ಭಾರತೀಯ ಷೇರುಪೇಟೆಯು ಶುಕ್ರವಾರ ಏರಿಕೆಯ ಹಾದಿಯಲ್ಲಿ ಮುಂದುವರಿದಿದ್ದು, ಸಕಾರಾತ್ಮಕ ಆರಂಭವನ್ನ ಪಡೆದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 150 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 50 ಪಾಯಿಂಟ್ಸ್ ಹೆಚ್ಚಳಗೊಂಡಿದೆ.
ಬೆಳಿಗ್ಗೆ 9.17ರ ಸುಮಾರಿಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 145.80 ಅಥವಾ ಶೇಕಡಾ 0.28ರಷ್ಟು ಹೆಚ್ಚಾಗಿ 52844.80 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 49.50 ಪಾಯಿಂಟ್ಸ್ ಅಥವಾ ಶೇಕಡಾ 0.31ರಷ್ಟು ಹೆಚ್ಚಾಗಿ 15840 ಪಾಯಿಂಟ್ಸ್ ಮುಟ್ಟಿದೆ.
ದಿನದ ವಹಿವಾಟು ಆರಂಭದಲ್ಲಿ 1359 ಷೇರುಗಳು ಏರಿಕೆಗೊಂಡರೆ, 493 ಷೇರುಗಳು ಕುಸಿದವು ಮತ್ತು 66 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಏರಿಕೆಗೊಂಡ ಷೇರುಗಳು:
ಟಾಟಾ ಸ್ಟೀಲ್ ಷೇರುಗಳು 28 ರೂ. ಏರಿಕೆಗೊಂಡು 1,141.00 ರೂಪಾಯಿಗೆ ಪ್ರಾರಂಭವಾಗಿದ್ದು, ಜೆಎಸ್‌ಡಬ್ಲ್ಯು ಸ್ಟೀಲ್‌ನ ಷೇರುಗಳು 11 ರೂ.ಗಳ ಏರಿಕೆ ಕಂಡು 689.50 ರೂ. ತಲುಪಿವೆ. ಅದಾನಿ ಪೋರ್ಟ್ಸ್ ಷೇರುಗಳು 7 ರೂ.ಗಳ ಲಾಭದೊಂದಿಗೆ 716.60 ರೂ., ಎಚ್‌ಸಿಎಲ್ ಟೆಕ್ ಷೇರುಗಳು 11 ರೂ.ಗಳ ಲಾಭದೊಂದಿಗೆ 1,001.05 ರೂ., ಟೆಕ್ ಮಹೀಂದ್ರಾ ಷೇರುಗಳು 10 ರೂಗಳ ಲಾಭದೊಂದಿಗೆ 1,090.30 ರೂಗಳಲ್ಲಿ ಪ್ರಾರಂಭವಾಯಿತು.
ಇಳಿಕೆಗೊಂಡ ಷೇರುಗಳು:
ರಿಲಯನ್ಸ್ ಷೇರು ಇಂದು ಸುಮಾರು 36 ರೂ. ಕುಸಿದು 2,117.35 ರೂ.ಗೆ ಪ್ರಾರಂಭವಾಯಿತು, ವಿಪ್ರೋದ ಷೇರು ಸುಮಾರು 6 ರೂ. ಇಳಿಕೆಗೊಂಡು 542.70 ರೂ.ಗೆ ತಲುಪಿದೆ. ಎಚ್‌ಯುಎಲ್‌ನ ಷೇರುಗಳು 29 ರೂ.ಗಳಷ್ಟು ಇಳಿಕೆಯಾಗಿ 2,461.55 ರೂ., ಇಂಡಸ್‌ಇಂಡ್ ಬ್ಯಾಂಕ್ ಷೇರುಗಳು ಸುಮಾರು 8 ರೂ.ಗಳಷ್ಟು ಇಳಿಕೆಯಾಗಿ 992.65 ರೂ., ಎಸ್‌ಬಿಐ ಲೈಫ್‌ನ ಷೇರುಗಳು ಸುಮಾರು 6 ರೂ.ಗಳಷ್ಟು ಇಳಿಕೆಯಾಗಿ 996.00 ರೂ. ತಲುಪಿದೆ.


Click it and Unblock the Notifications