For Quick Alerts
ALLOW NOTIFICATIONS  
For Daily Alerts

Opening Bell: ಏರಿಕೆ ಮುಂದುವರಿಸಿದ ಸೆನ್ಸೆಕ್ಸ್, ನಿಫ್ಟಿ

|

ಭಾರತೀಯ ಷೇರುಪೇಟೆ ಶುಕ್ರವಾರ ಸಮತಟ್ಟಾಗಿ ವಹಿವಾಟು ಆರಂಭಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 5.01 ಪಾಯಿಂಟ್ ಏರಿಕೆಗೊಂಡಿದೆ.

 

ಬೆಳಿಗ್ಗೆ 9.16 ಸುಮಾರಿಗೆ ಬಿಎಸ್‌ಇ ಸೆನ್ಸೆಕ್ಸ್‌ 5.01 ಅಥವಾ ಶೇಕಡಾ 0.01ರಷ್ಟು 52237.44, ಮತ್ತು ನಿಫ್ಟಿ 0.90 ಪಾಯಿಂಟ್ ಅಥವಾ 0.01% ಏರಿಕೆ ಕಂಡು 15691.30 ಕ್ಕೆ ತಲುಪಿದೆ.
ದಿನದ ವಹಿವಾಟು ಆರಂಭವಾದಾಗ ಸುಮಾರು 1242 ಷೇರುಗಳು ಏರಿಕೆಗೊಂಡರೆ, 335 ಷೇರುಗಳು ಕುಸಿದವು, ಮತ್ತು 69 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

 
Opening Bell:  ಏರಿಕೆ ಮುಂದುವರಿಸಿದ ಸೆನ್ಸೆಕ್ಸ್, ನಿಫ್ಟಿ

ಏರಿಕೆಗೊಂಡ ಷೇರುಗಳು:
ಒಎನ್‌ಜಿಸಿಯ ಷೇರು ಸುಮಾರು 4 ರೂ.ಗಳ ಲಾಭದೊಂದಿಗೆ 126.00 ರೂ., ಮಹೀಂದ್ರಾ ಮತ್ತು ಮಹೀಂದ್ರಾ ಷೇರು 7 ರೂ.ಗಳ ಲಾಭದೊಂದಿಗೆ 809.35 ರೂ., ಲಾರ್ಸೆನ್‌ರ ಷೇರು 14 ರೂಗಳ ಏರಿಕೆಯೊಂದಿಗೆ 1,525.00 ರೂ., ಹೀರೋ ಮೊಟೊಕಾರ್ಪ್‌ನ ಷೇರು 17 ರೂ.ಗಳ ಏರಿಕೆ ಕಂಡು 3,025.45 ರೂ., ಟೈಟಾನ್ ಕಂಪನಿಯ ಷೇರು ಸುಮಾರು 8 ರೂ.ಗಳ ಲಾಭದೊಂದಿಗೆ 1,699.30 ರೂ.ಗೆ ಪ್ರಾರಂಭವಾಯಿತು.

ಇಳಿಕೆಗೊಂಡ ಷೇರುಗಳು:
ಜೆಎಸ್‌ಡಬ್ಲ್ಯೂ ಸ್ಟೀಲ್‌ನ ಷೇರುಗಳು ಸುಮಾರು 6 ರೂ.ಗಳಷ್ಟು ಇಳಿಕೆಯಾಗಿ 707.85 ರೂ., ನೆಸ್ಲೆ ಷೇರುಗಳು ಸುಮಾರು 170 ರೂ.ಗಳಷ್ಟು ಇಳಿಕೆಯಾಗಿ 17,629.30 ರೂ., ಎಚ್‌ಯುಎಲ್ ಷೇರುಗಳು 17 ರೂ.ಗೆ ಇಳಿದು 2,346.45 ರೂ., ಮಾರುತಿ ಸುಜುಕಿಯ ಷೇರು 44 ರೂ. ಕುಸಿದು 7,165.10 ರೂ.ಗೆ ಪ್ರಾರಂಭವಾಗಿದೆ. ಇನ್ನು ಶ್ರೀ ಸಿಮೆಂಟ್ ಷೇರುಗಳು ಸುಮಾರು 118 ರೂ.ಗಳಷ್ಟು ಇಳಿಕೆಯಾಗಿ 28,229.95 ರೂ. ತಲುಪಿದೆ.

English summary

Indices Open Flat Ahed RBI Policy Outcome

Sensex was up 5.01 points or 0.01% at 52237.44, and the Nifty was up 0.90 points or 0.01% at 15691.30.
Story first published: Friday, June 4, 2021, 10:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X