ಭಾರತೀಯ ಷೇರುಪೇಟೆ ಬುಧವಾರ ಕುಸಿತದ ಬಳಿಕ ಗುರುವಾರ ಚೇತರಿಕೆ ಕಂಡಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 174 ಪಾಯಿಂಟ್ಸ್ ಏರಿಕೆಗೊಂಡಿದ್ದು, 52479.75 ಪಾಯಿಂಟ್ಸ್ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 47 ಪಾಯಿಂಟ್ಸ್ ಹೆಚ್ಚಾಗಿದ್ದು, 15734.70 ಪಾಯಿಂಟ್ಸ್ ತಲುಪಿದೆ.
ಇಂದು, ಬಿಎಸ್‌ಇಯಲ್ಲಿ ಒಟ್ಟು 1,287 ಕಂಪನಿಗಳಲ್ಲಿ ವಹಿವಾಟು ಪ್ರಾರಂಭವಾಗಿದ್ದು, ಈ ಪೈಕಿ ಸುಮಾರು 901 ಷೇರುಗಳು ಏರಿಕೆಗೊಂಡರೆ, 321 ಷೇರುಗಳು ಕುಸಿತದೊಂದಿಗೆ ಪ್ರಾರಂಭವಾಯಿತು. ಅದೇ ಸಮಯದಲ್ಲಿ, 65 ಕಂಪನಿಗಳ ಷೇರು ಬೆಲೆ ಹೆಚ್ಚಾಗದೆ ಅಥವಾ ಕಡಿಮೆಯಾಗದೆ ತೆರೆಯಿತು.

ಏರಿಕೆಗೊಂಡ ಷೇರುಗಳು:
ಇನ್ಫೋಸಿಸ್ ಷೇರುಗಳು 13 ರೂ.ಗಳ ಏರಿಕೆ ಕಂಡು 1,516.05 ರೂ., ಒಎನ್‌ಜಿಸಿಯ ಷೇರು ಸುಮಾರು 1 ರೂ.ಗಳ ಲಾಭದೊಂದಿಗೆ 124.30 ರೂ., ಟಾಟಾ ಸ್ಟೀಲ್‌ನ ಷೇರು ಸುಮಾರು 6 ರೂ.ಗಳ ಲಾಭದೊಂದಿಗೆ 1,106.20 ರೂ.ಗೆ ಪ್ರಾರಂಭವಾಯಿತು. ಇಂಡಸ್‌ಇಂಡ್ ಬ್ಯಾಂಕ್ ಷೇರುಗಳು ಸುಮಾರು 3 ರೂ.ಗಳ ಲಾಭದೊಂದಿಗೆ 1,002.15 ರೂ., ಟಿಸಿಎಸ್ ಷೇರುಗಳು 21 ರೂ.ಗಳ ಏರಿಕೆ ಕಂಡು 3,282.20 ರೂ. ತಲುಪಿದೆ.
ಇಳಿಕೆಗೊಂಡ ಷೇರುಗಳು:
ಕೊಟಕ್ ಮಹೀಂದ್ರಾ ಷೇರು 2 ರೂ. ಕುಸಿದು 1,734.30 ರೂ.ಗೆ ಪ್ರಾರಂಭವಾಗಿದ್ದು, ಬಜಾಜ್ ಆಟೋ ಷೇರುಗಳು ಸುಮಾರು 19 ರೂ.ಗಳಷ್ಟು ಇಳಿಕೆಯಾಗಿ 4,180.05 ರೂ., ಗ್ರೇಸಿಮ್‌ನ ಷೇರು ಸುಮಾರು 4 ರೂ. ಕುಸಿದು 1,495.00 ರೂ.ಗೆ ಪ್ರಾರಂಭವಾಯಿತು. ಏಷ್ಯನ್ ಪೇಂಟ್ಸ್‌ನ ಷೇರುಗಳು ಸುಮಾರು 6 ರೂ.ಗಳಷ್ಟು ಇಳಿಕೆಯಾಗಿ 2,981.05 ರೂ., ಡಾ.ರೆಡ್ಡಿ ಲ್ಯಾಬ್ಸ್‌ನ ಷೇರುಗಳು 9 ರೂ. ಇಳಿಕೆಗೊಂಡು 5,290.10 ರೂ.ಗೆ ಪ್ರಾರಂಭವಾಗಿದೆ.


Click it and Unblock the Notifications