ಭಾರತದಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಒಂದೆಡೆ ಇಳಿಯುತ್ತಾ ಸಾಗುತ್ತಿದ್ದು, ಭಾರತೀಯ ಷೇರುಪೇಟೆ ಸಕಾರಾತ್ಮಕವಾಗಿ ಏರುತ್ತಲೇ ಮುನ್ನುಗ್ಗಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 193 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 40 ಪಾಯಿಂಟ್ಸ್ ಹೆಚ್ಚಳಗೊಂಡಿದೆ.
ಬೆಳಿಗ್ಗೆ 10.30ರ ಸುಮಾರಿಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 0.39ರಷ್ಟು ಅಥವಾ 197.97 ಪಾಯಿಂಟ್ಸ್ ಏರಿಕೆಗೊಂಡು 50738.45 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.29ರಷ್ಟು ಅಥವಾ 44.25 ಪಾಯಿಂಟ್ಸ್ ಹೆಚ್ಚಾಗಿ 15219.85 ಪಾಯಿಂಟ್ಸ್‌ಗೆ ಮುಟ್ಟಿದೆ.

ದಿನದ ವಹಿವಾಟು ಆರಂಭದಲ್ಲಿ 1562 ಷೇರುಗಳು ಏರಿಕೆಗೊಂಡರೆ, 1004 ಷೇರುಗಳು ಕುಸಿದವು ಮತ್ತು 131 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಏರಿಕೆಗೊಂಡ ಷೇರುಗಳು:
ಎಸ್‌ಬಿಐ ಷೇರು ಸುಮಾರು 13 ರೂ.ಗಳ ಏರಿಕೆ ಕಂಡು 414.35 ರೂ., ಹೀರೋ ಮೊಟೊಕಾರ್ಪ್ ಷೇರುಗಳು ಸುಮಾರು 28 ರೂ.ಗಳ ಏರಿಕೆ ಕಂಡು 2,912.30 ರೂ.ಗೆ ತಲುಪಿದೆ. ಐಒಸಿ ಷೇರುಗಳು ರೂ. 105.20 ಕ್ಕೆ ಪ್ರಾರಂಭವಾಗಿದ್ದು, ಸುಮಾರು 1 ರೂ.ಹೆಚ್ಚಾದರೆ, ಬಿಪಿಸಿಎಲ್ ಷೇರುಗಳು ಸುಮಾರು 4 ರೂ ಹೆಚ್ಚಾಗಿ 465.00 ರೂ., ಸಿಪ್ಲಾ ಷೇರು ಸುಮಾರು 7 ರೂ.ಗಳ ಲಾಭದೊಂದಿಗೆ 934.05 ರೂ. ತಲುಪಿದೆ.
ಇಳಿಕೆಗೊಂಡ ಷೇರುಗಳು:
ಹಿಂಡಾಲ್ಕೊ ಷೇರು ಸುಮಾರು 4 ರೂ.ಗಳ ಕುಸಿತ ಕಂಡು 386.05 ರೂ., ಟಾಟಾ ಸ್ಟೀಲ್ ಷೇರುಗಳು 9 ರೂ.ಗಳ ಕುಸಿತ ಕಂಡು 1,104.00 ರೂ., ಶ್ರೀ ಸಿಮೆಂಟ್ ಷೇರು 247 ರೂ.ಗಳಿಂದ ಇಳಿದು 27,375.25 ರೂ., ಟೈಟಾನ್ ಕಂಪನಿಯ ಷೇರುಗಳು ಸುಮಾರು 9 ರೂ.ಗಳನ್ನು ಕಳೆದುಕೊಂಡು 1,529.30 ರೂ., ಜೆಎಸ್‌ಡಬ್ಲ್ಯೂ ಸ್ಟೀಲ್ ಷೇರುಗಳು ಸುಮಾರು 4 ರೂ.ಗಳ ಕುಸಿತ ಕಂಡು 694.40 ರೂ. ಮುಟ್ಟಿದೆ.


Click it and Unblock the Notifications