For Quick Alerts
ALLOW NOTIFICATIONS  
For Daily Alerts

ಕುಸಿದಿದ್ದ ಷೇರುಪೇಟೆ ಚೇತರಿಕೆ: ಸೆನ್ಸೆಕ್ಸ್‌ 267 ಪಾಯಿಂಟ್ಸ್‌ ಹೆಚ್ಚಳ

|

ಭಾರತೀಯ ಷೇರುಪೇಟೆ ಮಂಗಳವಾರ ಏರಿಕೆಯೊಂದಿಗೆ ವಹಿವಾಟು ಪ್ರಾರಂಭಿಸಿದೆ. ಇಂದು ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಸುಮಾರು 267 ಪಾಯಿಂಟ್‌ಗಳ ಲಾಭದೊಂದಿಗೆ 48,952 ಮಟ್ಟದಲ್ಲಿ ಪ್ರಾರಂಭವಾಯಿತು. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 84.30 ಪಾಯಿಂಟ್‌ಗಳ ಲಾಭದೊಂದಿಗೆ 14715.60 ಪಾಯಿಂಟ್‌ಗಳಲ್ಲಿ ತೆರೆಯಿತು.

ಬೆಳಿಗ್ಗೆ 9.16ರ ಸುಮಾರಿಗೆ ಬಿಎಸ್‌ಇ ಸೆನ್ಸೆಕ್ಸ್‌ 267.74 ಪಾಯಿಂಟ್ಸ್ ಅಥವಾ ಶೇಕಡಾ 0.57ರಷ್ಟು ಹೆಚ್ಚಾಗಿ 48,986.26 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 84.30 ಪಾಯಿಂಟ್ಸ್ ಅಥವಾ ಶೇಕಡಾ 0.58ರಷ್ಟು ಏರಿಕೆಗೊಂಡು 14,718.50 ಪಾಯಿಂಟ್ಸ್ ತಲುಪಿದೆ.

ಷೇರುಪೇಟೆ ಚೇತರಿಕೆ: ಸೆನ್ಸೆಕ್ಸ್‌ 267 ಪಾಯಿಂಟ್ಸ್‌ ಹೆಚ್ಚಳ

ಇಂದು ವಹಿವಾಟು ಆರಂಭಗೊಂಡಾಗ 1,313 ಷೇರುಗಳು ಏರಿಕೆಗೊಂಡರೆ, 195 ಷೇರುಗಳು ಕುಸಿದವು ಮತ್ತು 39 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಎಸ್‌ಬಿಐ ಲೈಫ್ ಸ್ಟಾಕ್ 46 ರೂ.ಗಳ ಏರಿಕೆ ಕಂಡು 1,005.00 ರೂ. , ಇಂಡಸ್‌ಇಂಡ್ ಬ್ಯಾಂಕಿನ ಷೇರು ಸುಮಾರು 16 ರೂ.ಗಳ ಏರಿಕೆ ಕಂಡು 929.55 ರೂ.ಗೆ ಪ್ರಾರಂಭವಾಯಿತು. ಹಿಂಡಾಲ್ಕೊ ಷೇರು ಸುಮಾರು 5 ರೂ. ಗಳಿಸಿ 375.00 ರೂ., ಆಕ್ಸಿಸ್ ಬ್ಯಾಂಕ್ ಷೇರುಗಳು ಸುಮಾರು 11 ರೂ.ಗಳ ಏರಿಕೆ ಕಂಡು 713.70 ರೂ., ಐಸಿಐಸಿಐ ಬ್ಯಾಂಕ್ ಷೇರುಗಳು ಸುಮಾರು 8 ರೂ.ಗಳ ಏರಿಕೆ ಕಂಡು 604.65 ರೂ. ತಲುಪಿದೆ.

English summary

Indices Open Higher Amid Mixed Global Cues: Sensex Up 267 Points

Sensex was up 267.74 points or 0.55% at 48986.26, and the Nifty was up 84.30 points or 0.58% at 14718.50.
Story first published: Tuesday, May 4, 2021, 9:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X