For Quick Alerts
ALLOW NOTIFICATIONS  
For Daily Alerts

ಅ.27ರಂದು ಭಾರತೀಯ ಷೇರುಪೇಟೆ ನಿಫ್ಟಿ ಮತ್ತು ಸೆನ್ಸೆಕ್ಸ್ ಅಂಕಿ-ಅಂಶಗಳು

|

ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಏರಿಳಿತದ ನಡುವೆ ಬುಧವಾರ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡು ಬಂದಿದೆ. ಭಾರತೀಯ ಷೇರು ಸೂಚ್ಯಂಕ(ಬಿಎಸ್ಇ) ಹಾಗೂ ರಾಷ್ಟ್ರೀಯ ಷೇರು ಸೂಚ್ಯಂಕ(ಎನ್ಎಸ್ಇ) ಅಂಕಗಳಲ್ಲಿ ಕೊಂಚ ಏರಿಕೆಯಾಗಿದೆ.

ಬುಧವಾರ ಬೆಳಗ್ಗೆ ಮಾರುಕಟ್ಟೆ ಸೆನ್ಸೆಕ್ಸ್ 65.46 ಅಥವಾ ಶೇ.0.11ರಷ್ಟು ಏರಿಕೆಯೊಂದಿಗೆ 61,415.72ರಲ್ಲಿ ದಿನದ ವಹಿವಾಟು ಆರಂಭಿಸಿತು. ಅದೇ ರೀತಿ ನಿಫ್ಟಿ ಕೂಡಾ 32.25 ಅಥವಾ ಶೇ.0.18ರಷ್ಟು ಏರಿಕೆಯೊಂದಿಗೆ 18,300.65ರ ಅಂಕಿ-ಅಂಶಗಳೊಂದಿಗೆ ದಿನದ ಮಾರುಕಟ್ಟೆ ಪ್ರಾರಂಭವಾಯಿತು.

ಬುಧವಾರ ಷೇರು ಮಾರುಕಟ್ಟೆ ಆರಂಭಿಕ ವಹಿವಾಟಿನ ಸಂದರ್ಭದಲ್ಲಿ ಬಿಎಸ್‌ಇ ಸೆನ್ಸೆಕ್ಸ್ 450 ಅಂಕಗಳ ಏರಿಕೆಯೊಂದಿಗೆ 61750ರಲ್ಲಿ ದಿನದ ವಹಿವಾಟು ಆರಂಭಿಸಿದರೆ, ಎನ್‌ಎಸ್‌ಇ ನಿಫ್ಟಿ ಆರಂಭಿಕ ವಹಿವಾಟಿನಲ್ಲಿ 18250ಕ್ಕೆ ಏರಿಕೆಯಾಗಿತ್ತು. ಪ್ರಸ್ತುತ ಷೇರು ಮಾರುಕಟ್ಟೆ ಚಿತ್ರಣ ಹಾಗೂ ಪ್ರಮುಖ ಷೇರುಗಳ ಏರಿಳಿತ ಹೇಗಿದೆ ಎಂಬುದರ ಕುರಿತು ಒಂದು ವರದಿಗಾಗಿ ಮುಂದೆ ಓದಿ.

ಅ.27ರಂದು ಭಾರತೀಯ ಷೇರುಪೇಟೆ ನಿಫ್ಟಿ ಮತ್ತು ಸೆನ್ಸೆಕ್ಸ್ ಅಂಕಿ-ಅಂಶಗಳು

ಬಿಎಸ್ಇ ಷೇರುಪೇಟೆಯಲ್ಲಿ ಏರಿಳಿತ:

ಭಾರತೀಯ ಷೇರು ಸೂಚ್ಯಂಕ ಸೆನ್ಸಕ್ಸ್ ಮಾರುಕಟ್ಟೆಯಲ್ಲಿ ಏಷ್ಯನ್ ಪೇಂಟ್ಸ್ ಶೇ.5.16ರಷ್ಟು ಏರಿಕೆಯಾಗಿ 3,123ಕ್ಕೆ ತಲುಪಿದೆ. ಸನ್ ಫಾರ್ಮಾ, ಐಟಿಸಿ, ಡಾ. ರೆಡ್ಡೀಸ್ ಲ್ಯಾಬೊರೇಟರೀಸ್, ಟಿಸಿಎಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಂಪನಿ ಷೇರುಗಳು ಕೂಡ ಏರಿಕೆಯಾಗಿವೆ. ಅದೇ ರೀತಿ ಆಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ಟೆಕ್ ಮಹೀಂದ್ರಾ, ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ, ಇಂಡಸ್‌ಇಂಡ್ ಬ್ಯಾಂಕ್, ಟಾಟಾ ಸ್ಟೀಲ್ ಕಂಪನಿ ಷೇರುಗಳ ಬೆಲೆಯು ಸೆನ್ಸೆಕ್ಸ್ ಮಾರುಕಟ್ಟೆಯಲ್ಲಿ ಅತಿಹೆಚ್ಚು ಇಳಿಕೆಯಾಗಿವೆ.

ಟಾಪ್-5 ಏರಿಕೆ ಕಂಡ ಷೇರುಗಳ ಮೌಲ್ಯ:

ಏಷಿಯನ್ ಪೇಂಟ್ಸ್ ಷೇರು ಮೌಲ್ಯವು ಶೇ.4.72ರಷ್ಟು ಅಥವಾ 140.20 ಅಂಕಗಳ ಏರಿಕೆಯೊಂದಿಗೆ 3,110ರ ಮೌಲ್ಯದಲ್ಲಿ ವಹಿವಾಟು ನಡೆಸುತ್ತಿದೆ. ಅದೇ ರೀತಿ ಡೈವಿಸ್ ಲ್ಯಾಬ್ 131.20 ಅಂಕಗಳ ಏರಿಕೆಯೊಂದಿಗೆ 5,150.10ರಲ್ಲಿ ವಹಿವಾಟು ನಡೆಸುತ್ತಿದೆ. ಸನ್ ಫಾರ್ಮಾ ಷೇರು ಮೌಲ್ಯ 830.20 ರೂಪಾಯಿಗೆ ತಲುಪಿದ್ದು, 16.70 ರೂಪಾಯಿ ಏರಿಕೆಯಾಗಿದೆ. SBI ಲೈಫ್ ಇನ್ಸುರೆನ್ಸ್ ಕಂಪನಿಯ ಷೇರು 23.50 ರೂಪಾಯಿ ಏರಿಕೆಯೊಂದಿಗೆ 1,195.55 ರೂಪಾಯಿಗೆ ತಲುಪಿದೆ. ಅದೇ ರೀತಿ SBI ಷೇರು ಮೌಲ್ಯವು 8.75 ಅಂಕಗಳ ಏರಿಕೆಯೊಂದಿಗೆ 521.30ರ ಮೌಲ್ಯದಲ್ಲಿ ವಹಿವಾಟು ನಡೆಸುತ್ತಿದೆ.

ಇಳಿಕೆಯಾದ ಟಾಪ್-5 ಷೇರುಗಳ ಮೌಲ್ಯ:

ಆಕ್ಸಿಸ್ ಬ್ಯಾಂಕ್ ಷೇರು ಮೌಲ್ಯದಲ್ಲಿ ಬುಧವಾರ ಶೇ.5.08ರಷ್ಟು ಇಳಿಮುಖವಾಗಿದ್ದು, 42.75 ಇಳಿಕೆಯೊಂದಿಗೆ 799.15 ರೂಪಾಯಿ ಮೌಲ್ಯದಲ್ಲಿ ವಹಿವಾಟು ನಡೆಸುತ್ತಿದೆ. ಅದೇ ರೀತಿ ಬಜಾಜ್ ಫೈನಾನ್ಸ್ ಶೇ.4.28ರಷ್ಟು ಅಥವಾ 336.30ರಷ್ಟು ಇಳಿಕೆಯಾಗಿದ್ದು, 7519.35 ರೂ. ಮೌಲ್ಯದಲ್ಲಿ ವಹಿವಾಟು ನಡೆಯುತ್ತಿದೆ. ಬಜಾಜ್ ಫೈನಾನ್ಸ್ ಸರ್ವಿಸಸ್ ಷೇರು ಮೌಲ್ಯದಲ್ಲಿ 498.85 ರೂಪಾಯಿ ಇಳಿಕೆಯಾಗಿದ್ದು, 17,845.50 ರೂಪಾಯಿಗೆ ತಲುಪಿದೆ. ಟಾಟಾ ಮೋಟಾರ್ಸ್ ಶೇ.1.38 ಅಥವಾ 7 ರೂಪಾಯಿ ಇಳಿಕೆಯಾಗಿದ್ದು, 501.65 ರೂಪಾಯಿಗೆ ಇಳಿಕೆಯಾಗಿದೆ. ಇಳಿಮುಖಗೊಂಡ ಷೇರುಗಳ ಪಟ್ಟಿ ಸೇರಿರುವ ಓಎನ್ ಜಿಸಿ ಕಂಪನಿ ಷೇರು ಶೇ.1.23ರಷ್ಟು ಅಥವಾ 2 ರೂಪಾಯಿ ಇಳಿಕೆಯಾಗಿದ್ದು 161 ರೂಪಾಯಿ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ.

ರೂಪಾಯಿ ಮೌಲ್ಯದ ಎದುರು ಡಾಲರ್ ಏರಿಳಿತ

ದೇಶೀಯ ಷೇರುಗಳಲ್ಲಿನ ಏರಿಳಿತದ ನಡುವೆ ಬುಧವಾರ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿ ಬೆಲೆ ಇಳಿಮುಖವಾಗಿದೆ. ಭಾರತೀಯ ರೂಪಾಯಿ ಮೌಲ್ಯವು 74.95 ಬದಲಿಗೆ ಬುಧವಾರ ಪ್ರತಿ ಡಾಲರ್‌ಗೆ 74.99ಕ್ಕೆ ಇಳಿದಿದೆ. US ನಿಂದ ಸುಧಾರಿತ ಆರ್ಥಿಕ ಮಾಹಿತಿ ಮತ್ತು ವಿತ್ತೀಯ ಬಿಗಿಗೊಳಿಸುವಿಕೆಯ ನಿರೀಕ್ಷೆಯ ಹಿನ್ನೆಲೆ US ಡಾಲರ್ ಶೇ. 0.15ರಷ್ಟು ಹೆಚ್ಚಾಗಿದೆ.

English summary

Indices Extends Gains: Sensex Start up ​with 65 Plus Points, Nifty Around 18150

Sensex is up 65.46 points or 0.11% at 61415.72, and the Nifty added 32.25 points or 0.18% at 18300.65
Story first published: Wednesday, October 27, 2021, 11:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X