ಭಾರತೀಯ ಷೇರುಪೇಟೆ ಮಂಗಳವಾರ (ಮೇ 25) ಸಕಾರಾತ್ಮಕ ವಹಿವಾಟು ಆರಂಭಿಸಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ 252 ಪಾಯಿಂಟ್ಸ್ ಏರಿಕೆಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 84 ಪಾಯಿಂಟ್ಸ್ ಹೆಚ್ಚಳಗೊಂಡಿದೆ.
ಬೆಳಿಗ್ಗೆ 9.16ರ ಸುಮಾರಿಗೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.52ರಷ್ಟು ಅಥವಾ 252.64 ಪಾಯಿಂಟ್ಸ್ ಏರಿಕೆಗೊಂಡು 50904.54 ಪಾಯಿಂಟ್ಸ್‌ಗೆ ತಲುಪಿದರೆ, ಎನ್‌ಎಸ್ಇ ಸೂಚ್ಯಂಕ ನಿಫ್ಟಿ 84.20 ಪಾಯಿಂಟ್ಸ್ ಅಥವಾ ಶೇಕಡಾ 0.55ರಷ್ಟು ಹೆಚ್ಚಾಗಿ 15281.90 ಪಾಯಿಂಟ್ಸ್ ಮುಟ್ಟಿದೆ.

ಇಂದು ಸುಮಾರು 1513 ಷೇರುಗಳು ಏರಿಕೆಗೊಂಡರೆ, 254 ಷೇರುಗಳು ಇಳಿಕೆಗೊಂಡಿವೆ ಮತ್ತು 53 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಏರಿಕೆಗೊಂಡ ಪ್ರಮುಖ ಷೇರುಗಳು:
ಬ್ರಿಟಾನಿಯಾ ಷೇರುಗಳು 102 ರೂ.ಗಳಿಂದ 3,410.00 ರೂ.ಗೆ ಪ್ರಾರಂಭವಾಯಿತು, ಟಾಟಾ ಮೋಟಾರ್ಸ್ ಷೇರುಗಳು ಸುಮಾರು 4 ರೂ.ಗಳ ಏರಿಕೆ ಕಂಡು 316.10 ರೂ., ಟಾಟಾ ಸ್ಟೀಲ್ ಷೇರುಗಳು ಸುಮಾರು 15 ರೂಪಾಯಿ ಏರಿಕೆಗೊಂಡು 1,107.15 ರೂ., ಜೆಎಸ್‌ಡಬ್ಲ್ಯೂ ಸ್ಟೀಲ್ ಷೇರುಗಳು ಸುಮಾರು 10 ರೂಪಾಯಿನಿಂದ 690.95 ರೂ. ಪ್ರಾರಂಭವಾಯಿತು.
ಇಳಿಕೆಗೊಂಡ ಪ್ರಮುಖ ಷೇರುಗಳು:
ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಸುಮಾರು 13 ರೂ.ಗಳಷ್ಟು ಕುಸಿದು 1,496.45 ರೂ., ಕೋಲ್ ಇಂಡಿಯಾ ಷೇರುಗಳು ಸುಮಾರು 5 ಪೈಸೆ ಕುಸಿದು 148.85 ರೂ. ಗೆ ತಲುಪಿದೆ.


Click it and Unblock the Notifications