ಭಾರತೀಯ ಷೇರುಪೇಟೆಯು ಮಂಗಳವಾರ ಕುಸಿತದ ಬಳಿಕ ಬುಧವಾರ ಆರಂಭಿಕ ವಹಿವಾಟಿನಲ್ಲಿ ಏರಿಕೆ ದಾಖಲಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 151 ಪಾಯಿಂಟ್ಸ್ ಏರಿಕೆಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 50 ಪಾಯಿಂಟ್ಸ್ ಹೆಚ್ಚಳಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 151.16 ಪಾಯಿಂಟ್ಸ್ ಅಥವಾ ಶೇಕಡಾ 0.29ರಷ್ಟು ಏರಿಕೆಗೊಂಡು 52739.87 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 50.40 ಪಾಯಿಂಟ್ಸ್ ಅಥವಾ ಶೇಕಡಾ 0.32ರಷ್ಟು ಹೆಚ್ಚಾಗಿ 15823.20 ಪಾಯಿಂಟ್ಸ್ ಮುಟ್ಟಿದೆ.
ದಿನದ ವಹಿವಾಟಿನ ಅಂತ್ಯಕ್ಕೆ 1608 ಷೇರುಗಳು ಏರಿಕೆಗೊಂಡರೆ, 429 ಷೇರುಗಳು ಕುಸಿದಿವೆ ಮತ್ತು 78 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಏರಿಕೆಗೊಂಡ ಷೇರುಗಳು:
ಹೀರೋ ಮೊಟೊಕಾರ್ಪ್ ಷೇರುಗಳು 43 ರೂ.ಗಳ ಏರಿಕೆ ಕಂಡು 2,950.00 ರೂ., ಹಿಂಡಾಲ್ಕೊ ಷೇರುಗಳು ಪ್ರತಿ ಷೇರಿಗೆ 5 ರೂ.ಗಳಷ್ಟು ಏರಿಕೆ ಕಂಡು 372.35 ರೂ., ಇಂಡಸ್‌ಇಂಡ್ ಬ್ಯಾಂಕ್ ಷೇರುಗಳು 13 ರೂ.ಗಳ ಏರಿಕೆ ಕಂಡು 1,013.30 ರೂ., ಅದಾನಿ ಬಂದರುಗಳ ಷೇರುಗಳು 8 ರೂ.ಗಳ ಏರಿಕೆ ಕಂಡು 750.75 ರೂ., ಜೆಎಸ್‌ಡಬ್ಲ್ಯು ಸ್ಟೀಲ್‌ನ ಷೇರುಗಳು ತಲಾ 5 ರೂ.ಗಳ ಲಾಭದೊಂದಿಗೆ 680.10 ರೂ. ತಲುಪಿದೆ.
ಇಳಿಕೆಗೊಂಡ ಷೇರುಗಳು:
ಟೆಕ್ ಮಹೀಂದ್ರಾ ಷೇರುಗಳು ಸುಮಾರು 6 ರೂ.ಗಳಷ್ಟು ಇಳಿಕೆಯಾಗಿ 1,050.75 ರೂ., ದೇವಿ ಲ್ಯಾಬ್ಸ್‌ನ ಷೇರುಗಳು ಸುಮಾರು 5 ರೂ.ಗಳಷ್ಟು ಇಳಿಕೆಯಾಗಿ 4,284.05 ರೂ., ಕೋಟಕ್ ಮಹೀಂದ್ರಾ ಷೇರುಗಳು ಸುಮಾರು 2 ರೂ.ಗಳಷ್ಟು ಇಳಿಕೆಯಾಗಿ 1,754.90 ರೂ., ಎಚ್‌ಸಿಎಲ್ ಟೆಕ್ ಷೇರುಗಳು ಸುಮಾರು 1 ರೂ.ಗೆ ಇಳಿದು 979.60 ರೂ. ಮುಟ್ಟಿದೆ.


Click it and Unblock the Notifications