ಪ್ರಸ್ತುತ ಭಾರತದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express Train) ಭಾರೀ ಜನಪ್ರಿಯತೆ ಪಡೆದುಕೊಂಡಿದೆ. ತನ್ನ ದಕ್ಷ ಸೇವೆ, ವೇಗದ ಪ್ರಯಾಣದಿಂದಾಗಿ ಭಾರೀ ಬೇಡಿಕೆಯಲ್ಲಿದೆ. ಈಗಾಗಲೇ ಸಿಟ್ಟಿಂಗ್ ಸೀಟುಗಳನ್ನು ಹೊಂದಿದ್ದ ವಂದೇ ಭಾರತ್ ರೈಲುಗಳು, ಇದೀಗ ಹೊಸ ಮೈಲಿಗಲ್ಲು ಸೃಷ್ಟಿಸಲು ಸಜ್ಜಾಗಿದೆ. ಅಂದರೆ ಇನ್ಮೇಲೆ ವಂದೇ ಭಾರತ್ ಸ್ಲೀಪರ್ ರೈಲು (Vande Bharat Sleeper Train) ಕೂಡಾ ಕಾರ್ಯಾರಂಭ ಮಾಡಲಿದೆ.

ಭಾರತೀಯ ರೈಲ್ವೇ (Indian Railways) 'ವಂದೇ ಭಾರತ್ ಸ್ಲೀಪರ್' ರೈಲಿನ ಪರೀಕ್ಷೆ, ಪ್ರಯೋಗ, ಸುರಕ್ಷತಾ ಪ್ರಮಾಣೀಕರಣ ಪ್ರಕ್ರಿಯೆಗಳನ್ನು ಈಗಾಗಲೇ ಪೂರ್ಣಗೊಳಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಗುವಾಹಟಿ-ಕೋಲ್ಕತ್ತಾ ನಡುವೆ ಇದರ ಮೊದಲ ಸೇವೆ ಆರಂಭವಾಗಲಿದೆ ಎಂದು ವರದಿಯಾಗಿದೆ. ಇನ್ನು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಈ ಕುರಿತು ಗುರುವಾರ ಮಾಹಿತಿ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಶೀಘ್ರವೇ ರೈಲಿಗೆ ಹಸಿರು ನಿಶಾನೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಶೀಘ್ರವೇ ವಂದೇ ಭಾರತ್ ಸ್ಲೀಪರ್ ರೈಲು!
ಅಶ್ವಿನಿ ವೈಷ್ಣವ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಂದಿನ 15-20 ದಿನಗಳಲ್ಲಿ ಸೇವೆ ಆರಂಭವಾಗಲಿದೆ ಎಂದು ಹೇಳಿದ್ದಾರೆ. ಚೇರ್ ಕಾರ್ ಆವೃತ್ತಿಯ ಪ್ರಯೋಗ ಯಶಸ್ವಿಯಾದ ನಂತರ, ಇದೀಗ ಕೊನೆಗೂ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಮುಕ್ತವಾಗಿದೆ. 1,000 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರದ ಪ್ರಯಾಣಕ್ಕಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದರು.
ವೇಗ, ಸುರಕ್ಷಿತ, ಆರಾಮದಾಯಕ ರಾತ್ರಿ ಪ್ರಯಾಣವೇ ಈ ರೈಲಿನ ಮುಖ್ಯ ಗುರಿ. ಸುಧಾರಿತ ಸಸ್ಪೆನ್ಷನ್, ಆಧುನಿಕ ಸ್ಲೀಪರ್ ಕೋಚ್‌ಗಳು ಹಾಗೂ ಸುರಕ್ಷತಾ ವ್ಯವಸ್ಥೆಗಳ ಅಳವಡಿಯೊಂದಿಗೆ ದೂರದ ಪ್ರಯಾಣ ಮಾಡುವವರಿಗೆ ಇದು ತುಂಬಾನೇ ಅನುಕೂಲವಾಗಲಿದೆ.
ಹೇಗಿದೆ ಸ್ಲೀಪರ್ ರೈಲಿನ ದರ?
ಗುವಾಹಟಿ-ಹೌರಾ ಮಾರ್ಗಕ್ಕೆ 3AC ದರ ಸುಮಾರು ₹2,300 ರೂ. ಇರಬಹುದು ಎಂದು ನಿರೀಕ್ಷಿಸಿಲಾಗಿದೆ. ಅದೇ ರೀತಿ 2AC ದರ ₹3,000, ಫಸ್ಟ್ AC ದರ ಸುಮಾರು ₹3,600 ರೂ. ಇರಬಹುದು ಎಂದು ನಿರೀಕ್ಷಿಸಲಾಗಿದೆ. ಅಲ್ಲದೇ ವಿಮಾನಯಾನ ದರಗಳು ₹6,000-₹10,000 ಇರುವುದರಿಂದ, ಅದಕ್ಕೆ ಹೋಲಿಸಿದ್ರೆ, ವಂದೇ ಭಾರತ್ ಸ್ಲೀಪರ್ ರೈಲು ಕೈಗೆಟುಕುವ ದರದಲ್ಲಿ ಜನರಿಗೆ ಲಭ್ಯವಾಗಲಿದೆ ಎಂದು ರೈಲ್ವೇ ಸಚಿವರು ಹೇಳಿದ್ದಾರೆ.
12 ಸ್ಲೀಪರ್ ರೈಲುಗಳ ಆಗಮನ
ಸುಮಾರು 12 ವಂದೇ ಭಾರತ್ ಸ್ಲೀಪರ್ ರೈಲುಗಳು ಈ ವರ್ಷಾಂತ್ಯದ ವೇಳೆ ರೈಲ್ವೇ ಜಾಲಕ್ಕೆ ಎಂಟ್ರಿಯಾಗಲಿದೆ ಎಂದು ಹೇಳಲಾಗಿದೆ. ಅಲ್ಲದೇ ಕೋಟಾ-ನಗ್ಡಾ ವಿಭಾಗದಲ್ಲಿ ರೈಲ್ವೇ ಸುರಕ್ಷತಾ ಆಯುಕ್ತರು ನಡೆಸಿದ ಮೇಲ್ವಿಚಾರಣೆ ಪ್ರಕಾರ, ಸ್ಲೀಪರ್ ರೈಲು ಅಂತಿಮ ಹೈ-ಸ್ಪೀಡ್ ಪ್ರಯೋಗವನ್ನು ಪೂರ್ಣಗೊಳಿಸಿತು.
ಈ ಪ್ರಯೋಗದಲ್ಲಿ, ವಂದೇ ಭಾರತ್ ಸ್ಲೀಪರ್ 180 kmph ವೇಗ ತಲುಪಿತು. ಬ್ರೇಕಿಂಗ್, ರೈಡಿಂಗ್, ಕಂಪನ, ಸುರಕ್ಷತಾ ವ್ಯವಸ್ಥೆಗಳು ಮತ್ತು ತುರ್ತು ಪ್ರತಿಕ್ರಿಯೆ ಸೇರಿದಂತೆ ಎಲ್ಲಾ ವಿಧದಲ್ಲ ಪರೀಕ್ಷಿಸಲಾಗಿದೆ. ಈ ಎಲ್ಲಾ ಮಾನದಂಡಗಳಲ್ಲೂ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಯೋಗ್ಯ ಎಂದು ಪರಿಗಣಿಸಿದೆ..
ವಂದೇ ಭಾರತ್ ರೈಲಿನ ವಿನ್ಯಾಸ
ದೂರದ ಪ್ರಯಾಣ ಮಾಡುವ ಪ್ರಯಾಣಿಕರ ಅನುಕೂಲಕ್ಕಾಗಿ ವಿನ್ಯಾಸಗೊಳಿಸಿದ 16 ಕೋಚ್‌ಗಳ ಸ್ಲೀಪರ್ ರೇಕ್, ಆರಾಮದಾಯಕ ಬರ್ತ್‌ಗಳು, ಆಟೋಮೆಟಿಕ್ ಬಾಗಿಲುಗಳು, ಟಾಯ್ಲೆಟ್‌ಗಳು, ಸಿಸಿಟಿವಿ, ಫೈರ್ ಡಿಟೆಕ್ಷನ್, ಡಿಜಿಟಲ್ ಡಿಸ್ಪ್ಲೇಗಳು, ಹೀಗೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.


Click it and Unblock the Notifications