ಜಾಗತಿಕ ಸಕಾರಾತ್ಮಕ ಸೂಚನೆಗಳ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆ ಸೋಮವಾರ ಭರ್ಜರಿ ಆರಂಭ ಪಡೆದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 269 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಫೇಟೆ ನಿಫ್ಟಿ 83 ಪಾಯಿಂಟ್ಸ್ ಹೆಚ್ಚಳಗೊಂಡಿದೆ.
ಬೆಳಿಗ್ಗೆ 9.16ಕ್ಕೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 269.96 ಪಾಯಿಂಟ್ಸ್ ಅಥವಾ ಶೇಕಡಾ 0.52ರಷ್ಟು ಏರಿಕೆಗೊಂಡು 52,656.15 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 83.20 ಪಾಯಿಂಟ್ಸ್ ಅಥವಾ ಶೇಕಡಾ 0.53 ಪಾಯಿಂಟ್ಸ್ ಹೆಚ್ಚಾಗಿ 15773 ಪಾಯಿಂಟ್ಸ್ ಮುಟ್ಟಿದೆ.
ದಿನದ ವಹಿವಾಟು ಆರಂಭಗೊಂಡಾಗ 1672 ಷೇರುಗಳು ಏರಿಕೆಗೊಂಡರೆ, 304 ಷೇರುಗಳು ಕುಸಿದವು ಮತ್ತು 88 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ.

ಏರಿಕೆಗೊಂಡ ಷೇರುಗಳು:
ಐಸಿಐಸಿಐ ಬ್ಯಾಂಕಿನ ಷೇರುಗಳು 8 ರೂ. ಏರಿಕೆಗೊಂಡು 646.85 ರೂಪಾಯಿಗೆ ಪ್ರಾರಂಭವಾಗಿದ್ದು, ಟಾಟಾ ಮೋಟಾರ್ಸ್‌ನ ಷೇರುಗಳು ಸುಮಾರು 3 ರೂ.ಗಳ ಲಾಭದೊಂದಿಗೆ 309.75 ರೂ., ಒಎನ್‌ಜಿಸಿಯ ಷೇರು ಸುಮಾರು 1 ರೂ.ಗಳ ಲಾಭದೊಂದಿಗೆ 119.30 ರೂ., ಮಾರುತಿ ಸುಜುಕಿಯ ಷೇರು ಸುಮಾರು 83 ರೂ.ಗಳ ಲಾಭದೊಂದಿಗೆ 7,508.80 ರೂಗಳಲ್ಲಿ ಪ್ರಾರಂಭವಾಯಿತು. ಅಲ್ಟ್ರಾ ಟೆಕ್ ಸಿಮೆಂಟ್‌ನ ಷೇರು 73 ರೂ.ಗಳ ಏರಿಕೆ ಕಂಡು 6,972.95 ರೂ. ತಲುಪಿದೆ.
ಇಳಿಕೆಗೊಂಡ ಷೇರುಗಳು:
ಬಜಾಜ್ ಫಿನ್‌ಸರ್ವ್‌ನ ಷೇರುಗಳು 85 ರೂ.ಗಳಷ್ಟು ಇಳಿಕೆಯಾಗಿ 12,769.55 ರೂ., ಎಚ್‌ಡಿಎಫ್‌ಸಿ ಬ್ಯಾಂಕಿನ ಷೇರುಗಳು ಸುಮಾರು 3 ರೂ.ಗಳಷ್ಟು ಇಳಿಕೆಯಾಗಿ 1,498.95 ರೂ., ಎಚ್‌ಯುಎಲ್‌ನ ಷೇರುಗಳು ಸುಮಾರು 5 ರೂ.ಗಳಷ್ಟು ಇಳಿಕೆಯಾಗಿ 2,446.30 ರೂ., ಟೆಕ್ ಮಹೀಂದ್ರಾ ಷೇರುಗಳು ಸುಮಾರು 2 ರೂ.ಗಳಷ್ಟು ಇಳಿಕೆಯಾಗಿ 1,050.10 ರೂ. ಮುಟ್ಟಿದೆ.


Click it and Unblock the Notifications