ಬೆಂಗಳೂರು, ಜೂನ್ 17: ಭಾರತದಲ್ಲಿ ಒಂದೆಡೆ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ದೇಶಾದ್ಯಂತ ರೂಮ್ ಹವಾನಿಯಂತ್ರಣಗಳ ಬೇಡಿಕೆಯೂ ಏರಿಕೆಯಾಗಿದೆ.
ಪ್ರಸ್ತುತ ಇರುವ ಬೇಡಿಕೆ ಗಮನಿಸಿದ್ರೆ ರೂಮ್ ಹವಾನಿಯಂತ್ರಣಗಳ (ಆರ್‌ಎಸಿ) ಮಾರುಕಟ್ಟೆಯು 2028-29 ರ ಆರ್ಥಿಕ ವರ್ಷದ ವೇಳೆಗೆ 50,000 ಕೋಟಿ ರೂ.ಗೆ ತಲುಪಿ, 12 ಶೇಕಡಾ ಆರೋಗ್ಯಕರ ಸಿಎಜಿಆರ್‌ನಲ್ಲಿ ಬೆಳೆಯುವ ಸಾಧ್ಯತೆಯಿದೆ ಎಂದು ಟಾಟಾ ಸಮೂಹ ಸಂಸ್ಥೆ ವೋಲ್ಟಾಸ್ ತನ್ನ ಇತ್ತೀಚಿನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ಸ್ವದೇಶಿ ಮತ್ತು ಪ್ರಮುಖ ವಿದೇಶಿ ಕಂಪನಿಗಳ ಪೈಪೋಟಿಯ ನಡುವೆ ಭಾರತೀಯ ಆರ್‌ಎಸಿ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ಎದುರಿಸುತ್ತಿದ್ದು, ಈ ಸ್ಪರ್ಧಾತ್ಮಕ ತೀವ್ರತೆಯು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ" ಎಂದು ಹೇಳಿದೆ. ಹೆಚ್ಚುತ್ತಿರುವ ಬೇಸಿಗೆಯ ಬಿಸಿ, ಗ್ರಾಹಕರ ಆದಾಯ ಮತ್ತು ಹಣಕಾಸು ಪರಿಸ್ಥಿತಿ ಉತ್ತಮಗೊಳ್ಳುತ್ತಿರುವ ಹಿನ್ನಲೆ ಜೀವನಶೈಲಿಯಲ್ಲಿ ಮಾರ್ಪಾಡು ಮಾಡುವ ಅಂಶಗಳು ಈ ರೂಮ್ ಹವಾನಿಯಂತ್ರಣ ಕ್ಷೇತ್ರದ ಬೆಳವಣಿಗೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ.
"ಭಾರತೀಯ RAC ಮಾರುಕಟ್ಟೆಯು 2028-29 ರ ವೇಳೆಗೆ 50,000 ಕೋಟಿ ರೂಪಾಯಿಗಳನ್ನು ತಲುಪಲು ಶೇಕಡಾ 12 ರಷ್ಟು ಆರೋಗ್ಯಕರ CAGR ನಲ್ಲಿ ಬೆಳೆಯುವ ನಿರೀಕ್ಷೆಯಿದೆ" ಎಂದು ವೋಲ್ಟಾಸ್ ತಿಳಿಸಿದೆ.
ವೋಲ್ಟಾಸ್ ಸಂಸ್ಥೆಯೂ 2023-24ರಲ್ಲಿ 2 ಮಿಲಿಯನ್ ಎಸಿ ಯೂನಿಟ್‌ಗಳನ್ನು ಮಾರಾಟ ಮಾಡಿದ್ದು , ಕಂಪನಿಯ ಪ್ರಕಾರ, ಒಂದೇ ವರ್ಷದಲ್ಲಿ ಯಾವುದೇ ಬ್ರಾಂಡ್‌ನಿಂದ ಇದುವರೆಗೆ ಮಾರಾಟ ಮಾಡದಷ್ಟು ಅತಿ ಹೆಚ್ಚು ಎಸಿಗಳನ್ನು ಸೇಲ್ ಮಾಡಿದೆ . ವೋಲ್ಟಾಸ್ 1 ಮಿಲಿಯನ್ ಎಸಿ ಯುನಿಟ್‌ಗಳನ್ನು ನಂಬಲಾಗದಷ್ಟು ಅಲ್ಪ ಅವಧಿಯ ಸಮಯದ ಚೌಕಟ್ಟಿನಲ್ಲಿ ಮಾರಾಟ ಮಾಡಿದೆ. ಅಂದರೆ 2024 ಜನವರಿ 1 ರಿಂದ ಏಪ್ರಿಲ್ 20 ರವರೆಗೆ ಕೇವಲ 110 ದಿನಗಳಲ್ಲಿ ದಾಖಲೆಯ ಎಸಿಗಳನ್ನು ಮಾರಾಟ ಮಾಡಿದೆ.
ಏಪ್ರಿಲ್ ಮತ್ತು ಮೇ ತಿಂಗಳ ಬೇಸಿಗೆಯ ಋತುವಿನಲ್ಲಿ ಹಲವಾರು ಕಂಪನಿಗಳು ಮಾರಾಟದಲ್ಲಿ ಎರಡು ಪಟ್ಟು ಬೆಳವಣಿಗೆಯನ್ನು ವರದಿ ಮಾಡಿವೆ ಏಕೆಂದರೆ ಈ ಬಾರಿ ಬಿರುಸಿನ ಬೇಸಿಗೆ ಇದ್ದು ಹೀಗಾಗಿ ಮಾರಾಟದ ಪ್ರಮಾಣವೂ ಗಗನಕ್ಕೇರಿದೆ. ಈ ಹಿಂದೆ, ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಉಪಕರಣಗಳ ತಯಾರಕರ ಸಂಘವು ಈ ವರ್ಷ, RAC ಯ ದಾಖಲೆಯ ಮಾರಾಟ ನಿರೀಕ್ಷಿಸುತ್ತದೆ ಎಂದು ಹೇಳಿತ್ತು. ಅದರಂತೆ 2024 ರಲ್ಲಿ ಸುಮಾರು 14 ಮಿಲಿಯನ್ ರೂಮ್ ಹವಾನಿಯಂತ್ರಣ ಯುನಿಟ್‌ಗಳ ವಾರ್ಷಿಕ ಮಾರಾಟ ಕಂಡಿದೆ.
ಅದರೂ, ವೋಲ್ಟಾಸ್ ತನ್ನ ವರದಿಯಲ್ಲಿ, QCO (ಕ್ವಾಲಿಟಿ ಕಂಟ್ರೋಲ್ ಆರ್ಡರ್ಸ್) ನಿಯಮಗಳ ಇತ್ತೀಚಿನ ಅನುಷ್ಠಾನವು, ಯೂನಿಟ್ ಗಳ ಆಮದುಗಳ ಮೇಲೆ ಪರಿಣಾಮ ಬೀರುತ್ತಿದ್ದು, ಇದು ಉದ್ಯಮಕ್ಕೆ ಸವಾಲುಗಳನ್ನು ಒಡ್ಡುತ್ತದೆ. ಭಾರತೀಯ ಹವಾನಿಯಂತ್ರಣ ಉದ್ಯಮವು ಘಟಕಗಳ ಆಮದುಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಉತ್ಪನ್ನದ ಮೌಲ್ಯದ ಸರಾಸರಿ 65 ರಿಂದ 70 ಪ್ರತಿಶತದಷ್ಟಿದೆ ಎಂದು ಹೇಳಿದೆ.


Click it and Unblock the Notifications