ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಕಂಪನಿಗೆ ಆದಾಯ ತೆರಿಗೆ ಇಲಾಖೆ 944 ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ.
ಹೌದು,ತಪ್ಪಾದ ಆದೇಶವನ್ನು ಪ್ರಶ್ನಿಸುವುದಾಗಿ ಹೇಳಿದ ಇಂಡಿಗೋ ಮೇಲೆ ಆದಾಯ ತೆರಿಗೆ ಇಲಾಖೆ 944.20 ಕೋಟಿ ರೂ. ದಂಡ ವಿಧಿಸಲಾಗಿದೆ.

ಈ ಆದೇಶವನ್ನು ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋದ ಮಾತೃ ಸಂಸ್ಥೆ ಇಂಟರ್ ಗ್ಲೋಬ್ ಏವಿಯೇಷನ್ ಶನಿವಾರ ಸ್ವೀಕರಿಸಿದೆ.ಭಾನುವಾರ ನಿಯಂತ್ರಕ ಫೈಲಿಂಗ್‌ನಲ್ಲಿ, ಇಂಡಿಗೋ ಆದಾಯ ತೆರಿಗೆ ಇಲಾಖೆಯ (ಆದಾಯ ತೆರಿಗೆ ಪ್ರಾಧಿಕಾರ) ಮೌಲ್ಯಮಾಪನ ಘಟಕವು 2021-22ರ ಮೌಲ್ಯಮಾಪನ ವರ್ಷಕ್ಕೆ 944.20 ಕೋಟಿ ರೂ. ದಂಡ ವಿಧಿಸುವ ಆದೇಶವನ್ನು ಹೊರಡಿಸಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಸೆಕ್ಷನ್ 143(3) ರ ಅಡಿಯಲ್ಲಿ ಮೌಲ್ಯಮಾಪನ ಆದೇಶದ ವಿರುದ್ಧ ಕಂಪನಿಯು ಆದಾಯ ತೆರಿಗೆ ಆಯುಕ್ತ (ಸಿಐಟಿ(ಎ)) ಅವರ ಮುಂದೆ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ ಎಂಬ ತಪ್ಪು ತಿಳುವಳಿಕೆಯ ಆಧಾರದ ಮೇಲೆ ಈ ಆದೇಶವನ್ನು ನೀಡಲಾಗಿದೆ. ಆದಾಯ ತೆರಿಗೆ ಪ್ರಾಧಿಕಾರ ಜಾರಿಗೊಳಿಸಿದ ಆದೇಶವು ಕಾನೂನಿಗೆ ಅನುಸಾರವಾಗಿಲ್ಲ ಮತ್ತು ತಪ್ಪಾಗಿದೆ ಎಂದು ನಂಬಿರುವುದಾಗಿ ಕಂಪನಿ ಹೇಳಿದೆ.
ಆದಾಯ ತೆರಿಗೆ ಪ್ರಾಧಿಕಾರವು ಹೊರಡಿಸಿದ ಆದೇಶವು ಕಾನೂನಿಗೆ ಅನುಗುಣವಾಗಿಲ್ಲ ಮತ್ತು ತಪ್ಪಾಗಿದೆ ಮತ್ತು ಕ್ಷುಲ್ಲಕವಾಗಿದೆ ಎಂದು ಕಂಪನಿಯು ಹೇಳಿದೆ ಎಂದು ಫೈಲಿಂಗ್‌ನಲ್ಲಿ ತಿಳಿಸಲಾಗಿದೆ. ಕಂಪನಿಯು ಇದನ್ನು ಪ್ರಶ್ನಿಸುತ್ತದೆ ಮತ್ತು ಆದೇಶದ ವಿರುದ್ಧ ಸೂಕ್ತ ಕಾನೂನು ಪರಿಹಾರಗಳನ್ನುತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
ಇದಲ್ಲದೆ,ಈ ಆದೇಶವು ಕಂಪನಿಯ ಹಣಕಾಸು,ಕಾರ್ಯಾಚರಣೆಗಳು, ವ್ಯವಸ್ಥೆಗಳು ಅಥವಾ ಇತರ ಚಟುವಟಿಕೆಗಳ ಮೇಲೆ ಯಾವುದೇ ಮಹತ್ವದ ಪರಿಣಾಮ ಬೀರುವುದಿಲ್ಲ ಎಂದು ಇಂಡಿಗೋ ಮಾಹಿತಿಯನ್ನು ತಿಳಿಸಿದೆ.
ಆದಾಯ ತರಿಗೆ ಆದೇಶದ ವಿರುದ್ಧ ಸೂಕ್ತ ಕಾನೂನು ಹೋರಾಟ ನಡೆಸಲಿದೆ. ಅಲ್ಲದೇ, ಈ ಆದೇಶವು ಕಂಪನಿಯ ಹಣಕಾಸು, ಕಾರ್ಯಾಚರಣೆಗಳು ಅಥವಾ ಇತರ ಚಟುವಟಿಕೆಗಳ ಮೇಲೆ ಯಾವುದೇ ಮಹತ್ವದ ಪರಿಣಾಮ ಬೀರುವುದಿಲ್ಲ ಎಂದು ಇಂಡಿಗೋ ಮಾಹಿತಿಯಲ್ಲಿ ಹೇಳಿದೆ
ಇಂಟರ್ ಗ್ಲೋಬ್ ಏವಿಯೇಷನ್ ಲಿಮಿಟೆಡ್, ಭಾರತದ ಗುರ್ಗಾಂವ್ , ಹರಿಯಾಣದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಭಾರತೀಯ ಕಡಿಮೆ-ವೆಚ್ಚದ ವಿಮಾನಯಾನ ಸಂಸ್ಥೆಯಾಗಿದೆ.ಇದು ನವೆಂಬರ್ 2024 ರ ಹೊತ್ತಿಗೆ ಶೇ.63.6 ದೇಶೀಯ ಮಾರುಕಟ್ಟೆ ಪಾಲನ್ನು ಹೊಂದಿರುವ ಭಾರತದಲ್ಲಿನ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿದೆ.
ಇಂಡಿಗೋ ಲೋ-ಕೋಸ್ಟ್ ಏರ್ಲೈನ್ ಆಗಿದ್ದು, ದೇಶದ ವಿವಿಧ ಭಾಗಗಳಲ್ಲಿ ಪ್ರತಿ ದಿನ ಹತ್ತಕ್ಕೂ ಹೆಚ್ಚು ವಿಮಾನಯಾನಗಳನ್ನು ನಡೆಸುತ್ತದೆ.
ದಂಡಕ್ಕೆ ಕಾರಣವೇನು..?
ಇಂಡಿಗೋ ಕಂಪನಿ ಸೆಕ್ಷನ್ 143 (3) ಅಡಿಯಲ್ಲಿ ಮೌಲ್ಯಮಾಪನ ಆದೇಶದ ವಿರುದ್ಧವಾಗಿ ಆದಾಯ ತೆರಿಗೆ ಕಮಿಷನರ್ ಮುಂದೆ ಕಂಪನಿಯು ಸಲ್ಲಿಸಿದ ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ ಎಂಬ ತಪ್ಪಾದ ತಿಳುವಳಿಕೆಯ ಆಧಾರದ ಮೇಲೆ ಈ ಆದೇಶವನ್ನು ನೀಡಲಾಗಿದೆ. ಆದಾಯ ತೆರಿಗೆ ಪ್ರಾಧಿಕಾ ಜಾರಿಗೊಳಿಸಿದ ಆದೇಶವು ಕಾನೂನಿಗೆ ಅನುಸಾರವಾಗಿಲ್ಲ ಮತ್ತು ತಪ್ಪಾಗಿದೆ ಎಂದು ಕಂಪನಿಯೂ ಮಾಹಿತಿಯನ್ನು ತಿಳಿಸಿದೆ.
ಭಾರತದ ಅತಿ ದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ವಿಶ್ವದ 6ನೇ ಅತಿದೊಡ್ಡ ವಿಮಾನಯಾನ ಸಂಸ್ಥೆ ಆಗಿ ಹೊರಹೊಮ್ಮಿದೆ. ಡಿಸೆಂಬರ್ 13ರಂದು ಅಮೆರಿಕದ ಯುನೈಟೆಡ್ ಏರ್‌ಲೈನ್ಸ್ ಅನ್ನು ಮಾರುಕಟ್ಟೆ ಬಂಡವಾಳದಲ್ಲಿ ಹಿಂದಿಕ್ಕಿದ ಈ ಸಂಸ್ಥೆಯು, ಸತತ 13 ದಿನಗಳಿಂದ ಇಂಟರ್‌ಗ್ಲೋಬ್ ಏವಿಯೇಷನ್ (ಮಾತೃ ಸಂಸ್ಥೆ) ಷೇರುಗಳಲ್ಲಿ ಏರಿಕೆ ಕಾಣುತ್ತಿದೆ.
ಈ ರೀತಿ,ಇಂಡಿಗೋ ತನ್ನ ಮಾರುಕಟ್ಟೆ ಬಂಡವಾಳ ಹೆಚ್ಚಳದಿಂದ ಮತ್ತು ವಿಮಾನಯಾನ ಕ್ಷೇತ್ರದಲ್ಲಿ ಉನ್ನತಿಯನ್ನು ಕಾಣುತ್ತಿದೆಇಂಡಿಗೋ 2015ರಲ್ಲಿ ಷೇರು ಮಾರುಕಟ್ಟೆ ಪ್ರವೇಶಿಸಿದ ದಿನದಿಂದ ಷೇರಿನಲ್ಲಿ ಸತತ ಏರಿಕೆ ಕಂಡಿದೆ. ವಿಮಾನಯಾನ ಮಾಡುವವರಿಗೆ ಉತ್ತಮ ರೀತಿಯಲ್ಲಿ ಸೇವೆಯನ್ನು ನೀಡುತ್ತದೆ.


Click it and Unblock the Notifications