ಕರ್ನಾಟಕದಲ್ಲಿ ಬೆಲೆ ಏರಿಕೆಗಳ ಬಿಸಿ: ಡೀಸೆಲ್ ದರ ಹೆಚ್ಚಾದರೆ ಹಣದುಬ್ಬರ, ಮತ್ತಷ್ಟು ಅಗತ್ಯತೆಗಳ ದರ ಏರಿಕೆ ಸಾಧ್ಯತೆ..!

ಕರ್ನಾಟಕದಲ್ಲಿ ಹಣದುಬ್ಬರ: ಕರ್ನಾಟಕದಲ್ಲಿ ಅಗತ್ಯತೆಗಳ ಬೆಲೆ ಏರಿಕೆಗಳು ಜನಸಾಮಾನ್ಯರ ತಲೆ ಮೇಲೆ ತಾಂಡವವಾಡುತ್ತಿವೆ. ಹಾಲಿನ ದರ, ಟೋಲ್ ಶುಲ್ಕ, ತ್ಯಾಜ್ಯ ನಿರ್ವಹಣೆ ಶುಲ್ಕ, ಡೀಸೆಲ್ ದರ ಹೀಗೆ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿಸಿರುವುದು ಒಂದಾ ಎರಡಾ..ಈ ಎಲ್ಲಾ ಬೆಲೆ ಏರಿಕೆಗಳನ್ನು ಕಂಡ ಮೇಲೆ, ಮುಂದೆ ಇನ್ಯಾವುದರ ಬೆಲೆ ಹೆಚ್ಚಳವಾಗುತ್ತದೋ ಎಂಬ ಭೀತಿ ಶುರುವಾಗಿದೆ. ದಿನೇ ದಿನೆ ಹೀಗೆ ಬೆಲೆಗಳ ಏರಿಕೆಯಾದರೆ ಜನರ ಜೀವನ ಯಾವ ದಿಕ್ಕಿಗೆ ತಿರುಗುತ್ತದೋ ಗೊತ್ತಿಲ್ಲ. ಈ ಬೆಲೆ ಏರಿಕೆಯ ಭೀತಿ ಹೆಚ್ಚಾಗಿದ್ದು, ಜನಸಾಮಾನ್ಯರು ಈಗ ಮತ್ತೊಂದು ಆರ್ಥಿಕ ಹೊಡೆತವನ್ನು ಎದುರಿಸಬೇಕಾಗಿದೆ.

ಕರ್ನಾಟಕದಲ್ಲಿ ಬೆಲೆ ಏರಿಕೆಗಳ ಬಿಸಿ: ಹಣದುಬ್ಬರ ಹೆಚ್ಚಳ..!

ಹೌದು, ಜನಸಾಮಾನ್ಯರಿಗೆ ಬರೆ ಹಾಕುವ ಮತ್ತೊಂದು ಆರ್ಥಿಕ ಹೊರೆ ಯಾವುದು ಅಂತೀರಾ..? ಈಗಾಗಲೇ ಡೀಸೆಲ್ ಬೆಲೆ ಪ್ರತಿ ಲೀಟರ್‍‌ಗೆ 2 ರೂಪಾಯಿ ಹೆಚ್ಚಳ ಮಾಡುವ ಬಗ್ಗೆ ಸರ್ಕಾರ ನಿರ್ಧರಿಸಿದೆ. ಇದರಿಂದಲೇ ಮತ್ತೊಂದು ಆರ್ಥಿಕ ಹೊರೆಯ ಹಾದಿ ಶುರುವಾಗಲಿದೆ. ಅಂದರೆ, ಡೀಸೆಲ್ ಬೆಲೆ ಹೆಚ್ಚಾದ ಹಿನ್ನೆಲೆಯಲ್ಲಿ, ಸಾರಿಗೆ ವೆಚ್ಚಗಳು ಪ್ರಭಾವಿತಗೊಳ್ಳಲಿವೆ. ಇದು ನೇರವಾಗಿ ವ್ಯಾಪಾರ ಮತ್ತು ಗ್ರಾಹಕರ ಮೇಲೆ ಬೀಳಲಿದೆ.

ಈ ಬೆಲೆ ಏರಿಕೆಗಳ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ. ಈ ಬೆಳವಣಿಗೆಯ ಬಗ್ಗೆ ಬಗ್ಗೆ ವ್ಯಾಪಾರಿಗಳೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಜನವಿರೋಧಿ ನಿರ್ಧಾರ ಎಂದು ಅಲ್ಲಗಳೆಯುತ್ತಿದ್ದಾರೆ. ಈಗಾಗಲೇ ಹಣದುಬ್ಬರದಿಂದ ತತ್ತರಿಸಿರುವ ಆರ್ಥಿಕ ಪರಿಸ್ಥಿತಿಯನ್ನು ಈ ದರ ಏರಿಕೆ ಇನ್ನಷ್ಟು ದುರ್ಬಲಗೊಳಿಸುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನು ಡೀಸೆಲ್ ಬೆಲೆ ಏರಿಕೆಯ ನಿರ್ಧಾರದ ವಿರುದ್ಧ ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿ.ಸಿ. ರಾವ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ವ್ಯಾಪಾರ ವಲಯಕ್ಕೆ ಹೆಚ್ಚು ತೊಂದರೆಯಾಗುತ್ತದೆ ಎಂದು ಕಿಡಿ ಕಾರಿದ್ದಾರೆ. ಸಣ್ಣ ವ್ಯಾಪಾರಿಗಳು ಮತ್ತು ದೊಡ್ಡ ಸಂಸ್ಥೆಗಳಾದ್ಯಂತ ಎಲ್ಲರಿಗೂ ಈ ದರ ಏರಿಕೆ ತೀವ್ರ ಆಘಾತ ಉಂಟುಮಾಡಲಿದೆ. ದಿನನಿತ್ಯದ ಅಗತ್ಯ ವಸ್ತುಗಳ ಸಾಗಣೆ ಮತ್ತು ಪೂರೈಕೆಗೆ ಡೀಸೆಲ್ ಮುಖ್ಯ, ಇದು ಈಗಾಗಲೇ ಸಾಕಷ್ಟು ದುಬಾರಿಯಾಗಿದೆ. ಈ ಹೆಚ್ಚಳದಿಂದ ವ್ಯಾಪಾರಗಳು ಬಹುತೇಕ ಲಾಭವಿಲ್ಲದೆ ನಷ್ಟದಲ್ಲೇ ಮುಳುಗಿಬಿಡುತ್ತವೆ" ಎಂದು ಅವರು ಹೇಳಿದ್ದಾರೆ.

ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಕೂಡ, ಡೀಸೆಲ್ ಬೆಲೆ ಹೆಚ್ಚಳದ ನಿರ್ಧಾರವನ್ನು ವಿರೋಧಿಸಿದ್ದಾರೆ. ಕೈಗಾರಿಕೆಗಳಿಗೆ ಆರ್ಥಿಕ ಹೊಡೆತ ಹಾಗೂ ಸಾಮಾನ್ಯ ಜನರ ಬದುಕಿಗೆ ತೊಂದರೆ ತರಲು ಕಾರಣವಾಗುತ್ತೆ ಈ ನಿರ್ಧಾರ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಡೀಸೆಲ್ ಬೆಲೆ ಏರಿದಾಗ, ಸಾರಿಗೆ ವೆಚ್ಚಗಳು ಹೆಚ್ಚಾಗುತ್ತವೆ. ಇದರಿಂದ ಎಲ್ಲ ವಸ್ತುಗಳ ಬೆಲೆ ಏರಿಕೆ ಕಂಡುಬರುತ್ತದೆ. ದಿನನಿತ್ಯದ ಅಗತ್ಯ ವಸ್ತುಗಳ ಖರೀದಿಗೆ ಜನರಿಗೆ ಹೆಚ್ಚಿನ ಹಣ ಬೇಕಾಗುತ್ತದೆ. ಆದರೆ ಸರ್ಕಾರಕ್ಕೆ ಮಾತ್ರ ಜಿಎಸ್‌ಟಿ ಮೂಲಕ ಹೆಚ್ಚು ಆದಾಯ ಸಿಗಲಿದೆ ಎಂದು ಅವರು ಹೇಳಿದ್ದಾರೆ.

ವ್ಯಾಪಾರ ಹಾಗೂ ಕೈಗಾರಿಕೆಗಳ ಮೇಲೆ ಪರಿಣಾಮ:

ಈ ಡೀಸೆಲ್ ದರ ಏರಿಕೆಯ ನಿರ್ಧಾರದಿಂದ, ತಯಾರಿಕೆ ವೆಚ್ಚ ಹಾಗೂ ವ್ಯಾಪಾರದ ನಿರ್ವಹಣಾ ವೆಚ್ಚ ಕೂಡ ಹೆಚ್ಚಾಗಲಿದೆ. ಹೀಗಾಗಿ ಇದು ಗ್ರಾಹಕರ ಮೇಲೆಯೇ ನೇರವಾಗಿ ಪರಿಣಾಮ ಬೀರಲಿದೆ. ಅಲ್ಲದೇ ವ್ಯಾಪಾರ ವಲಯದ ಪ್ರಮುಖರಾದ ಸಜ್ಜನ್ ರಾಜ್ ಮೆಹ್ತಾ ಕೂಡ ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಡೀಸೆಲ್ ದರ ಏರಿಕೆಯು ಎಲ್ಲರ ಬದುಕಿನ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದಿದ್ದಾರೆ. ಈಗಾಗಲೇ ಹಾಲಿನ ಬೆಲೆಯೂ 4 ರೂಪಾಯಿ ಹೆಚ್ಚಾಗಿದೆ. ಹೋಟೆಲ್‌ಗಳು ಕಾಫಿ, ಚಹಾ, ತಿಂಡಿ ಸಾಮಾನುಗಳ ದರ ಹೆಚ್ಚಿಸುವ ಕುರಿತು ಯೋಚನೆ ಮಾಡುತ್ತಿವೆ. ಇಂಧನ ಬೆಲೆ ಏರಿಕೆಯಿಂದ ಉತ್ಪನ್ನ ಮತ್ತು ಸೇವೆಗಳ ಬೆಲೆ ಸಹ ಸಹಜವಾಗಿ ಹೆಚ್ಚಳವಾಗುತ್ತದೆ, ಇದು ಹಣದುಬ್ಬರವನ್ನು ಮತ್ತಷ್ಟು ಗಂಭೀರಗೊಳಿಸುತ್ತದೆ" ಎಂದು ಅವರು ಹೇಳಿದ್ದಾರೆ.

ಇನ್ನು ಈ ವಿಚಾರ ಕೇವಲ ಬೆಲೆ ಏರಿಕೆಗೆ ಮಾತ್ರ ಸೀಮಿತವಾಗಿಲ್ಲ. ಇದು ವ್ಯಾಪಾರದ ಕಾರ್ಯವಿಧಾನಕ್ಕೂ ಬದಲಾವಣೆಯನ್ನು ತರಲಿದೆ ಎನ್ನಬಹುದು. ಈಗಾಗಲೇ ಕೆಲವು ಟ್ರಕ್ ಮಾಲಿಕರು, ಡೀಸೆಲ್ ಭರ್ತಿ ಮಾಡಿಸುವುದಕ್ಕಾಗಿ ಕರ್ನಾಟಕ ಬಿಟ್ಟು ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೆ ಹೋಗುತ್ತಿದ್ದಾರೆ. ಈ ರಾಜ್ಯಗಳಲ್ಲಿ ಇಂಧನ ದರ ಕಡಿಮೆ ಇರುವುದರಿಂದ ಅವರು ಅಲ್ಲಿಯೇ ತಮ್ಮ ವಾಹನಗಳಿಗೆ ಡೀಸೆಲ್ ತುಂಬಿಕೊಳ್ಳಲು ಪ್ರಾರಂಭಿಸಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಈ ಡೀಸೆಲ್ ಬೆಲೆ ಏರಿಕೆಯಿಂದ ಸರಕು ಸಾಗಣೆ ವೆಚ್ಚ ಕೂಡ ಹೆಚ್ಚಾಗಲಿದ್ದು, ಅದು ನೇರವಾಗಿ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ. ಅಂದರೆ ಹಣ್ಣು, ತರಕಾರಿಗಳಿ, ಹಾಲು, ಆಹಾರ ಧಾನ್ಯಗಳು ಮತ್ತು ಇಂಧನದ ಬೆಲೆ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಇದು ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುತ್ತದೆ ಹಾಗೂ ಜನಸಾಮಾನ್ಯರು ಈ ಹಣದುಬ್ಬರದ ಹೊಡೆಯಿಂದ ತತ್ತರಿಸಬೇಕಾಗುತ್ತದೆ. ರಾಜ್ಯ ಸರ್ಕಾರ ಈ ಬಗ್ಗೆ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯತೆಯಿದೆ. ಇನ್ನು ಇದು ಜನಸಾಮಾನ್ಯರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನೋಡುವುದಾದರೆ...

1. ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ:

ಇನ್ನು ಡೀಸೆಲ್ ಬೆಲೆ ಏರಿಕೆಯಾದರೆ ತರಕಾರಿ, ಹಣ್ಣು, ಹಾಲು, ಅಕ್ಕಿ, ಗೋಧಿ, ದೈನಂದಿನ ಆಹಾರ ಪದಾರ್ಥಗಳು ಸಾರಿಗೆ ವೆಚ್ಚ ಹೆಚ್ಚಳದ ಕಾರಣ ದುಬಾರಿಯಾಗಲಿವೆ. ಕೇರಳ ಮತ್ತು ಮಹಾರಾಷ್ಟ್ರದಿಂದ ತರಕಾರಿ, ಹಣ್ಣುಗಳು, ಆಹಾರ ಸಾಮಾನುಗಳು ಬರಲಿರುವುದರಿಂದ, ಸಾರಿಗೆ ವೆಚ್ಚ ಹೆಚ್ಚಾದಂತೆ ಬೆಲೆಗಳು ಸಹ ಏರಿಕೆಯಾಗಲಿವೆ.

2. ಸಾರಿಗೆ ದರ ಏರಿಕೆ:

ಅಷ್ಟೇ ಅಲ್ಲ ಪ್ರಮುಖ ಸಾರಿಗೆ ಸಂಸ್ಥೆಗಳಾದ ಬಸ್, ಕ್ಯಾಬ್, ಆಟೋ, ಲಾರಿ ದರ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಅಂದರೆ ಡೀಸೆಲ್ ದರ ಹೆಚ್ಚಾದರೆ, ಸಾರಿಗೆ ಸಂಸ್ಥೆಗಳ ಬೆಲೆ ಕೂಡ ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಸವಾರಿಗಳು ಹೆಚ್ಚು ದುಬಾರಿಯಾಗುತ್ತವೆ, ಜನ ಸಾಮಾನ್ಯರಿಗೆ ಪ್ರಯಾಣ ವೆಚ್ಚದ ಹೊರೆ ಹೆಚ್ಚಾಗುತ್ತದೆ. ಹಳ್ಳಿಗಳಿಂದ ನಗರಗಳಿಗೆ ಪ್ರಯಾಣಿಸುವ ಜನರು, ದಿನನಿತ್ಯ ಕೆಲಸಕ್ಕೆ ಹೋಗುವ ಕಾರ್ಮಿಕರು, ವಿದ್ಯಾರ್ಥಿಗಳು ಸಾರಿಗೆ ವೆಚ್ಚ ಹೆಚ್ಚಳದಿಂದ ತೊಂದರೆ ಅನುಭವಿಸಬೇಕಾಗುತ್ತದೆ.

3. ವಿದ್ಯುತ್ ಮತ್ತು ಕೈಗಾರಿಕಾ ಉತ್ಪನ್ನಗಳ ಬೆಲೆ ಏರಿಕೆ:

ಬಣ್ಣದ ಕಾರ್ಖಾನೆಗಳು, ರೈಸ್ ಮಿಲ್, ಪ್ಲಾಸ್ಟಿಕ್, ಚರ್ಮ ಉದ್ಯಮಗಳು ಮತ್ತು ತಯಾರಿಕಾ ಘಟಕಗಳು ಡೀಸೆಲ್ ಅವಲಂಬಿತವಾಗಿವೆ. ಡೀಸೆಲ್ ದರ ಹೆಚ್ಚಳವಾದರೆ ಇವುಗಳ ಉತ್ಪಾದನಾ ವೆಚ್ಚ ಕೂಡ ಹೆಚ್ಚಾಗಬಹುದು. ಇದರಿಂದ ಉತ್ಪನ್ನಗಳ ದರ ಸಹ ತಕ್ಷಣವೇ ಹೆಚ್ಚಾಗುವ ಸಾಧ್ಯತೆ ಇದೆ. ಹಳ್ಳಿಗಳಲ್ಲಿ ಮತ್ತು ಪಟ್ಟಣಗಳಲ್ಲಿ ಡೆಜೆನರೇಟರ್ ಅವಲಂಬಿತ ವಿದ್ಯುತ್ ಪೂರೈಕೆದಾರರು ಸಹ ಹೆಚ್ಚಿನ ದರ ವಸೂಲಿ ಮಾಡುವ ಸಾಧ್ಯತೆ ಇದೆ.

4. ಹೋಟೆಲ್ ಮತ್ತು ಹಂಚಿಕೆ ಸೇವೆಗಳ ಮೇಲೆ ಪರಿಣಾಮ:

ಅಷ್ಟೇ ಅಲ್ಲ ಹೋಟೆಲ್ ಮಾಲಿಕರು ಕೂಡ ತಾವು ನೀಡುವ ಆಹಾರಗಳ ಬೆಲೆ ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಇದರಿಂದ ಜನ ಸಾಮಾನ್ಯರ ಊಟದ ವೆಚ್ಚ ಹೆಚ್ಚಾಗುತ್ತದೆ. ಹೇಗೆಂದರೆ ತರಕಾರಿಗಳ ಲೋಡ್‌ ಬೆಲೆ ಹೆಚ್ಚಳವಾಗಬಹುದು. ಇದು ಊಟದ ವೆಚ್ಚಗಳನ್ನು ಹೆಚ್ಚಿಸಬಹುದು. ಡೋರ್ ಡೆಲಿವರಿ ಸೇವೆಗಳಾದ ಜೊಮ್ಯಾಟೋ, ಸ್ವಿಗ್ಗಿ, ಅಮೇಜಾನ್, ಫ್ಲಿಪ್‌ಕಾರ್ಟ್ ಗೂ ಈ ದರ ತಗಲುತ್ತದೆ. ಲಾಜಿಸ್ಟಿಕ್ ವೆಚ್ಚ ಹೆಚ್ಚಾದಂತೆ ಗ್ರಾಹಕರಿಗೆ ಹೆಚ್ಚಿನ ಶುಲ್ಕ ವಿಧಿಸಲಾಗುವುದು.


5. ರೈತರು ಹಾಗೂ ಕೃಷಿ ಕಾರ್ಯಗಳ ಮೇಲೆ ಪರಿಣಾಮ:

ಕೃಷಿ ಯಂತ್ರೋಪಕರಣಗಳಾದ ಟ್ರ್ಯಾಕ್ಟರ್, ಪಂಪ್‌ಸೆಟ್, ಜಲೆರಿಗೆಯ ಯಂತ್ರಗಳು ಹೆಚ್ಚಿನ ಡೀಸೆಲ್ ಬಳಕೆ ಮಾಡುತ್ತವೆ, ಈ ಬೆಲೆ ಏರಿಕೆಯಿಂದ ರೈತರು ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ರೈತರಿಗೆ ಕೃಷಿ ಕೆಲಸಗಳ ವೆಚ್ಚ ಹೆಚ್ಚಾಗುವುದು, ಇದರಿಂದಾಗಿ ಹಣ್ಣು, ತರಕಾರಿ ಮತ್ತು ಬೆಳೆಗಳ ಮಾರುಕಟ್ಟೆ ಬೆಲೆ ಹೆಚ್ಚುವ ಸಾಧ್ಯತೆ ಇದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+