ಅಹಮದಬಾದ್‌ನಲ್ಲಿ ಇತ್ತೀಚಿಗೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿರುವ ವಿಮಾನ ದುರಂತದ ಘಟನೆಯಲ್ಲಿ 240ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ನಡೆದಗಿನಿಂದಲ್ಲೂ ವಿಮಾನ ಯಾನ ಸಂಸ್ಥೆಗಳಿಗೆ ಒಂದಲ್ಲಾ ಒಂದು ಸಮಸ್ಯೆಗಳು ಎದುರಾಗುತ್ತಲ್ಲೇ ಇದ್ದು, ಇಂಡಿಗೋ ವಿಮಾನ ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ವಿಮಾಣದಲ್ಲಿ 168 ಪ್ರಯಾಣಿಕರು ಇದ್ದರು.
ಹೌದು,ಅಹಮದಬಾದ್ ವಿಮಾನ ದುರಂತದ ಘಟನೆ ಮಾಸುವ ಮುನ್ನವೇ ಏರೋ ಇಂಡಿಯಾ ಘೋಷಿಸಿದ ಮೇಡೇ ಕರೆಯನ್ನು ಗುವಾಹಟಿ-ಚೆನ್ನೈ ಇಂಡಿಗೋ ವಿಮಾನ ಬೆಂಗಳೂರಿನಲ್ಲಿ ಘೋಷಣೆಯನ್ನು ಮಾಡಿದೆ.ಮೇಡೇ ಕರೆ ಬಂದ ಬಳಿಕ ಎಟಿಸಿ ವಿಮಾನ ನಿಲ್ದಾಣದ ಸಿಬ್ಬಂದಿಗೆ ಎಚ್ಚರಿಕೆ ನೀಡಿತು. ಆಗ ಅವರು ಕಾರ್ಯಪ್ರವೃತ್ತರಾದರು. ವೈದ್ಯಕೀಯ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲಿ ಹಾಜರಿದ್ದರು. ಈ ವಿಮಾನವು ಗುರುವಾರ ರಾತ್ರಿ 8.20ಕ್ಕೆ ಸುರಕ್ಷಿತವಾಗಿ ಇಳಿಯಿತು ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಗಳು ಮಾಹಿತಿಯನ್ನು ತಿಳಿಸಿವೆ.

ಬೆಂಗಳೂರಿನಲ್ಲಿ ಇಳಿಯುವ ಮೊದಲು ಇಂಧನ ಖಾಲಿಯಾದ ಕಾರಣ ವಿಮಾನಯಾನ ಸಂಸ್ಥೆಯು "ಮೇಡೇ" ಕರೆ ಮಾಡಿದೆ ಎಂದು ಇಂಡಿಗೋ ವಕ್ತಾರರು ಕೂಡ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಈ ಘಟನೆ ಜೂನ್ 19 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಚೆನ್ನೈಗೆ ವಿಮಾನವು ಸಂಜೆ 7.45 ರ ಸುಮಾರಿಗೆ ಬರಬೇಕಿತ್ತು, ಆದರೆ ಚೆನ್ನೈನಲ್ಲಿ ಹವಾಮಾನದ ಕೆಟ್ಟ ಪರಿಸ್ಥಿತಿಯಿಂದಾಗಿ ವಿಮಾಣ ಟೇಕ್ ಆಪ್ ಆಗಲು ಸಾಧ್ಯವಾಗಲಿಲ್ಲ. ಪೈಲಟ್ ವಿಮಾನವನ್ನು ಬೆಂಗಳೂರಿಗೆ ತಿರುಗಿಸಲು ಆಯ್ಕೆ ಮಾಡಿಕೊಂಡರು, ಆದರೆ ಇಂಧನ ಖಾಲಿಯಾಗಿರುವುದನ್ನು ಅರಿತುಕೊಂಡರು. ಆದ್ದರಿಂದ, ಅವರು ಮೇಡೇ ಕರೆ ಮೂಲಕ ವಿಮಾನ ನಿಲ್ದಾಣಕ್ಕೆ ಮಾಹಿತಿ ನೀಡಿದರು ಎಂದು ಮಾಹಿತಿ ತಿಳಿದು ಬಂದಿದೆ.
ಜೂನ್ 19 ರಂದು ರಾತ್ರಿ 8.20 ರ ಸುಮಾರಿಗೆ ವಿಮಾನವು ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಇಳಿಯಾಲಾಗಿತ್ತು ಸದ್ಯಕ್ಕೆಯಾವುದೇ ದುರ್ಘಟನೆ ಸಂಭವಿಸಿಲ್ಲ ಎಂದು ಇಂಡಿಕೋ ಮಾಹಿತಿಯನ್ನು ತಿಳಿಸಿದೆ.
ಮೇಡೇ ಕರೆ ಎಂದರೇನು?
'ಮೇಡೇ' ಪದವು ಫ್ರೆಂಚ್ ಮೂಲದಾದ ಪದವಾಗಿದೆ ಇದರ ಅರ್ಥ ನನಗೆ ಸಹಾಯ ಮಾಡಿ ಎಂಬುದಾಗುತ್ತದೆ. ವಿಮಾನದಲ್ಲಿ ತುರ್ತು ಪರಿಸ್ಥಿತಿ ಎದುರಾದಾಗ ವಿಮಾನ ಸಂಚಾರ ನಿಯಂತ್ರಣ ಅಥವಾ ಇತರ ವಿಮಾನಗಳಿಗೆ ತಿಳಿಸಲು 'ಮೇಡೇ' ಅನ್ನು ಬಳಸುತ್ತಾರೆ. ಇದು ತಕ್ಷಣದ ಅಗತ್ಯವಿರುವ ಸಹಾಯದ ಬಗ್ಗೆ ಈ ಪದ ಸೂಚನೆಯನ್ನು ನೀಡತ್ತದೆ. ಮೇಡೇ ಪದ ಬಳಕೆಯ ಉದ್ದೇಶ ಸುಲಭವಾಗಿ ಸಂದೇಶ ಕಳುಹಿಸುವುದು, ಸರಳವಾಗಿ ಸಮಸ್ಯೆಯನ್ನು ಅರ್ಥವನ್ನು ಮಾಡಿಸುವುದು ಎಂದರ್ಥ.
ಸುಳ್ಳು ಅಥವಾ ಸುಮ್ಮನೆ ಮೇಡೇ ಘೋಷಣೆಯನ್ನು ಮಾಡುವಂತಿಲ್ಲ ಮಾಡಿದ್ದರೆ ನಿಯಮದ ಉಲ್ಲಂಘನೆಯಾಗುವಂತೆ ಆಗುತ್ತದೆ.
ಇಂಡಿಗೋ ವಿಮಾನ ಇಂಧನದ ಪರೀಕ್ಷೆ ಮಾಡಿಕೊಳ್ಳದೆ ವಿಮಾನ ಹಾರಾಟಕ್ಕೆ ಮುಂದಾಗಿದ್ದಾರೆ ಎಂದು ಇಬ್ಬರು ಪೈಲಟ್ಗಳನ್ನೂ ಅಮಾನತು ಮಾಡಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ. ಆದರೆ ಇನ್ನೂ ಕುರಿತು ಯಾವುದೇ ಪ್ರತಿಕ್ರಿಯೆಯನ್ನು ಇಂಡಿಗೋ ನೀಡಿಲ್ಲ
ತಾಂತ್ರಿಕ ದೋಷದಿಂದ ವಾಪಸ್ಸಾದ ಇಂಡಿಗೋ ವಿಮಾನ
ಇದೇ ರೀತಿ ಕಳೆದ ಶುಕ್ರವಾರ ಮಧುರೈಗೆ ತೆರಳುತ್ತಿದ್ದ ಇಂಡಿಗೋ ವಿಮಾನವು ತಾಂತ್ರಿಕ ದೋಷದಿಂದಾಗಿ ಚೆನ್ನೈಗೆ ವಾಪಸ್ಸಾಗಿದೆ. ವಿಮಾನದಲ್ಲಿ ಸುಮಾರು 68 ಪ್ರಯಾಣಿಕರಿದ್ದರ ಮೂಲಗಳ ಪ್ರಕಾರ, ಇಂಡಿಗೋ ವಿಮಾನವು ಹಾರಾಟದ ವೇಳೆ ತಾಂತ್ರಿಕ ಸಮಸ್ಯೆಯನ್ನು ಎದುರಿಸಿತು. ತಕ್ಷಣವೇ ವಿಮಾನವನ್ನು ಚೆನ್ನೈಗೆ ಹಿಂತಿರುಗಿಸಿ, ಸುರಕ್ಷಿತವಾಗಿ ಇಳಿಯಲು ಅನುಮತಿ ಸಹ ಕೋರಲಾಯಿತು. ಎಲ್ಲಾ ಪ್ರಯಾಣಿಕರನ್ನು ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಕೆಳಗಿಳಿಸಲಾಗಿದೆ. ಸುರಕ್ಷಿತವಾಗಿ ಟೇಕ್ ಆಫ್ ಆದ ನಂತರ ಪ್ರಯಾಣಿಕರು ನಿಟ್ಟುಸಿರನ್ನು ಬಿಟ್ಟಿದ್ದಾರೆ.


Click it and Unblock the Notifications