ಸೆನ್ಸೆಕ್ಸ್ 462 ಪಾಯಿಂಟ್ಸ್ ಏರಿಕೆ: ನಿಫ್ಟಿ 133 ಪಾಯಿಂಟ್ಸ್‌ ಹೆಚ್ಚಳ

ಜಾಗತಿಕ ಸಕಾರಾತ್ಮಕ ಸೂಚನೆಗಳ ಹಿನ್ನೆಲೆಯಲ್ಲಿ ಭಾರತದ ಷೇರುಪೇಟೆ ಗುರುವಾರ ಭರ್ಜರಿ ಏರಿಕೆ ಕಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 463 ಪಾಯಿಂಟ್ಸ್ ಹೆಚ್ಚಾಗಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 133 ಪಾಯಿಂಟ್ಸ್ ಏರಿಕೆಗೊಂಡಿದೆ.

ಬೆಳಿಗ್ಗೆ 9.16ಕ್ಕೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 462.65 ಪಾಯಿಂಟ್ಸ್ ಅಥವಾ ಶೇಕಡಾ 0.78ರಷ್ಟು ಹೆಚ್ಚಾಗಿ 59,652.38 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.75ರಷ್ಟು ಅಥವಾ 132.90 ಪಾಯಿಂಟ್ಸ್ ಏರಿಕೆಗೊಂಡು 17,778.90 ಪಾಯಿಂಟ್ಸ್ ಏರಿಕೆಗೊಂಡಿದೆ.

ದಿನದ ವಹಿವಾಟಿನ ಆರಂಭದಲ್ಲಿ 1494 ಷೇರುಗಳು ಏರಿಕೆಗೊಂಡರೆ, 252 ಷೇರುಗಳು ಕುಸಿದವು ಮತ್ತು 63 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಏರಿಕೆಗೊಂಡ ಪ್ರಮುಖ ಷೇರುಗಳು

ಏರಿಕೆಗೊಂಡ ಪ್ರಮುಖ ಷೇರುಗಳು

ಟೈಟಾನ್ ಕಂಪನಿಯ ಷೇರು ರೂ .1,339.35 ಕ್ಕೆ ಪ್ರಾರಂಭವಾಯಿತು, ರೂ .191 ಹೆಚ್ಚಾಗಿದೆ. ಟಾಟಾ ಮೋಟಾರ್ಸ್ ನ ಷೇರುಗಳು ರೂ 26.85 ಏರಿಕೆಯಾಗಿ 362.90 ರೂ. ತಲುಪಿದೆ. ಐಷರ್ ಮೋಟಾರ್ಸ್ ನ ಷೇರುಗಳು ರೂ. 27 ರಷ್ಟು ಏರಿಕೆಯಾಗಿ ರೂ. 2774.90 ಕ್ಕೆ ಪ್ರಾರಂಭವಾಯಿತು. ಇಂಡಸ್‌ಇಂಡ್ ಬ್ಯಾಂಕ್ ಷೇರುಗಳು 1150.00 ರಲ್ಲಿ ಆರಂಭವಾಗಿದ್ದು, ರೂ .18 ರಷ್ಟು ಹೆಚ್ಚಾಗಿದೆ. ಎಸ್‌ಬಿಐ ಲೈಫ್‌ನ ಷೇರುಗಳು ಸುಮಾರು 16,227.60 ರೂಪಾಯಿಗಳ ಮಟ್ಟದಲ್ಲಿ ಪ್ರಾರಂಭವಾದವು.

52 ವಾರಗಳ ಗರಿಷ್ಠ ಮಟ್ಟ ತಲುಪಿದ ಟಾಟಾ ಮೋಟಾರ್ಸ್

52 ವಾರಗಳ ಗರಿಷ್ಠ ಮಟ್ಟ ತಲುಪಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಷೇರುಗಳು ರಿಕವರಿ ಮೋಡ್‌ನಲ್ಲಿದ್ದು ಇಂದು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಟಾಟಾ ಮೋಟಾರ್ಸ್ 52 ವಾರಗಳ ಗರಿಷ್ಟ ಮಟ್ಟವನ್ನು ತಲುಪಿದ್ದು, ಬಿಎಸ್‌ಇ ನಲ್ಲಿ ಪ್ರಸ್ತುತ ಗರಿಷ್ಠ ಪ್ರಮಾಣ 367.65 ರೂಪಾಯಿವರೆಗೆ ತಲುಪಿದೆ.

ಜಾಗ್ವಾರ್ ಲ್ಯಾಂಡ್ ರೋವರ್ (ಜೆಎಲ್‌ಆರ್), ವಾಣಿಜ್ಯ ವಾಹನ (ಸಿವಿ) ಮತ್ತು ಪ್ರಯಾಣಿಕ ವಾಹನ (ಪಿವಿ) ಚೇತರಿಸಿಕೊಳ್ಳುವ ಭರವಸೆಯೊಂದಿಗೆ ಟಾಟಾ ಮೋಟಾರ್ಸ್‌ನ ಷೇರುಗಳು ಬಿಎಸ್‌ಇನಲ್ಲಿ ಏರಿಕೆ ದಾಖಲಿಸಿದೆ. ಕಂಪನಿಯ ಸ್ಟಾಕ್ ಜೂನ್ 15, 2021 ರಂದು 52 ವಾರಗಳ ಗರಿಷ್ಠ ಮಟ್ಟವಾದ ರೂ. 361 ಕ್ಕೆ ತಲುಪಿತ್ತು. ಇದು ಫೆಬ್ರವರಿ 3, 2015 ರಂದು ರೂ .606 ರ ಗರಿಷ್ಠ ದಾಖಲೆಯನ್ನು ಮುಟ್ಟಿತ್ತು.

 

ಇಳಿಕೆಗೊಂಡ ಪ್ರಮುಖ ಷೇರುಗಳು

ಇಳಿಕೆಗೊಂಡ ಪ್ರಮುಖ ಷೇರುಗಳು

ಹಿಂಡಾಲ್ಕೊ ಷೇರು ರೂ. 477.40 ಕ್ಕೆ ಆರಂಭವಾಯಿತು, ರೂ. 18 ಇಳಿಕೆಯಾಗಿದೆ. ಎಸ್‌ಬಿಐ ಲೈಫ್‌ನ ಷೇರುಗಳು ರೂ. 229.00 ಕ್ಕೆ ಪ್ರಾರಂಭವಾದವು, ಸುಮಾರು ರೂ. 33 ರಷ್ಟು ಇಳಿಕೆಯಾಗಿದೆ. ಕೋಲ್ ಇಂಡಿಯಾದ ಷೇರುಗಳು ರೂ. 192.80 ಕ್ಕೆ ಆರಂಭವಾಗಿದ್ದು, ಸುಮಾರು 5 ರೂಪಾಯಿಗಳಷ್ಟು ಇಳಿಕೆಯಾಗಿದೆ. ಜೆಎಸ್‌ಡಬ್ಲ್ಯೂ ಸ್ಟೀಲ್‌ನ ಷೇರುಗಳು ರೂ 163 ರಷ್ಟು ಇಳಿಕೆಯಾಗಿ ರೂ 663.20 ಕ್ಕೆ ಪ್ರಾರಂಭವಾಯಿತು.

ಷೇರಿನಲ್ಲಿ ಹೂಡಿಕೆ ಮಾಡುವುದು ಹೇಗೆ?

ಷೇರಿನಲ್ಲಿ ಹೂಡಿಕೆ ಮಾಡುವುದು ಹೇಗೆ?

ಒಂದು ವೇಳೆ ಷೇರು ಮಾರುಕಟ್ಟೆಯಲ್ಲಿ ನೀವು ಹೂಡಿಕೆ ಮಾಡುವ ಬಯಕೆ ಇದ್ದರೆ, ಮೊದಲು ಸ್ಟಾಕ್ ಬ್ರೋಕರ್‌ನೊಂದಿಗೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಬೇಕು. ಷೇರುಗಳನ್ನು ನೇರವಾಗಿ ಷೇರು ವಿನಿಮಯ ಕೇಂದ್ರದಿಂದ ಖರೀದಿಸಲು ಸಾಧ್ಯವಿಲ್ಲ. ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಲು ಪ್ಯಾನ್, ಆಧಾರ್ ಮತ್ತು ಬ್ಯಾಂಕ್ ಖಾತೆ ಅಗತ್ಯವಿದೆ. ನೀವು ಈ ದಾಖಲೆಗಳನ್ನು ಹೊಂದಿದ್ದರೆ, ನೀವು ಸುಲಭವಾಗಿ ಬ್ರೋಕರ್‌ನೊಂದಿಗೆ ಖಾತೆಯನ್ನು ತೆರೆಯಬಹುದು ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು.

ಡಾಲರ್ ಎದುರು ರೂಪಾಯಿ

ಡಾಲರ್ ಎದುರು ರೂಪಾಯಿ

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಇಂದು ಬಲವಾಗಿ ತೆರೆಯಿತು. ಇಂದು ರೂಪಾಯಿ 19 ಪೈಸೆ ಬಲದೊಂದಿಗೆ ಡಾಲರ್ ಎದುರು 74.79 ರೂ. ತಲುಪಿದೆ. ಅದೇ ಸಮಯದಲ್ಲಿ, ಬುಧವಾರ, ಡಾಲರ್ ಎದುರು ರೂಪಾಯಿ 53 ಪೈಸೆ ದುರ್ಬಲಗೊಂಡು 74.98 ರೂ. ತಲುಪಿತ್ತು. ಡಾಲರ್‌ಗಳ ವಹಿವಾಟನ್ನು ಬಹಳ ಬುದ್ಧಿವಂತಿಕೆಯಿಂದ ಮಾಡಬೇಕಾಗಿದೆ, ಇಲ್ಲದಿದ್ದರೆ ಹೂಡಿಕೆಯು ತೊಂದರೆಗೊಳಗಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+