For Quick Alerts
ALLOW NOTIFICATIONS  
For Daily Alerts

ಷೇರುಪೇಟೆ: ಸೆನ್ಸೆಕ್ಸ್ 54 ಪಾಯಿಂಟ್ಸ್‌ ಕುಸಿತ, ನಿಫ್ಟಿ 39 ಪಾಯಿಂಟ್ಸ್‌ ಇಳಿಕೆ

|

ಭಾರತೀಯ ಷೇರುಪೇಟೆಯು ಕಳೆದ ವಾರದಲ್ಲಿ ಸಕಾರಾತ್ಮಕ ವಹಿವಾಟಿನ ಬಳಿಕ ಸೋಮವಾರ ಇಳಿಕೆಯ ಆರಂಭ ಪಡೆದಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 54 ಪಾಯಿಂಟ್ಸ್‌ ಕುಸಿದಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 39 ಪಾಯಿಂಟ್ಸ್‌ ಇಳಿಕೆಗೊಂಡಿದೆ.

 

1 ದಿನದ ವಿರಾಮದ ಬಳಿಕ ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ1 ದಿನದ ವಿರಾಮದ ಬಳಿಕ ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ

ಬೆಳಿಗ್ಗೆ 9.16ರ ಸುಮಾರಿಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ ಶೇಕಡಾ 0.10ರಷ್ಟು ಅಥವಾ 54.17 ಪಾಯಿಂಟ್ಸ್ ಕುಸಿದು 52420.59 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 39.40 ಪಾಯಿಂಟ್ಸ್ ಅಥವಾ ಶೇಕಡಾ 0.25ರಷ್ಟು ಇಳಿಕೆಗೊಂಡು 15760 ಪಾಯಿಂಟ್ಸ್‌ ದಾಖಲಾಗಿದೆ.

 

ದಿನದ ವಹಿವಾಟು ಆರಂಭಗೊಂಡಾಗ 1276 ಷೇರುಗಳು ಏರಿಕೆಗೊಂಡರೆ, 791 ಷೇರುಗಳು ಕುಸಿದವು ಮತ್ತು 106 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.

ಸೆನ್ಸೆಕ್ಸ್ 54 ಪಾಯಿಂಟ್ಸ್‌ ಕುಸಿತ, ನಿಫ್ಟಿ 39 ಪಾಯಿಂಟ್ಸ್‌ ಇಳಿಕೆ

ಏರಿಕೆಗೊಂಡ ಷೇರುಗಳು:
ಇನ್ಫೋಸಿಸ್ ಷೇರುಗಳು 23 ರೂ.ಗಳ ಏರಿಕೆ ಕಂಡು 1,469.80 ರೂ., ದೇವಿ ಲ್ಯಾಬ್ಸ್‌ನ ಷೇರುಗಳು 36 ರೂ. ಹೆಚ್ಚಾಗಿ 4,370.60 ಕ್ಕೆ ಪ್ರಾರಂಭವಾಗಿದ್ದು, ವಿಪ್ರೊ ಷೇರು ಸುಮಾರು 4 ರೂ.ಗಳ ಲಾಭದೊಂದಿಗೆ 557.85 ರೂಗಳಲ್ಲಿ ಪ್ರಾರಂಭವಾಯಿತು. ಟಿಸಿಎಸ್ ಷೇರುಗಳು 20 ರೂ.ಗಳ ಏರಿಕೆ ಕಂಡು 3,293.45 ರೂ., ಶ್ರೀ ಸಿಮೆಂಟ್‌ನ ಷೇರು 133 ರೂ.ಗಳ ಏರಿಕೆ ಕಂಡು 28,189.25 ರೂ. ತಲುಪಿದೆ.

ಇಳಿಕೆಗೊಂಡ ಷೇರುಗಳು:
ಅದಾನಿ ಪೋರ್ಟ್ಸ್ ಷೇರುಗಳು 84 ರೂ.ಗಳ ಕುಸಿತ ಕಂಡು 755.80 ರೂ., ಬಜಾಜ್ ಫೈನಾನ್ಸ್ ಷೇರುಗಳು ಸುಮಾರು 88 ರೂ.ಗಳಷ್ಟು ಇಳಿಕೆಯಾಗಿ 6,032.15 ರೂ., ಎನ್‌ಟಿಪಿಸಿ ಷೇರುಗಳು ಸುಮಾರು 1 ರೂ.ಗೆ ಇಳಿದು 117.35 ರೂ., ಕೋಲ್ ಇಂಡಿಯಾದ ಷೇರುಗಳು ಸುಮಾರು 1 ರೂ.ಗಳಷ್ಟು ಇಳಿಕೆಯಾಗಿ 161.25 ರೂ., ಬಜಾಜ್ ಫಿನ್‌ಸರ್ವ್‌ನ ಷೇರುಗಳು ಸುಮಾರು 117 ರೂ.ಗಳಷ್ಟು ಇಳಿಕೆಯಾಗಿ 11,790.05 ರೂ. ತಲುಪಿದೆ.

English summary

Indices Open Lower Amid Mixed Global Cues: Sensex Down 54 Points

Sensex was down 54.17 points or 0.10% at 52420.59, and the Nifty was down 39.40 points or 0.25% at 15760.
Story first published: Monday, June 14, 2021, 9:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X