ಅ.26ರಂದು ಡಾಲರ್ ಜಿಗಿತ; ಸೆನ್ಸೆಕ್ಸ್, ನಿಫ್ಟಿಯಲ್ಲಿ ಮುಂದುವರಿದ ಏರಿಳಿತ

ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಿರತೆ ಕಂಡು ಬಂದಿರುವ ಹಿನ್ನೆಲೆ ಮಂಗಳವಾರ ಭಾರತೀಯ ಷೇರು ಮಾರುಕಟ್ಟೆಯಲ್ಲೂ ಮಿಶ್ರ ಫಲಿತಾಂಶ ಕಂಡು ಬಂದಿದೆ. ಭಾರತೀಯ ಷೇರು ಸೂಚ್ಯಂಕ(ಬಿಎಸ್ಇ) ಹಾಗೂ ರಾಷ್ಟ್ರೀಯ ಷೇರು ಸೂಚ್ಯಂಕ(ಎನ್ಎಸ್ಇ) ಅಂಕಗಳಲ್ಲಿ ಅಷ್ಟಾಗಿ ಏರಿಳಿತಗಳು ಕಂಡು ಬಂದಿಲ್ಲ.

ಮಂಗಳವಾರ ಬೆಳಗ್ಗೆ ಮಾರುಕಟ್ಟೆ ಪ್ರಾರಂಭವಾದಾಗ ಸೆನ್ಸೆಕ್ಸ್ 60,997.90 ಅಂಕಗಳೊಂದಿಗೆ ದಿನದ ವಹಿವಾಟು ಆರಂಭಿಸಿತು. ಒಂದು ಹಂತದಲ್ಲಿ 61,404ರ ಗಡಿ ದಾಟಿದ ಅಂಕಿ ಅಂಶವು ಎರಡು ಗಂಟೆಗಳಲ್ಲಿ ಮಾರುಕಟ್ಟೆ ಚಿತ್ರಣವನ್ನೇ ಬದಲಿಸಿತು.

ಸೆನ್ಸೆಕ್ಸ್ ರೀತಿಯಲ್ಲೇ ಬೆಳಗ್ಗೆ ಮಾರುಕಟ್ಟೆ ಆರಂಭದ ವೇಳೆಗೆ ನಿಫ್ಟಿ 18,154.50 ಅಂಕಗಳೊಂದಿಗೆ ಶುರುವಾಗಿದ್ದು, 50 ಅಂಕಗಳ ಏರಿಳಿತದಲ್ಲಿ ಮಾರುಕಟ್ಟೆ ವಹಿವಾಟು ನಡೆಸುತ್ತಿದೆ. ಬೆಳಗ್ಗೆ ಪ್ಲಸ್ ಪಾಯಿಂಟ್ ನೊಂದಿಗೆ ಆರಂಭವಾದ ಮಾರುಕಟ್ಟೆಯ ಚಿತ್ರಣ ಒಂದೆರೆಡು ಗಂಟೆಗಳಲ್ಲಿ ಇಳಿಮುಖವಾಯಿತು. ತದನಂತರದಲ್ಲಿ ಮತ್ತೆ ಬಿಎಸ್ಇ ಷೇರುಗಳ ಮೌಲ್ಯ ಏರುಮುಖವಾಗುತ್ತಿದ್ದಂತೆ ಷೇರುಪೇಟೆ ಚಿತ್ರಣ ಬದಲಾಯಿತು.

ಷೇರು ಮಾರುಕಟ್ಟೆಯ ಆರಂಭಿಕ ಚಿತ್ರಣ ಹೇಗಿತ್ತು?

ಷೇರು ಮಾರುಕಟ್ಟೆಯ ಆರಂಭಿಕ ಚಿತ್ರಣ ಹೇಗಿತ್ತು?

ಬಿಎಸ್‌ಇ ಸೆನ್ಸೆಕ್ಸ್ 255 ಪಾಯಿಂಟ್‌ಗಳು ಅಥವಾ ಶೇಕಡಾ 0.42 ರಷ್ಟು ಏರಿಕೆಯಾಗಿ 61,223 ನಲ್ಲಿ ವಹಿವಾಟು ನಡೆಸಿದರೆ, ಎನ್‌ಎಸ್‌ಇಯ ನಿಫ್ಟಿ 77 ಪಾಯಿಂಟ್‌ಗಳನ್ನು 18200 ಕ್ಕಿಂತ ಹೆಚ್ಚಿನ ವಹಿವಾಟು ಆರಂಭಿಸಿತು.

ಬಿಎಸ್ಇ ಷೇರುಪೇಟೆಯಲ್ಲಿ ಏರಿಳಿತದ ಮಾಹಿತಿ

ಬಿಎಸ್ಇ ಷೇರುಪೇಟೆಯಲ್ಲಿ ಏರಿಳಿತದ ಮಾಹಿತಿ

ಟೆಕ್ ಮಹೀಂದ್ರಾ, ಟಾಟಾ ಸ್ಟೀಲ್, ಎಚ್‌ಸಿಎಲ್ ಟೆಕ್, ಬಜಾಜ್ ಫೈನ್ಯಾನ್ಸ್ ಸರ್ವಿಸಸ್, ಎಲ್ & ಟಿ, ಅಲ್ಟ್ರಾಟೆಕ್ ಸಿಮೆಂಟ್, ಭಾರ್ತಿ ಏರ್‌ಟೆಲ್, ಬಜಾಜ್ ಫೈನಾನ್ಸ್, ಐಟಿಸಿ, ರಿಲಯನ್ಸ್ ಕಂಪನಿಯ ಷೇರು ದರದಲ್ಲಿ ಏರಿಕೆ ಕಂಡು ಬಂದಿದೆ. ಅದೇ ರೀತಿ ಐಸಿಐಸಿಐ ಬ್ಯಾಂಕ್, ಕೋಟಕ್ ಮಹಿಂದ್ರಾ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಕಂಪನಿಯ ಷೇರು ಬೆಲೆ ಬಿಎಸ್ಇ ಸೆನ್ಸೆಕ್ಸ್‌ನಲ್ಲಿ ಇಳಿಮುಖವಾಗಿದೆ.

ನಿಫ್ಟಿ ಷೇರುಗಳಲ್ಲಿ ಯಾವುದು ಇಳಿಕೆ ಯಾವುದು ಏರಿಕೆ?

ನಿಫ್ಟಿ ಷೇರುಗಳಲ್ಲಿ ಯಾವುದು ಇಳಿಕೆ ಯಾವುದು ಏರಿಕೆ?

ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿಯಲ್ಲಿ ಬಜಾಜ್ ಫೈನಾನ್ಸ್, ಟಾಟಾ ಮೋಟಾರ್ಸ್, ರಿಲಾಯನ್ಸ್, ಟೆಕ್ ಮಹೀಂದ್ರಾ ಮತ್ತು ಟೈಟಾನ್ ಕಂಪನಿಗಳ ಷೇರು ದರ ಏರಿಕೆಯಾಗಿದೆ. ಅದೇ ರೀತಿ ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಹೆಚ್ ಡಿಎಫ್ ಸಿ ಬ್ಯಾಂಕ್, ಇನ್ಫೋಸಿಸ್ ಮತ್ತು ಕೊಟಕ್ ಮಹಿಂದ್ರಾ ಷೇರುಗಳ ಬೆಲೆ ಇಳಿಕೆಯಾಗಿದೆ.

ಷೇರುಗಳ ಮೇಲಿನ ಹೂಡಿಕೆ ಹೇಗೆ?

ಷೇರುಗಳ ಮೇಲಿನ ಹೂಡಿಕೆ ಹೇಗೆ?

ಭಾರತೀಯ ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ಆಸಕ್ತಿಯಿದ್ದರೆ ಮೊದಲು ಸ್ಟಾಕ್ ಬ್ರೋಕರ್‌ನೊಂದಿಗೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಬೇಕು. ಷೇರುಗಳನ್ನು ನೇರವಾಗಿ ಷೇರು ವಿನಿಮಯ ಕೇಂದ್ರದಿಂದ ಖರೀದಿಸಲು ಸಾಧ್ಯವಿಲ್ಲ. ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯ ಮೂಲಕ ಷೇರುಗಳ ಖರೀದಿಸಿ ವಹಿವಾಟು ನಡೆಸಬಹುದು. ಸಾಮಾನ್ಯವಾಗಿ ಒಂದು ಡಿಮೇಟ್ ಹಾಗೂ ಟ್ರೇಡಿಂಗ್ ಖಾತೆಯನ್ನು ತೆರೆಯುವುದಕ್ಕೆ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಅಗತ್ಯವಿರುತ್ತದೆ. ಈ ದಾಖಲೆಗಳನ್ನು ಹೊಂದಿದ್ದರೆ, ಸುಲಭವಾಗಿ ಬ್ರೋಕರ್‌ನೊಂದಿಗೆ ಖಾತೆಯನ್ನು ತೆರೆಯಬಹುದು ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಆರಂಭಿಸಬಹುದು.

ರೂಪಾಯಿ ಮೌಲ್ಯದ ಎದುರು ಡಾಲರ್ ಏರಿಳಿತ

ರೂಪಾಯಿ ಮೌಲ್ಯದ ಎದುರು ಡಾಲರ್ ಏರಿಳಿತ

ದೇಶೀಯ ಷೇರುಗಳಲ್ಲಿನ ಏರಿಳಿತದ ನಡುವೆ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿ 5 ಪೈಸೆಗಳಷ್ಟು ಏರಿಕೆಯಾಗಿ 75.03ಕ್ಕೆ ತಲುಪಿದೆ. ಅಂತರಬ್ಯಾಂಕ್ ವಿದೇಶಿ ವಿನಿಮಯದಲ್ಲಿ ರೂಪಾಯಿಯು ಡಾಲರ್ ವಿರುದ್ಧ 75.05 ನಲ್ಲಿ ಪ್ರಾರಂಭವಾಯಿತು, ನಂತರ 75.03 ಕ್ಕೆ ಏರಿಕೆಯಾಯಿತು. ಅದರ ಹಿಂದಿನ ದಿನದ ಅಂತ್ಯದ ವೇಳೆಗೆ ಕೇವಲ 5 ಪೈಸೆಯ ಹೆಚ್ಚಳವನ್ನು ದಾಖಲಿಸಿತ್ತು. ಸೋಮವಾರ ಡಾಲರ್ ಎದುರು ರೂಪಾಯಿ ಮೌಲ್ಯ 75.08ಕ್ಕೆ ಸ್ಥಿರವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+