For Quick Alerts
ALLOW NOTIFICATIONS  
For Daily Alerts

ಏರಿಕೆಗೊಂಡಿದ್ದ ಸೆನ್ಸೆಕ್ಸ್ 91 ಪಾಯಿಂಟ್ಸ್ ಇಳಿಕೆ: ನಿಫ್ಟಿ 38 ಪಾಯಿಂಟ್ಸ್‌ ಕುಸಿತ

|

ಭಾರತೀಯ ಷೇರುಪೇಟೆ ಜಾಗತಿಕ ನಕಾರಾತ್ಮಕ ಸೂಚನೆಯ ನಡುವೆ ಬುಧವಾರ (ಜೂ.16) ಕುಸಿತಗೊಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 91 ಪಾಯಿಂಟ್ಸ್ ಇಳಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 38 ಪಾಯಿಂಟ್ಸ್‌ ಕುಸಿತಗೊಂಡಿದೆ.

 

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ 91.56 ಪಾಯಿಂಟ್ಸ್‌ ಅಥವಾ ಶೇಕಡಾ 0.17ರಷ್ಟು ಇಳಿಕೆಗೊಂಡು 52681.49 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 38.30 ಪಾಯಿಂಟ್ಸ್‌ ಅಥವಾ ಶೇಕಡಾ 0.24ರಷ್ಟು ಕುಸಿದು 15831 ಪಾಯಿಂಟ್ಸ್‌ ಮುಟ್ಟಿದೆ.

 
ಏರಿಕೆಗೊಂಡಿದ್ದ ಸೆನ್ಸೆಕ್ಸ್ 91 ಪಾಯಿಂಟ್ಸ್ ಇಳಿಕೆ

ದಿನದ ವಹಿವಾಟು ಆರಂಭಗೊಂಡಾಗ 1376 ಷೇರುಗಳು ಏರಿಕೆಗೊಂಡರೆ, 1270 ಷೇರುಗಳು ಕುಸಿದಿವೆ ಮತ್ತು 84 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಒಎನ್‌ಜಿಸಿ, ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್, ಐಒಸಿ, ಕೋಲ್ ಇಂಡಿಯಾ ಮತ್ತು ಐಟಿಸಿ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಅದಾನಿ ಪೋರ್ಟ್ಸ್, ಹಿಂಡಾಲ್ಕೊ ಇಂಡಸ್ಟ್ರೀಸ್, ಜೆಎಸ್‌ಡಬ್ಲ್ಯೂ ಸ್ಟೀಲ್, ಪವರ್ ಗ್ರಿಡ್ ಕಾರ್ಪೊರೇಷನ್ ಮತ್ತು ಟಾಟಾ ಸ್ಟೀಲ್ ನಷ್ಟ ಅನುಭವಿಸಿವೆ.

ಏರಿಕೆಗೊಂಡ ಷೇರುಗಳು:
ಒಎನ್‌ಜಿಸಿಯ ಷೇರು ಸುಮಾರು 2 ರೂ.ಗಳ ಲಾಭದೊಂದಿಗೆ 126.90 ರೂ., ಬಜಾಜ್ ಆಟೋದ ಷೇರುಗಳು ಸುಮಾರು 15 ರೂ.ಗಳ ಲಾಭದೊಂದಿಗೆ 4,153.10 ರೂಗಳಲ್ಲಿ ಪ್ರಾರಂಭವಾಯಿತು. ಟಾಟಾ ಕನ್ಸ್ಯೂಮರ್ ಷೇರು ಸುಮಾರು 2 ರೂ.ಗಳ ಲಾಭದೊಂದಿಗೆ 721.25 ರೂ., ಎಚ್‌ಡಿಎಫ್‌ಸಿ ಲೈಫ್‌ನ ಷೇರುಗಳು ಸುಮಾರು 2 ರೂ.ಗಳ ಲಾಭದೊಂದಿಗೆ 694.75 ರೂ., ಸನ್ ಫಾರ್ಮಾ ಷೇರು ಸುಮಾರು 2 ರೂ.ಗಳ ಲಾಭದೊಂದಿಗೆ 675.60 ರೂ. ತಲುಪಿದೆ.

ಇಳಿಕೆಗೊಂಡ ಷೇರುಗಳು:
ಅದಾನಿ ಪೋರ್ಟ್ಸ್ ಷೇರು 22 ರೂ.ಗಳ ಇಳಿಕೆ ಕಂಡು 740.35 ರೂ., ಹಿಂಡಾಲ್ಕೊ ಷೇರು 5 ರೂಗಳ ಕುಸಿತದೊಂದಿಗೆ 386.20 ರೂ., ಸಿಂಧೂ ಬ್ಯಾಂಕ್ ಷೇರುಗಳು 9 ರೂ.ಗಳಷ್ಟು ಇಳಿಕೆಯಾಗಿ 1,025.90 ರೂ., ಟಾಟಾ ಮೋಟಾರ್ಸ್‌ನ ಷೇರುಗಳು ಸುಮಾರು 3 ರೂ.ಗಳಷ್ಟು ಇಳಿಕೆಯಾಗಿ 349.45 ರೂ., ರಿಲಯನ್ಸ್ ಷೇರು 20 ರೂ. ಇಳಿಕೆಗೊಂಡು 2,230.20 ರೂ.ಗೆ ಪ್ರಾರಂಭವಾಯಿತು.

English summary

Indices Flat Amid Mixed Global Cues: Sensex Down 91 Points

Sensex was down 91.56 points or 0.17% at 52681.49, and the Nifty was down 38.30 points or 0.24% at 15831.
Story first published: Wednesday, June 16, 2021, 10:27 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X