ಭಾರತೀಯ ಷೇರುಪೇಟೆ ಬುಧವಾರ ಸಕಾರಾತ್ಮಕ ಜಾಗತಿಕ ಸೂಚನೆಗಳ ಹಿನ್ನೆಲೆಯಲ್ಲಿ ಏರಿಕೆಗೊಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 166 ಪಾಯಿಂಟ್ಸ್ ಜಿಗಿತಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 34 ಪಾಯಿಂಟ್ಸ್ ಏರಿಕೆಗೊಂಡಿದೆ.
ಬೆಳಿಗ್ಗೆ 9.16ರ ಸುಮಾರಿಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 166.86 ಪಾಯಿಂಟ್ಸ್ ಅಥವಾ ಶೇಕಡಾ 0.33ರಷ್ಟು ಏರಿಕೆಗೊಂಡು 50804.39 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 34 ಪಾಯಿಂಟ್ಸ್ ಅಥವಾ ಶೇಕಡಾ 0.22ರಷ್ಟು ಹೆಚ್ಚಾಗಿ 15242.50 ಪಾಯಿಂಟ್ಸ್ ಮುಟ್ಟಿದೆ.

ದಿನದ ವಹಿವಾಟು ಆರಂಭಗೊಂಡಾಗ 1220 ಷೇರುಗಳು ಏರಿಕೆಗೊಂಡರೆ, 291 ಷೇರುಗಳು ಕುಸಿದವು ಮತ್ತು 69 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಏರಿಕೆಗೊಂಡ ಪ್ರಮುಖ ಷೇರುಗಳು:
ಮಹೀಂದ್ರಾ ಮತ್ತು ಮಹೀಂದ್ರಾ ಷೇರುಗಳು ಸುಮಾರು 10 ರೂ. ಏರಿಕೆಗೊಂಡು 821.10 ರೂ.ಗೆ ತಲುಪಿದೆ. ಟೈಟಾನ್ ಕಂಪನಿಯ ಷೇರುಗಳು 19 ರೂ.ಗಳಷ್ಟು ಏರಿಕೆ ಕಂಡು 1,587.80 ರೂ., ಗ್ರಾಸಿಮ್‌ನ ಷೇರು ಸುಮಾರು 14 ರೂ. ಹೆಚ್ಚಾಗಿ 1,388.85 ರೂ., ಸಿಪ್ಲಾ ಷೇರು ಸುಮಾರು 9 ರೂ. ಏರಿಕೆಗೊಂಡು 944.25 ರೂ., ಅಲ್ಟ್ರಾ ಟೆಕ್ ಸಿಮೆಂಟ್ ಷೇರುಗಳು 51 ರೂ. ಹೆಚ್ಚಾಗಿ 6,607.30 ರೂ. ತಲುಪಿದೆ.
ಇಳಿಕೆಗೊಂಡ ಪ್ರಮುಖ ಷೇರುಗಳು:
ಜೆಎಸ್‌ಡಬ್ಲ್ಯೂ ಸ್ಟೀಲ್ ಷೇರುಗಳು ಸುಮಾರು 24 ರೂ.ಗಳ ಕುಸಿತ ಕಂಡು 676.90 ರೂ.ಗೆ ತಲುಪಿದೆ. ಟಾಟಾ ಸ್ಟೀಲ್ ಷೇರುಗಳು 28 ರೂ.ಗಳ ಕುಸಿತ ಕಂಡಿದ್ದು, 1,077.00 ರೂ., ಹಿಂಡಾಲ್ಕೊ ಷೇರು ಸುಮಾರು 6 ರೂ.ಗಳ ಕುಸಿತ ಕಂಡು 384.85 ರೂ., ಪವರ್ ಗ್ರಿಡ್ ಕಾರ್ಪೊರೇಶನ್‌ನ ಷೇರುಗಳು ಸುಮಾರು 2 ರೂ.ಗಳನ್ನು ಕುಸಿದು 231.30 ರೂ., ಐಸಿಐಸಿಐ ಬ್ಯಾಂಕ್ ಷೇರುಗಳು ಸುಮಾರು 4 ರೂ.ಗಳ ಕುಸಿತ ಕಂಡು 646.80 ರೂ. ಮುಟ್ಟಿದೆ.


Click it and Unblock the Notifications