ ಏರಿಕೆ

Silver Rate Today: 3 ದಿನದ ನಂತರ ಗಗನಕ್ಕೇರಿದ ಬೆಳ್ಳಿ ದರ! ದಿಢೀರ್ 10,000 ರೂ. ಹೆಚ್ಚಳ

Gold Guidelines: ಭಾರತದಲ್ಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು? ಕಾನೂನಾತ್ಮಕವಾಗಿ ನಿರ್ವಹಿಸುವುದು ಹೇಗೆ ತಿಳಿಯಿರ

Investment: ಹೂಡಿಕೆ ತಡವಾಗಿ ಮಾಡ್ತಿದ್ದೀರ? 35ರ ನಂತರ ಹೇಗೆ ಸಂಪತ್ತು ನಿರ್ಮಿಸಬೇಕು ಎಂದು ಇಲ್ಲಿ ತಿಳಿಯಿರಿ



Click it and Unblock the Notifications