"ದ ಬಿಗ್ ಫ್ಯಾಟ್ ಇಂಡಿಗೋ ಸೇಲ್" ಹೆಸರಲ್ಲಿ ಬಜೆಟ್ ವಿಮಾನಯಾನ ಸಂಸ್ಥೆ ಎಂದು ಜನಪ್ರಿಯವಾದ ಇಂಡಿಗೋ ಫ್ಲ್ಯಾಷ್ ಸೇಲ್ ಘೋಷಣೆ ಮಾಡಿದೆ. ಇಂಡಿಗೋದಿಂದ ದೇಶೀಯ ವಿಮಾನ ಯಾನ ದರ 899 ರುಪಾಯಿ ಹಾಗೂ ಅಂತರರಾಷ್ಟ್ರೀಯ ವಿಮಾನ ಯಾನ ದರವನ್ನು 2999 ರುಪಾಯಿಗೆ ಒದಗಿಸಲಾಗುತ್ತಿದೆ.
"2019 ಕೊನೆಯಾಗುತ್ತಿದೆ. ಆದರೆ ನಮ್ಮ ಅದ್ಭುತ ದರಗಳು ಅಲ್ಲ. ನಾವು ಕೈಗೆಟುಕುವ ದರದಲ್ಲಿ, ಶೂನ್ಯ ಕನ್ವೀನಿಯನ್ಸ್ ಶುಲ್ಕದಲ್ಲಿ ತರುತ್ತಿದ್ದೇವೆ. ಅವಕಾಶ ಬಾಚಿಕೊಳ್ಳಿ" ಎಂದು ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ. 899 ರುಪಾಯಿಗೆ ಬುಕ್ಕಿಂಗ್ ಡಿಸೆಂಬರ್ 23, 2019ರಿಂದ ಆರಂಭವಾಗುತ್ತದೆ. 4 ನಾಲ್ಕು ದಿನಗಳ ಕಾಲ ಬುಕ್ಕಿಂಗ್ ಅವಧಿ ಇರುತ್ತದೆ.
ಜನವರಿ 15, 2020ರಿಂದ ಏಪ್ರಿಲ್ 15, 2020ರ ಮಧ್ಯೆ ಪ್ರಯಾಣ ಮಾಡಬಹುದು. ಈ ಆಫರ್ ಇರೋದು ಡಿಸೆಂಬರ್ 23ರಿಂದ 26ರ ಮಧ್ಯೆ ಬುಕ್ಕಿಂಗ್ ಮಾಡುವುದಕ್ಕೆ ಅನ್ವಯ ಆಗುತ್ತದೆ. ಅಂದ ಹಾಗೆ ಈ 899 ಮತ್ತು 2999ರ ದರದಲ್ಲಿ ಎಲ್ಲವೂ ಒಳಗೊಂಡಿರುತ್ತದೆ. ಇಂಡಿಗೋ ವೆಬ್ ಸೈಟ್ ಅಥವಾ ಇಂಡಿಗೋ ಅಪ್ಲಿಕೇಷನ್ ಮೂಲಕ ಬುಕ್ ಮಾಡುವವರಿಗೆ ಕನ್ವೀನಿಯನ್ಸ್ ಶುಲ್ಕ ಇರುವುದಿಲ್ಲ.

ಆದರೆ, ಈ ಆಫರ್ ನಲ್ಲಿ ಎಷ್ಟು ಸೀಟುಗಳು ಇರುತ್ತವೆ ಎಂಬ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಸೀಮಿತ ಸೀಟುಗಳಿಗೆ ಮಾತ್ರ ಈ ಕೊಡುಗೆ ಲಭ್ಯ ಇದ್ದು, ಲಭ್ಯತೆಯ ಆಧಾರದಲ್ಲಿ ಗ್ರಾಹಕರಿಗೆ ರಿಯಾಯಿತಿ ನೀಡಲಾಗುತ್ತದೆ. ಇದರ ಜತೆಗೆ ಇಂಡಿಗೋದ ವಿವೇಚನೆಗೆ ಬಿಟ್ಟ ನಿರ್ಧಾರ ಇದಾಗಿರುತ್ತದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

Silver Rates India: ಮತ್ತೆ ಗಗನಕ್ಕೇರಿದ ಬೆಳ್ಳಿ ದರ; ದಿಢೀರ್ 5,000 ರೂ. ಹೆಚ್ಚಳ

Karnataka SSLC Exam: ಇಂದಿನಿಂದ ಕರ್ನಾಟಕದಲ್ಲಿ SSLC ಪರೀಕ್ಷೆ; ವಿದ್ಯಾರ್ಥಿಗಳು ಈ ವಿಷಯ ದಿಳಿದೇ ಎಕ್ಸಾಂಗೆ ಹೋಗಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Gold Price Today: ಭಾರತದಲ್ಲಿ ಏರಿಕೆ ಕಂಡ ಚಿನ್ನದ ಬೆಲೆ! ದಿಢೀರ್ 12,000 ರೂ. ಹೆಚ್ಚಳ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ



Click it and Unblock the Notifications