For Quick Alerts
ALLOW NOTIFICATIONS  
For Daily Alerts

ಕೊರೊನಾ ಎದುರು ಜಗ್ಗದ ಷೇರುಪೇಟೆ: ಸೆನ್ಸೆಕ್ಸ್ 600 ಪಾಯಿಂಟ್ಸ್‌ ಏರಿಕೆ

|

ಜಾಗತಿಕ ಮಟ್ಟದಲ್ಲಿ ಸಕಾರಾತ್ಮಕ ಸೂಚನೆಯ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆ ಸೋಮವಾರ ಏರಿಕೆ ದಾಖಲಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 600 ಪಾಯಿಂಟ್ಸ್‌ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 162 ಪಾಯಿಂಟ್ಸ್ ಹೆಚ್ಚಳಗೊಂಡಿದೆ.

 

ಬೆಳಿಗ್ಗೆ 9.45ರ ಸುಮಾರಿಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 613 ಪಾಯಿಂಟ್ಸ್‌ ಅಥವಾ ಶೇಕಡಾ 1.35ರಷ್ಟು ಏರಿಕೆಗೊಂಡು 48,524 ಪಾಯಿಂಟ್ಸ್‌ಗೆ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 183 ಪಾಯಿಂಟ್ಸ್ ಅಥವಾ ಶೇಕಡಾ 1.29ರಷ್ಟು ಏರಿಕೆಗೊಂಡು 14,523 ಪಾಯಿಂಟ್ಸ್‌ಗೆ ತಲುಪಿದೆ.

 
ಕೊರೊನಾ ಎದುರು ಜಗ್ಗದ ಷೇರುಪೇಟೆ: ಸೆನ್ಸೆಕ್ಸ್ 600 ಪಾಯಿಂಟ್ಸ್‌ ಏರಿಕೆ

ಆರಂಭಿಕ ವಹಿವಾಟಿನಲ್ಲಿ ಇಂದು ಸುಮಾರು 1214 ಷೇರುಗಳು ಏರಿಕೆಗೊಂಡರೆ, 263 ಷೇರುಗಳು ಕುಸಿದವು, ಮತ್ತು 79 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಐಸಿಐಸಿಐ ಬ್ಯಾಂಕ್ ಷೇರುಗಳು ಸುಮಾರು 22 ರೂ.ಗಳ ಏರಿಕೆ ಕಂಡು 591.70 ರೂ., ಒಎನ್‌ಜಿಸಿ ಷೇರುಗಳು ಸುಮಾರು 3 ರಿಂದ 105.00 ರೂ., ಆಕ್ಸಿಸ್ ಬ್ಯಾಂಕ್ ಷೇರುಗಳು ತಲಾ 2 ರೂ.ಗಳಷ್ಟು ಹೆಚ್ಚಳವಾಗಿ 685.40 ರೂ., ಎಸ್‌ಬಿಐ ಷೇರು ಸುಮಾರು 6 ರೂ.ಗಳ ಏರಿಕೆ ಕಂಡು 342.60 ರೂ., ಹಿಂಡಾಲ್ಕೊ ಷೇರು ಸುಮಾರು 5 ರೂ.ಗಳಿಂದ 354.85 ರೂ.ಗಳ ಏರಿಕೆಗೊಂಡಿದೆ. ಹೆಚ್‌ಸಿಎಲ್‌ ಟೆಕ್ನಾಲಜೀಸ್ ಷೇರುಗಳು ಶೇಕಡಾ 3ರಷ್ಟು ಕುಸಿತ ಕಂಡಿವೆ.

English summary

Indices Open Higher Amid Positive Golbal Cues: Sensex Up 600 Points

Sensex was up 613 points or 1.35% at 48,524, and the Nifty was up 183 points or 1.29% at 14,523
Story first published: Monday, April 26, 2021, 10:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X