ಭಾರತೀಯ ಷೇರುಪೇಟೆ ಮಂಗಳವಾರ ಕುಸಿತದ ಬಳಿಕ ಬುಧವಾರ ಆರಂಭಿಕ ವಹಿವಾಟಿನಲ್ಲಿ ಸಕಾರಾತ್ಮಕ ಆರಂಭ ಪಡೆದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 212 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 61 ಪಾಯಿಂಟ್ಸ್ ಹೆಚ್ಚಳಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 212.52 ಪಾಯಿಂಟ್ಸ್ ಅಥವಾ ಶೇಕಡಾ 0.40ರಷ್ಟು ಹೆಚ್ಚಾಗಿ 52762.18 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 61.90 ಪಾಯಿಂಟ್ಸ್ ಅಥವಾ ಶೇ. 0.39ರಷ್ಟು ಏರಿಕೆಗೊಂಡು 15810.40 ಪಾಯಿಂಟ್ಸ್ ಮುಟ್ಟಿದೆ.
ದಿನದ ವಹಿವಾಟು ಆರಂಭಗೊಂಡಾಗ 1553 ಷೇರುಗಳು ಏರಿಕೆಗೊಂಡರೆ, 554 ಷೇರುಗಳು ಕುಸಿದವು ಮತ್ತು 64 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಏರಿಕೆಗೊಂಡ ಷೇರುಗಳು:
ಮಾರುತಿ ಸುಜುಕಿಯ ಷೇರು 119 ರೂ.ಗಳ ಏರಿಕೆ ಕಂಡು 7,606.95 ರೂ., ಸಿಪ್ಲಾ ಷೇರು 5 ರೂಪಾಯಿ ಏರಿಕೆಗೊಂಡು 984.85 ರೂ., ಇನ್ಫೋಸಿಸ್ ಷೇರುಗಳು 16 ರೂ.ಗಳ ಏರಿಕೆ ಕಂಡು 1,579.00 ರೂ., ಹಿಂಡಾಲ್ಕೊ ಷೇರು ಸುಮಾರು 4 ರೂ.ಗಳ ಲಾಭದೊಂದಿಗೆ 378.20 ರೂಗಳಲ್ಲಿ ಪ್ರಾರಂಭವಾಯಿತು. ಟೈಟಾನ್ ಕಂಪನಿಯ ಷೇರು 17 ರೂ. ಹೆಚ್ಚಾಗಿ 1,748.10 ರೂ.ಗೆ ಪ್ರಾರಂಭವಾಯಿತು.
ಇಳಿಕೆಗೊಂಡ ಷೇರುಗಳು:
ಎನ್‌ಟಿಪಿಸಿಯ ಷೇರುಗಳು ಸುಮಾರು 1 ರೂ.ಗೆ ಇಳಿದು 116.95 ರೂ., ಪವರ್ ಗ್ರಿಡ್ ಕಾರ್ಪೊರೇಶನ್‌ನ ಷೇರುಗಳು ಸುಮಾರು 1 ರೂ.ನಿಂದ ಇಳಿದು 235.05 ರೂ., ಹೀರೋ ಮೊಟೊಕಾರ್ಪ್‌ನ ಷೇರುಗಳು ಸುಮಾರು 7 ರೂ.ಗಳಷ್ಟು ಇಳಿಕೆಯಾಗಿ 2,920.45 ರೂ., ಐಸಿಐಸಿಐ ಬ್ಯಾಂಕಿನ ಷೇರುಗಳು ಸುಮಾರು 1 ರೂ.ಗೆ ಇಳಿದು 639.10 ರೂ., ಗ್ರೇಸಿಮ್‌ನ ಷೇರು 1,502.20 ರೂ.ಗೆ ಪ್ರಾರಂಭವಾಯಿತು.


Click it and Unblock the Notifications