For Quick Alerts
ALLOW NOTIFICATIONS  
For Daily Alerts

ಷೇರುಪೇಟೆ: ಸೆನ್ಸೆಕ್ಸ್‌ 104 ಪಾಯಿಂಟ್ಸ್‌ ಏರಿಕೆ, ನಿಫ್ಟಿ 53 ಪಾಯಿಂಟ್ಸ್‌ ಹೆಚ್ಚಳ

|

ಭಾರತೀಯ ಷೇರುಪೇಟೆಯು ಸೋಮವಾರ ಆರಂಭಿಕ ವಹಿವಾಟಿನಲ್ಲಿ ಏರಿಕೆ ದಾಖಲಿಸಿದ್ದು, ಸಮತಟ್ಟಾಗಿ ಮುಂದುವರಿದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 104 ಪಾಯಿಂಟ್ಸ್‌ ಏರಿಕೆ ಕಂಡಿದ್ದು, ನಿಫ್ಟಿ 53 ಪಾಯಿಂಟ್ಸ್‌ ಹೆಚ್ಚಾಗಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ ಬೆಳಿಗ್ಗೆ 9.16ರ ಸುಮಾರಿಗೆ 75.07 ಪಾಯಿಂಟ್ ಅಥವಾ ಶೇಕಡಾ 0.14ರಷ್ಟು ಏರಿಕೆಗೊಂಡು 52175.12 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 43.30 ಪಾಯಿಂಟ್ ಅಥವಾ ಶೇಕಡಾ 0.28ರಷ್ಟು ಏರಿಕೆಗೊಂಡು 15713.60 ಪಾಯಿಂಟ್ಸ್‌ ಮುಟ್ಟಿದೆ.

ದಿನದ ವಹಿವಾಟಿನ ಆರಂಭದಲ್ಲಿ ಸುಮಾರು 2031 ಷೇರುಗಳು ಏರಿಕೆಗೊಂಡರೆ, 706 ಷೇರುಗಳು ಕುಸಿದವು, ಮತ್ತು 121 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಸೆನ್ಸೆಕ್ಸ್‌ 104 ಪಾಯಿಂಟ್ಸ್‌ ಏರಿಕೆ, ನಿಫ್ಟಿ ಕೂಡ ಹೆಚ್ಚಳ

ಏರಿಕೆಗೊಂಡ ಷೇರುಗಳು
ಟಾಟಾ ಮೋಟಾರ್ಸ್‌ನ ಷೇರುಗಳು ಸುಮಾರು 8 ರೂ.ಗಳ ಲಾಭದೊಂದಿಗೆ 343.00 ರೂ., ಕೋಲ್ ಇಂಡಿಯಾದ ಷೇರುಗಳು ಸುಮಾರು 3 ರೂ.ಗಳ ಲಾಭದೊಂದಿಗೆ 156.40 ರೂ., ಗ್ರಾಸಿಮ್‌ನ ಷೇರು 17 ರೂ. ಹೆಚ್ಚಾಗಿ 1,520.45 ರೂ.ಗೆ ಪ್ರಾರಂಭವಾಗಿದ್ದು, ಟಾಟಾ ಸ್ಟೀಲ್ ಷೇರುಗಳು 14 ರೂ.ಗಳ ಏರಿಕೆ ಕಂಡು 1,134.65 ರೂ., ಐಟಿಸಿಯ ಷೇರು ಸುಮಾರು 2 ರೂ.ಗಳ ಲಾಭದೊಂದಿಗೆ 211.00 ರೂ. ತಲುಪಿದೆ.

ಇಳಿಕೆಗೊಂಡ ಷೇರುಗಳು
ಬಜಾಜ್ ಫೈನಾನ್ಸ್ ಷೇರುಗಳು ಸುಮಾರು 200 ರೂ.ಗಳಷ್ಟು ಇಳಿಕೆಯಾಗಿ 5,793.50 ರೂ., ಬಜಾಜ್ ಫಿನ್‌ಸರ್ವ್‌ನ ಷೇರುಗಳು ಸುಮಾರು 304 ರೂ.ಗಳಷ್ಟು ಇಳಿಕೆಯಾಗಿ 11,851.55 ರೂ., ಎಚ್‌ಡಿಎಫ್‌ಸಿ ಷೇರುಗಳು 12 ರೂ.ಗಳಷ್ಟು ಇಳಿಕೆಯಾಗಿ 2,606.70 ರೂ., ಏಷ್ಯನ್ ಪೇಂಟ್ಸ್‌ನ ಷೇರುಗಳು 14 ರೂ.ಗಳಷ್ಟು ಇಳಿಕೆಯಾಗಿ 2,910.85 ರೂ., ಎಚ್‌ಡಿಎಫ್‌ಸಿ ಲೈಫ್‌ನ ಷೇರುಗಳು ಸುಮಾರು 2 ರೂ.ಗಳಷ್ಟು ಇಳಿಕೆಯಾಗಿ 678.65 ರೂ. ತಲುಪಿದೆ.

English summary

Indices Flat Amid Volatility: Nifty Up 43 Points

Sensex was up 75.07 points or 0.14% at 52175.12, and the Nifty was up 43.30 points or 0.28% at 15713.60.
Story first published: Monday, June 7, 2021, 10:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X