ಭಾರತೀಯ ಷೇರುಪೇಟೆಯು ಸೋಮವಾರ ಜಾಗತಿಕ ಸಕಾರಾತ್ಮಕ ಸೂಚನೆಗಳ ಹಿನ್ನೆಲೆಯಲ್ಲಿ ಉತ್ತಮ ಆರಂಭ ಪಡೆದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 228 ಪಾಯಿಂಟ್ಸ್ ಏರಿಕೆಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 69.30 ಪಾಯಿಂಟ್ಸ್ ಮುಟ್ಟಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇ. 0.43ರಷ್ಟು ಅಥವಾ 228.23 ಪಾಯಿಂಟ್ಸ್ ಏರಿಕೆಗೊಂಡು 52712.90 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ 69.30 ಪಾಯಿಂಟ್ಸ್ ಅಥವಾ ಶೇಕಡಾ 0.44ರಷ್ಟು ಹೆಚ್ಚಾಗಿ 15791.50 ಪಾಯಿಂಟ್ಸ್ ಮುಟ್ಟಿದೆ.

ಏರಿಕೆಗೊಂಡ ಷೇರುಗಳು:
ಈಚರ್ ಮೋಟಾರ್ಸ್‌ನ ಷೇರುಗಳು 28 ರೂ.ಗಳ ಏರಿಕೆ ಕಂಡು, 2,689.00 ರೂ., ಹಿಂಡಾಲ್ಕೊ ಷೇರು ಸುಮಾರು 3 ರೂ.ಗಳ ಲಾಭದೊಂದಿಗೆ 379.05 ರೂ., ಆಕ್ಸಿಸ್ ಬ್ಯಾಂಕಿನ ಷೇರುಗಳು ಸುಮಾರು 6 ರೂ.ಗಳ ಲಾಭದೊಂದಿಗೆ 756.30 ರೂ., ಎಚ್‌ಸಿಎಲ್ ಟೆಕ್ ಷೇರುಗಳು 7 ರೂಗಳ ಲಾಭದೊಂದಿಗೆ 992.10 ರೂ.ಗಳಲ್ಲಿ ಪ್ರಾರಂಭವಾಯಿತು. ಒಎನ್‌ಜಿಸಿಯ ಷೇರು ಸುಮಾರು 1 ರೂ.ಗಳ ಲಾಭದೊಂದಿಗೆ 119.20 ರೂ. ತಲುಪಿದೆ.
ಇಳಿಕೆಗೊಂಡ ಷೇರುಗಳು:
ಜೆಎಸ್‌ಡಬ್ಲ್ಯು ಸ್ಟೀಲ್‌ನ ಷೇರುಗಳು ಸುಮಾರು 3 ರೂ.ಗಳಷ್ಟು ಇಳಿಕೆಯಾಗಿ 668.10 ರೂ., ಟೆಕ್ ಮಹೀಂದ್ರಾ ಷೇರುಗಳು ಸುಮಾರು 1 ರೂ.ಗಳಷ್ಟು ಇಳಿಕೆಯಾಗಿ 1,088.35 ರೂ., ಡಾ. ರೆಡ್ಡಿಸ್ ಲ್ಯಾಬ್‌ನ ಷೇರುಗಳು 5,570.70 ರೂ.ಗೆ ಪ್ರಾರಂಭವಾದವು. ಇನ್ಫೋಸಿಸ್ ಷೇರುಗಳು ಸುಮಾರು 1 ರೂ.ಗಳಷ್ಟು ಇಳಿಕೆಯಾಗಿ 1,567.20 ರೂ. ಎಚ್‌ಡಿಎಫ್‌ಸಿಯ ಷೇರುಗಳು 3 ಕೋಟಿ ರೂ.ಗಳಷ್ಟು ಇಳಿಕೆಯಾಗಿ 2,472.30 ರೂ. ಮುಟ್ಟಿದೆ.


Click it and Unblock the Notifications