ಸಗಟು ಹಣದುಬ್ಬರ ಆಗಸ್ಟ್‌ನಲ್ಲಿ ಶೇ. 11.39ರಷ್ಟು ಏರಿಕೆ: ಆಹಾರೇತರ ವಸ್ತುಗಳ ಬೆಲೆ ಹೆಚ್ಚಳ

ಸಗಟು ಹಣದುಬ್ಬರವು ಆಗಸ್ಟ್‌ನಲ್ಲಿ ಶೇಕಡಾ 11.39ರಷ್ಟು ಏರಿಕೆಗೊಂಡಿದ್ದು, ಜುಲೈನ ಶೇಕಡಾ 11.16ಕ್ಕಿಂತ ಹೆಚ್ಚಾಗಿದೆ. ಇಂಧನ ಮತ್ತು ಶಕ್ತಿಯ ಬೆಲೆ ಏರಿಕೆಯೊಂದಿಗೆ ಆಹಾರ ಬೆಲೆ ಹಣದುಬ್ಬರವು ಜುಲೈನಲ್ಲಿ ಶೇ. 3.43 ರಿಂದ ಆಗಸ್ಟ್‌ನ ಶೇ. 4.46ಕ್ಕೆ ಏರಿಕೆಯಾಗಿದೆ.

ವಾಣಿಜ್ಯ ಸಚಿವಾಲಯ ಮಂಗಳವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು ಜುಲೈನ ಶೇಕಡಾ 11.16ರಿಂದ ಆಗಸ್ಟ್‌ 2021ಕ್ಕೆ ಶೇ. 11.39ಕ್ಕೆ ಏರಿಕೆಗೊಂಡಿದೆ. ಮುಖ್ಯವಾಗಿ ಪ್ರಾಥಮಿಕ ವಸ್ತುಗಳ ಬೆಲೆ ಹಾಗೂ ಇಂಧನ ಮತ್ತು ವಿದ್ಯುತ್ ಮತ್ತು ಉತ್ಪಾದಿತ ಉತ್ಪನ್ನಗಳ ಬೆಲೆ ಏರಿಕೆಯಿಂದಾಗಿ ಶೇಕಡವಾರು ಪ್ರಮಾಣ ಹೆಚ್ಚಾಗಿದೆ.

ಸಗಟು ಹಣದುಬ್ಬರ ಆಗಸ್ಟ್‌ನಲ್ಲಿ ಶೇ. 11.39ರಷ್ಟು ಏರಿಕೆ

"ಆಗಸ್ಟ್ 2021 ರಲ್ಲಿ ಹಣದುಬ್ಬರದ ದರವು ಪ್ರಾಥಮಿಕವಾಗಿ ಆಹಾರೇತರ ವಸ್ತುಗಳು, ಖನಿಜ ತೈಲಗಳು, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಮೂಲಭೂತ ಲೋಹಗಳು, ಆಹಾರ ಉತ್ಪನ್ನಗಳು, ಜವಳಿ, ರಾಸಾಯನಿಕಗಳು ಮತ್ತು ರಾಸಾಯನಿಕ ಉತ್ಪನ್ನಗಳಂತಹ ಇತರ ಉತ್ಪನ್ನಗಳ ಬೆಲೆಗಳ ಏರಿಕೆಯಿಂದಾಗಿ, ಹಿಂದಿನ ವರ್ಷದ ಅನುಗುಣವಾದ ತಿಂಗಳಿಗೆ ಹೋಲಿಸಿದರೆ ಹೆಚ್ಚಾಗಿದೆ'' ಎಂದು ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅದೇ ಸಮಯದಲ್ಲಿ, ಡಬ್ಲ್ಯೂಪಿಐ ಹಣದುಬ್ಬರವು ಆಗಸ್ಟ್ 2021 ರಲ್ಲಿ ಸತತ ನಾಲ್ಕನೇ ತಿಂಗಳಲ್ಲಿ ಎರಡು ಅಂಕಿಯ ವ್ಯಾಪ್ತಿಯಲ್ಲಿ ಉಳಿಯಿತು. ಆದಾಗ್ಯೂ ಇದು ಜೂನ್ 2021 ರಿಂದ ಶೇಕಡಾ 12.07ರಷ್ಟು ತಲುಪಿದಾಗ ಗಣನೀಯವಾಗಿ ಕಡಿಮೆಯಾಗಿದೆ.

ಇಂಧನ ಮತ್ತು ವಿದ್ಯುತ್ ಸೂಚ್ಯಂಕವು ಜುಲೈನ 114.3ರಿಂದ ಆಗಸ್ಟ್‌ನಲ್ಲಿ 116 ಪಾಯಿಂಟ್ಸ್‌ಗೆ ಏರಿಕೆಗೊಂಡಿದೆ. ಖನಿಜ ತೈಲಗಳು ಮತ್ತು ಕಲ್ಲಿದ್ದಲಿನ ಬೆಲೆಗಳು ಆಗಸ್ಟ್ 2021 ರಲ್ಲಿ ಏರಿಕೆಯಾಗಿದೆ.

ಚಿಲ್ಲರೆ ಹಣದುಬ್ಬರ ತುಸು ಇಳಿಕೆ:
ಆಹಾರ ವಸ್ತುಗಳ ಬೆಲೆ ತಗ್ಗಿ ಆಹಾರ ಹಣದುಬ್ಬರ ಪ್ರಮಾಣ ಸ್ವಲ್ಪ ಇಳಿಕೆಗೊಂಡ ಪರಿಣಾಮ ಆಗಸ್ಟ್‌ನಲ್ಲಿ ಚಿಲ್ಲರೆ ಹಣದುಬ್ಬರವು ಶೇಕಡಾ 5.3ಕ್ಕೆ ಇಳಿಕೆಯಾಗಿದೆ. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ ಪ್ರಮಾಣವು ಜುಲೈನಲ್ಲಿ ಶೇಕಡಾ 5.59ರಷ್ಟಿತ್ತು.

ಹಿಂದಿನ ವರ್ಷದ ಆಗಸ್ಟ್‌ನಲ್ಲಿ ಇದು ಶೇಕಡಾ 6.69ರ ಮಟ್ಟದಲ್ಲಿತ್ತು. ರಾಷ್ಟ್ರೀಯ ಸಾಂಖ್ಯಿತ ಕಚೇರಿ (ಎನ್ಎಸ್‌ಒ)ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಆಗಸ್ಟ್‌ನಲ್ಲಿ ಆಹಾರ ವಸ್ತುಗಳ ಹಣದುಬ್ಬರ ಪ್ರಮಾಣವು ಶೇಕಡಾ 3.11ರಷ್ಟಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+