ನವದೆಹಲಿ, ಫೆಬ್ರವರಿ 3: ಫೆಬ್ರವರಿ 1 ರಂದು ನಡೆದ ಕೇಂದ್ರ ಮಧ್ಯಂತರ ಬಜೆಟ್ನಲ್ಲಿ ಭಾರತ ಸರ್ಕಾರವು ಭಾರತದ ಸಾಲವು 2024 ರ ಮಾರ್ಚ್ 31 ಕ್ಕೆ ರೂ 168,72,554.16 ಕೋಟಿ ತಲುಪಲಿದೆ ಎಂದು ತನ್ನ ಬಜೆಟ್ನಲ್ಲಿ ಹೇಳಿಕೆ ಬಿಡುಗಡೆ ಮಾಡಿದೆ.
ನರೇಂದ್ರ ಮೋದಿಯವರ ಸರ್ಕಾರ ಬರುವುದಕ್ಕೂ ಮುಂಚೆ ಬಾರತದ ಸಾಲವು 2014 ರ ಮಾರ್ಚ್ 31 ಕ್ಕೆ ರೂ 55,87,149.33 ಕೋಟಿ ಇತ್ತು ಎಂದು ಅವತ್ತಿನ ಬಜೆಟ್ನಲ್ಲಿ ವರದಿ ಮಾಡಲಾಗಿದೆ. ಆದರೆ ಖುಷಿಯ ವಿಚಾರವೆಂದರೆ ನಮ್ಮ ಬಾಹ್ಯ ಸಾಲವು ಹೆಚ್ಚಳವಾಗಿಲ್ಲ ಕೇವಲ ಆಂತರಿಕ ಸಾಲದಲ್ಲಿ ಮಾತ್ರ ವಿಪರೀತ ಎನ್ನುವಷ್ಟು ಹೆಚ್ಚಳವಾಗಿದೆ.

ಇಷ್ಟು ಸಾಲ ಹೇಗೆ ಹೆಚ್ಚಳವಾಯಿತು ಎಂಬುದೇ ಯಕ್ಷ ಪ್ರಶ್ನೆಯಾಗಿ ಉಳಿದಿದೆ, ಇದೆ ವಿಷಯವಾಗಿ ಕಳೆದ ಅಧಿವೇಶನದಲ್ಲಿ ವಿರೋಧ ಪಕ್ಷವು ಶ್ವೇತ ಪತ್ರ ಹೊರಡಿಸುವಂತೆ ಆಡಳಿತ ಪಕ್ಷವನ್ನು ಆಗ್ರಹಿಸಿತ್ತು, ಆದರೆ ಈ ವಿಷಯವು ಎಂದಿನಂತೆ ವಿಷಯಾಂತರವಾಗಿ ಅಲ್ಲಿಗೆ ಮುಗಿದಿತ್ತು. ಮತ್ತೆ ಇವಾಗ ಇದೆ ವಿಷಯ ಪ್ರತಿಧ್ವನಿಸುತ್ತಿದ್ದು ಸಾಮಾನ್ಯ ನಾಗರೀಕರಾದ ನಮಗೆ ಇದರ ಬಗ್ಗೆ ಅರಿವು ಇರಬೇಕಾಗಿದೆ.ಮಾತೆತ್ತಿದರೆ ಕೋವಿಡ್ ಎಂಬ ಮಹಾಮಾರಿಯ ಕಾರಣ ಕೊಡುವ ಸರ್ಕಾರಗಳು ಅದೊಂದೇ ಕಾರಣ ಇಟ್ಟುಕೊಂಡು ಸಾಮಾನ್ಯ ಜನರಿಗೆ ಟೋಪಿ ಹಾಕಿಕೊಂಡೆ ಬರುತ್ತಿದ್ದಾವೆ. ಇದರ ಬಗ್ಗೆ ಭಾರತದ ಯಾವುದೇ ಮಾಧ್ಯಮಗಳು ಧ್ವನಿ ಎತ್ತದೆ ಇರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ ಎಂದು ಹೇಳಬಹುದು.
ಸಾಮಾನ್ಯ ನಾಗರೀಕರಾದ ನಮಗೆ ಮೂಡುವ ಕೆಲವು ಪ್ರಶ್ನೆಗಳೆಂದರೆ ನಿಜವಾಗಲೂ ಈ ಸರ್ಕಾರಗಳು ಸಾಮಾನ್ಯ ಜನಕ್ಕೆ ಸಹಾಯ ಮಾಡುತಿದ್ದಾವ ಅಥವಾ ಕೇವಲ ಮೂಗಿಗೆ ತುಪ್ಪ ಸವುರುತ್ತಿದಾವ? ಬನ್ನಿ ನಮ್ಮಂತಹ ಸಾಮಾನ್ಯ ಜನರಲ್ಲಿ ಪಕ್ಷಾತೀತವಾಗಿ ಮೂಡುವಂತಹ ಕೆಲವು ಪ್ರಶ್ನೆಗಳನ್ನು ನೋಡೋಣ ಬನ್ನಿ..
1. ನಮ್ಮ ದೇಶದಲ್ಲಿ GST ಯಿಂದ ತಿಂಗಳಿಗೆ ರೂ 1.72 ಕೋಟಿ ಸಂಗ್ರಹವಾಗುತ್ತಿದೆ ಅದು ಏನಾಗುತ್ತಿದೆ?
2. ನೀತಿ ಆಯೋಗ ವರದಿಯ ಪ್ರಕಾರ ಬಡತನ ರೇಖೆಗಿಂತ ಕೆಳಗಿದ್ದ ಸುಮಾರು 14 ಕೋಟಿಗೂ ಹೆಚ್ಚು ಜನ ಇವತ್ತು ಬಡತನದಿಂದ ಮೇಲೆ ಬಂದಿದ್ದಾರೆ ಹಾಗಾದರೆ ಅವರಿಗೆ ನೀಡುತ್ತಿದ್ದ ವಿಶೇಷ ಸವಲತ್ತುಗಳು ಕಡಿಮೆಯಾಗಬೇಕಲ್ಲವೇ?
3. ಕೋವಿಡ್ ಮಹಾಮಾರಿಯನ್ನು ಎದುರಿಸಲು ಜನಗಳು ಮತ್ತು ಸಂಘ ಸಂಸ್ಥೆಗಳು ಪಿಎಂ ಕೇರ್ಸ್ ಗೆ ನೀಡಿದ ಕೊಟ್ಯಂತರ ರೂಪಾಯಿ ಹಣ ಎಲ್ಲಿ ಹೋಯಿತು? ಸೋಜಿಗವೆಂದರೆ ಅದರ ಲೆಕ್ಕ ಕೇಳುವ ಅಧಿಕಾರ ಇಲ್ಲ ಎಂದು ಕೋರ್ಟ್ ಆದೇಶ ಬೇರೆ ಆಗಿದೆ
4. ಸುಸಜ್ಜಿತ ರಸ್ತೆಗಳನ್ನು ಮಾಡಿದ್ದೀವಿ ಎಂದು ಗರ್ವದಿಂದ ಹೇಳಿಕೊಳ್ಳುವ ಸರ್ಕಾರಗಳು ಜನರಿಂದಲೇ ಟೋಲ್ ರೂಪದಲ್ಲಿ ಮತ್ತು ರಸ್ತೆ ತೆರಿಗೆ ರೂಪದಲ್ಲಿ ಕೊಟ್ಯಂತರ ರೂಪಾಯಿ ಹಣ ಸಂಗ್ರಹ ಏಕೆ ಮಾಡುತ್ತಿದ್ದಾವೆ ಆ ಹಣ ಎಲ್ಲಿ ಹೋಗುತ್ತಿದೆ?
5. ಅವರು ಇವರ ಮೇಲೆ ಹಾಗೆ ಇವರು ಅವರ ಮೇಲೆ ಆರೋಪ ಮಾಡಿಕೊಂಡೆ ಇರುವ ಪಕ್ಷಗಳು ಅದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿರುವುದು ಬೆರೆಳೆಣಿಕೆ ಅಷ್ಟೇ ಎನ್ನಬಹುದು.
6. ಅದು ಫ್ರೀ ಇದು ಫ್ರೀ ಪೆಟ್ರೋಲ್ ಅಷ್ಟಾಗುತ್ತೆ ಡೀಸೆಲ್ ಇಷ್ಟಾಗುತ್ತೆ ಎಂದು ಬಣ್ಣ ಬಣ್ಣದ ಮಾತುಗಳನ್ನು ಆಡುವ ರಾಜಕಾರಣಿಗಳು ಎಲ್ಲ ರೀತಿಯ ತೆರಿಗೆಗಳನ್ನು ಸಾಮಾನ್ಯ ಜನರ ಮೇಲೆ ಹಾಕುತ್ತಿರುವುದು ಯಾಕೆ?
7. ಪ್ರತಿಯೊಬ್ಬ ಭಾರತೀಯ ನಾಗರೀಕನಿಗು ಉಚಿತ ಮತ್ತು ಉತ್ತಮ ಶಿಕ್ಷಣ, ಉಚಿತ ಮತ್ತು ಆಧುನಿಕ ಚಿಕಿತ್ಸೆ, ಪ್ರತಿಯೊಬ್ಬರಿಗೂ ನೌಕರಿ, ಪ್ರತಿಯೊಂದು ಕುಟುಂಬಕ್ಕೂ ಆರ್ಥಿಕ ಹಾಗು ಸಾಮಾಜಿಕ ಭದ್ರತೆ ಒದಗಿಸುವುದು ಯಾವಾಗ?
8. ಯಾರೋ ಒಬ್ಬರು ರಾಜಕಾರಣಿಯೊಬ್ಬರು ಇತ್ತೀಚಿಗೆ ಸಾರ್ವಜನಿಕ ಸಭೆಯೊಂದರಲ್ಲಿ ನೀನೆಷ್ಟು ತೆರಿಗೆ ಕಟ್ಟುತ್ತೀಯ ಎಂದು ದಬಾಯಿಸುತ್ತಿದ್ದರು ಹಾಗಾಗಿ ಪ್ರತಿಯೊಬ್ಬ ಭಾರತೀಯ ನಾಗರೀಕನೂ ತಿಳಿದುಕೊಳ್ಳಬೇಕಾದ ವಿಷಯವೇನೆಂದರೆ ತೆರಿಗೆ ಎಂದರೆ ಕೇವಲ ಆದಾಯ ತೆರಿಗೆ ಅಷ್ಟೇ ಅಲ್ಲ ನಾವೆಲ್ಲಾ ನಮ್ಮ ತಲೆಯಿಂದ ಹಿಡಿದು ಕಾಲು ಪಾದದವರೆಗೂ ಉಪಯೋಗಿಸುವ ಪ್ರತಿಯೊಂದು ವಸ್ತುವಿಗೂ ಕೂಡ ೫% ಇಂದ ೨೮% ತೆರಿಗೆ ಕಟ್ಟುತ್ತೇವೆ ಎಂದು ಅವರಿಗೆ ಮನವರಿಕೆ ಮಾಡಿಕೊಡಬೇಕು ಮತ್ತು ನಾವು ಕಟ್ಟುತ್ತಿರುವ ತೆರಿಗೆಯ ಉಪಯೋಗ ಎಲ್ಲೆಲ್ಲಿ ಆಗುತ್ತಿದೆ ಎಂದು ಧೈರ್ಯವಾಗಿ ಕೇಳಬೇಕು.
ಇಲ್ಲಿ ನಾವು ಯಾವುದೇ ಪಕ್ಷದ ಪರವಾಗಿ ಅಥವಾ ವಿರೋಧವಾಗಿ ಮಾತಾನಾಡುತ್ತಿಲ್ಲ ಒಬ್ಬ ಪ್ರಜ್ಞಾವಂತ ಮತ್ತು ಜವಾಬ್ದಾರಿಯುತ ನಾಗರೀಕನಾಗಿ ಈ ಎಲ್ಲ ಪ್ರಶ್ನೆಗಳನ್ನು ಕೇಳುವುದು ಮತ್ತು ತಿಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ,ಇನ್ನು ಮೇಲಾದರೂ ನಾವುಗಳು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ, ಯಾವುದೇ ಜಾತಿ ಬೇದ ಮಾಡದೆ ಎಲ್ಲರು ನಮ್ಮ ಹಕ್ಕುಗಳನ್ನು ಪಕ್ಷಾತೀತವಾಗಿ ಕೇಳಿ ಅಧಿಕಾರಯುತವಾಗಿ ಪಡೆಯಬೇಕು ಹೀಗೆ ಕೇಳಿ ಪಡೆಯುವುದರಿಂದ ಕೇವಲ ದೇಶ ಮಾತ್ರ ಮುಂದುವರಿಯುತ್ತಿದೆ ಎಂದು ಅವರಿವರು ಹೇಳುವುದನ್ನು ಕೇಳಿಕೊಂಡು ಖುಷಿ ಪಡುವ ಬದಲು ದೇಶದ ಜೊತೆ ದೇಶದ ಪ್ರತಿಯೊಬ್ಬ ನಾಗರೀಕನೂ ಸಮಾನವಾಗಿ ಮುಂದುವೆರೆಯಬಹುದು.
More From GoodReturns

Biggest Airport: ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಸಂಚಾರಕ್ಕೆ ಸಿದ್ಧ; 45 ದಿನದೊಳಗೆ ಆರಂಭ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

LPG ಪೂರೈಕೆಯಲ್ಲಿ ಕೊರತೆ; ದೇಶದಲ್ಲಿ ಎಲ್ಪಿಜಿ ಉತ್ಪಾದನೆ 10% ಹೆಚ್ಚಳ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ



Click it and Unblock the Notifications