ಭಾರತದ ಪ್ರಧಾನಿ ನರೇಂದ್ರ ಮೋದಿ ಸ್ವಾವಲಂಬಿ ಭಾರತ ನಿರ್ಮಾಣವಾಗಬೇಕು ಎಂಬ ಕನಸಿನ ಬೀಜ ಬೀತ್ತಿ ವರ್ಷಗಳೇ ಕಳೆದಿವೆ. ಈ ನಿಟ್ಟಿನಲ್ಲಿ ಭಾರತ ದಾಪು ಗಾಲು ಇಟ್ಟಿದೆ. ಭಾರತದಲ್ಲಿ ಈಗ ಹಲವು ಪ್ರತಿಷ್ಠಿತ ಕಂಪನಿಗಳು ತಮ್ಮ ಶಾಖೆಗಳನ್ನು ಓಪನ್ ಮಾಡಿವೆ. ಅಲ್ಲದೆ ದಕ್ಷಿಣ ಏಷ್ಯಾದಲ್ಲಿ ದೊಡ್ಡ ಮದ್ದು ಗುಂಡುಗಳ ಕಾರ್ಖಾನೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಭಾರತ ದೃಷ್ಟಿ ನೆಟ್ಟಿದೆ.
ಈಗ ಭಾರತ ಇನ್ನೊಂದು ಹೆಜ್ಜೆ ಮುಂದೆ ಇಟ್ಟಿದ್ದು, ಸ್ವಾವಲಂಬಿಯಾಗುವ ಕನಸು ಸಾಕಾರಗೊಳ್ಳುವಂತೆ ಮಾಡುತ್ತಿದೆ. ಮೋದಿ ಮೇಕ ಇನ್ ಇಂಡಿಯಾ ಯೋಜನೆಯನ್ನು ಜಾರಿ ತಂದ ಮೇಲೆ ಭಾರತದಲ್ಲಿಯ ಹಲವು ಸಣ್ಣ, ಮಧ್ಯಮ ಕೈಗಾರಿಕೆಗಳು ಸಹ ಭಾರತದ ಏಳಿಗೆಗೆ ಕೈ ಜೋಡಿಸಿವೆ. ರಕ್ಷಣಾ, ಮೊಬೈಲ್, ಹಾರ್ಡ್‌ವೇರ್, ಫಾರ್ಮಾ ನಂತರ ಈಗ ಭಾರತವು ಸೆಮಿಕಂಡಕ್ಟರ್ ಉತ್ಪಾದನೆಗೆ ದೊಡ್ಡ ಹೂಡಿಕೆಯನ್ನು ಪಡೆದಿದೆ. ಇದು ಭಾರತದ ಪಾಲಿಗೆ ದೊಡ್ಡ ಸಾಧನೆ.

ಸೆಮಿಕಂಡಕ್ಟರ್‌ಗಳಿಗಾಗೆ ಭಾರತವು ಚೀನಾ, ಅಮೆರಿಕ ಮತ್ತು ಜಪಾನ್‌ನ ಮೇಲೆ ಅವಲಂಬಿತವಾಗಿದೆ. ಈಗ ಭಾರತವೇ ಸೆಮಿಕಂಡಕ್ಟರ್ ತಯಾರಿಕಾ ಕ್ಷೇತ್ರದಲ್ಲಿ ದೊಡ್ಡ ಚಾಪು ಹೊರಟಿದೆ. ಈ ಕುರಿತಾದ ಮಾಹಿತಿಯನ್ನು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ನೀಡಿದ್ದಾರೆ.
ಸೆಮಿಕಂಡಕ್ಟರ್ ಪ್ರಗತಿ
ಕಳೆದ ಎರಡು ವರ್ಷಗಳಲ್ಲಿ ಭಾರತವು ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದೆ. ಈ ಅವಧಿಯಲ್ಲಿ ಸರ್ಕಾರವು ಜಾಗತಿಕ ಚಿಪ್ ತಯಾರಕರಿಂದ 2.50 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆ ಪ್ರಸ್ತಾವನೆಗಳನ್ನು ಸ್ವೀಕರಿಸಿದೆ ಎಂದು ಅವರು ಹೇಳಿದರು.
ಚಂದ್ರಶೇಖರ್ ಅವರು 2022 ರಲ್ಲಿ ಪ್ರಧಾನ ಮಂತ್ರಿಗಳು ಸೆಮಿಕಂಡಕ್ಟರ್ ನೀತಿಯನ್ನು ಘೋಷಿಸಿದ್ದು, ಇದು ಜಾಗತಿಕ ಗಮನವನ್ನು ಸೆಳೆದಿದೆ. ಈ ನೀತಿಯಿಂದಲೇ ಇಂದು ಭಾರತ ಸರ್ಕಾರವು ಜಾಗತಿಕ ಸೆಮಿಕಂಡಕ್ಟರ್ ಕಂಪನಿಗಳಿಂದ 2.50 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಪ್ರಸ್ತಾವನೆಗಳನ್ನು ಸ್ವೀಕರಿಸಿದೆ.
ಪುಣೆಯಲ್ಲಿ ಆಯೋಜಿಸಲಾದ 'ಅಭಿವೃದ್ಧಿ ಹೊಂದಿದ ಭಾರತದ ರಾಯಭಾರಿ ಸಭೆ'ಯನ್ನು ಉದ್ದೇಶಿಸಿ ಮಾತನಾಡಿದ ಚಂದ್ರಶೇಖರ್, ಭಾರತವು ತನ್ನ ನೀತಿಗಳ ವಿಷಯದಲ್ಲಿ ವಿಶ್ವದಾದ್ಯಂತದ ದೇಶಗಳಿಗೆ ಸ್ಫೂರ್ತಿಯಾಗಿದೆ ಎಂದು ಹೇಳಿದರು.

ಶತಕೋಟಿ ಡಾಲರ್ ಮೌಲ್ಯದ ಎರಡು ಸಂಪೂರ್ಣ ಅಭಿವೃದ್ಧಿ ಹೊಂದಿದ ಸೆಮಿಕಂಡಕ್ಟರ್ ಪ್ಲಾಂಟ್‌ಗಳನ್ನು ಶೀಘ್ರದಲ್ಲೇ ಭಾರತದಲ್ಲಿ ಸ್ಥಾಪಿಸಲಾಗುವುದು ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ಪ್ರಸಾರ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಇದಲ್ಲದೆ, ಹಲವಾರು ಚಿಪ್ ಅಸೆಂಬ್ಲಿ ಮತ್ತು ಪ್ಯಾಕೇಜಿಂಗ್ ಘಟಕಗಳನ್ನು ಸ್ಥಾಪಿಸಲು ಹೂಡಿಕೆಯನ್ನು ಪ್ರಸ್ತಾಪಿಸಲಾಗಿದೆ ಎಂದಿದ್ದಾರೆ.
ಯಾವ ಯಾವ ಕಂಪನಿಗಳಿಂದ ಪ್ರಸ್ತಾಪನೆ?
ಎರಡು ಯೋಜನೆಗಳಲ್ಲಿ ಎಂಟು ಬಿಲಿಯನ್ ಡಾಲರ್‌ಗಳ ಒಂದು ಪ್ರಸ್ತಾವನೆಯು ಇಸ್ರೇಲ್‌ನ ಟವರ್ ಸೆಮಿಕಂಡಕ್ಟರ್‌ಗಳಿಂದ ಮತ್ತು ಇನ್ನೊಂದು ಪ್ರಸ್ತಾವನೆಯು ಟಾಟಾ ಗ್ರೂಪ್‌ನಿಂದ ಬಂದಿದೆ ಎಂದು ಸಚಿವರು ಹೇಳಿದರು. ಮುಂದಿನ 5-10 ವರ್ಷಗಳಲ್ಲಿ ದೇಶದಲ್ಲಿ ಸೆಮಿಕಂಡಕ್ಟರ್ ತಯಾರಿಕೆಯು ವೇಗವಾಗಿ ಬೆಳೆಯುವ ನಿರೀಕ್ಷೆಯಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಎಸ್ ಕೃಷ್ಣನ್ ಹೇಳಿದ್ದಾರೆ.
ಈ ಉದ್ಯಮದಲ್ಲಿ ಎಷ್ಟು ಉದ್ಯೋಗ ಸೃಷ್ಟಿ ಸಾಧ್ಯತೆ
ದೇಶದಲ್ಲಿ ಎಲೆಕ್ಟ್ರಾನಿಕ್ಸ್ ತಯಾರಿಕಾ ವಲಯದಲ್ಲಿ ಸುಮಾರು 20 ಲಕ್ಷ ಮಂದಿ ಉದ್ಯೋಗದಲ್ಲಿದ್ದು, ಈ ವಲಯದ ಉದ್ಯೋಗಗಳ ಸಂಖ್ಯೆ ಸುಮಾರು 45 ಲಕ್ಷಕ್ಕೆ ತಲುಪಬೇಕೆಂದು ಸರ್ಕಾರ ಬಯಸುತ್ತದೆ ಎಂದು ಹೇಳಿದರು.


Click it and Unblock the Notifications