ಉದ್ಯೋಗಿಗಳು 70 ಗಂಟೆಗಿಂತ ಹೆಚ್ಚು ಕೆಲಸ ಮಾಡಬೇಕು ಎಂದು ಕೆಲ ತಿಂಗಳ ಹಿಂದೆ ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ (NR Narayana Murthy) ಹೇಳಿಕೆಯನ್ನು ನೀಡಿದ್ದರು ಆದರೆ ಇದೀಗ ದೊಡ್ಡ ಮಟ್ಟದಲ್ಲಿ ಟೀಕೆಗಳು ಚರ್ಚೆಗಳು ನಡೆದವು. ಆದರೆ ಇದೀಗ ಅವರೇ ಕಟ್ಟಿ ಬೆಳೆಸಿದ ಸಂಸ್ಥೆ ಇನ್ಫೋಸಿಸ್ ಮಾನವ ಸಂಪನ್ಮೂಲ ವಿಭಾಗ (ಎಚ್.ಆರ್) ವಿರೋಧವಾಗಿದೆ.

ಹೌದು, ಇನ್ಫೋಸಿಸ್ ಕಂಪನಿಯು ಉದ್ಯೋಗಿಗಳ ಆರೋಗ್ಯದ ಬಗ್ಗೆ ಒಂದು ಪ್ರಮುಖವಾದ ನಿರ್ಧಾರವನ್ನು ತಗೆದುಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಉದ್ಯೋಗಿಗಳ ಮೇಲೆ ಕೆಲಸದ ಒತ್ತಡ ಹೆಚ್ಚಿರುವುದನ್ನು ಗಮನಿಸಿದ ಕಂಪನಿಯು 70 ಗಂಟೆಗಳ ಕಾಲ ಕೆಲಸ ಮಾಡವುದು ಇರಲಿ, 50 ಗಂಟೆ ಕೂಡ ಲ್ಯಾಪ್‌ಟಾಪ್‌ಗಳ ಮುಂದೆ ದೀರ್ಘಕಾಲ ಕುಳಿತು ಕೆಲಸ ಮಾಡಬಾರದು ಇದರಿಂದಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ಹೇಳಿದೆ.
ಹೆಚ್ಚಿನ ಕಾಲ ಕೆಲಸ ಮಾಡುವಂತಹ ಉದ್ಯೋಗಿಗಳ ಮೇಲ್‌ಗೆ ಎಚ್,ಆರ್ ಕಡೆಯಿಂದ ಎಚ್ಚರಿಕೆ ಸಂದೇಶ ಬರುತ್ತದೆ. ಕೆಲಸ ಮುಖ್ಯ, ಆದರೆ ನೀವು ನಿಮ್ಮ ಆರೋಗ್ಯವನ್ನು ಕಳೆದುಕೊಂಡರೆ, ಅದು ನಿಮಗೆ ಮಾತ್ರವಲ್ಲ, ಕಂಪನಿಗೂ ನಷ್ಟ. ಈ ಇಮೇಲ್‌ನಲ್ಲಿ, ಅವರು ಉದ್ಯೋಗಿಗಳು ಕೆಲಸ-ಜೀವನದ ಸಮತೋಲನವನ್ನು ಕಾಪಾಡಿಕೊಳ್ಳುವ ಬಗ್ಗೆ ಉದ್ಯೋಗಿಗಳಿಗೆ
ಮಾಹಿತಿಯನ್ನು ತಿಳಿಸಿದ್ದಾರೆ.
ಪ್ರಸ್ತುತ ಬೆಂಗಳೂರಿನಲ್ಲಿರುವ ಇನ್ಫೋಸಿಸ್ ತನ್ನ ಸಂಪೂರ್ಣ ಉದ್ಯೋಗಿಗಳಿಗೆ (3,23,500) ಹೈಬ್ರಿಡ್ ವರ್ಕಿಂಗ್ (ಆಫೀಸ್ + ರಿಮೋಟ್) ನೀತಿಯನ್ನು ಜಾರಿಗೆ ತರುತ್ತಿದೆ. ಇದರ ಪ್ರಕಾರ, ನೌಕರರು ತಿಂಗಳಿಗೆ ಕನಿಷ್ಠ 10 ದಿನಗಳು ಕಚೇರಿಯಲ್ಲಿರಬೇಕು. ಅಲ್ಲದೆ, ವರ್ಕ್ ಫ್ರಮ್ ಹೋಮ್ ಕೆಲಸದ ಸಮಯದಲ್ಲಿಯೂ ಸಹ ದಿನಕ್ಕೆ 9 ಗಂಟೆ 15 ನಿಮಿಷಗಳಿಗಿಂತ ಹೆಚ್ಚು ಕೆಲಸ ಮಾಡಿದರೆ ಎಚ್ಚರಿಕಯ ಗಂಟೆಯಾಗಿ ಉದ್ಯೋಗಿಗಳಿಗೆ ಸ್ವಯಂಚಾಲಿತವಾಗಿ ಇಮೇಲ್ ಸಂದೇಶ ಹೋಗುತ್ತದೆ.
ಕಂಪನಿಯು ನೌಕರರಿಗೆ ನಿಗದಿಪಡಿಸಿದ ಕೆಲಸದ ಸಮಯವನ್ನು ಮೀರಿ ಹೆಚ್ಚುವರಿ ಸಮಯ ಕೆಲಸ ಮಾಡದಂತೆ ಎಚ್ಚರಿಕೆ ನೀಡಿತು. ವಿಶೇಷವಾಗಿ ದೈನಂದಿನ ಕೆಲಸದ ಸಮಯದಲ್ಲಿ ಮನೆಯಿಂದ ಕೆಲಸಕ್ಕೆ ಕೆಲಸ ಮಾಡುವ ಉದ್ಯೋಗಿಗಳಿಗೆ ಸಲಹೆ ನೀಡಿತು. ಕೆಲಸದ ನಡುವೆ ವಿರಾಮ ತೆಗೆದುಕೊಂಡು ಕೆಲಸದ ಸಮಯವನ್ನು ಪೂರ್ಣಗೊಳಿಸಿದ ತಕ್ಷಣ ವಿಶ್ರಾಂತಿ ಪಡೆಯುವಂತೆ ಅದು ನೌಕರರಿಗೆ ಸಲಹೆಯನ್ನು ಸಹ ನೀಡಲಾಗಿದೆ.
ಸಿಸ್ಟಮ್ ಮಾನಿಟರಿಂಗ್
ಇನ್ಫೋಸಿಸ್ ಈಗ ಸ್ವಯಂಚಾಲಿತ ಟ್ರ್ಯಾಕಿಂಗ್ ಉಪಕರಣದ ಮೂಲಕ ನೌಕರರ ಕೆಲಸದ ಸಮಯವನ್ನು ಟ್ರ್ಯಾಕ್ ಮಾಡುತ್ತದೆ. ಪ್ರತಿ ಉದ್ಯೋಗಿ ದಿನಕ್ಕೆ ಎಷ್ಟು ಕೆಲಸ ಮಾಡುತ್ತಾರೆ? ವಾರಕ್ಕೆ ಎಷ್ಟು ಗಂಟೆಗಳು? ಇದು ವಾರದಲ್ಲಿ ಐದು ದಿನಗಳು, ದೈನಂದಿನ ಮಿತಿಯನ್ನು ಮೀರಿದರೆ... ತಕ್ಷಣದ ಎಚ್ಚರಿಕೆ ಇಮೇಲ್ ಕಳುಹಿಸಲಾಗುತ್ತದೆ.
ಇನ್ಫೋಸಿಸ್ ಉದ್ಯೋಗಿಗಳು ದಿನಕ್ಕೆ 8 ರಿಂದ 9 ಗಂಟೆಗಳ ಕಾಲ ಮಾತ್ರ ಕೆಲಸ ಮಾಡಬೇಕು ಎಂಬ ಸ್ಪಷ್ಟ ಮಾರ್ಗಸೂಚಿಗಳನ್ನು ಮಾನವ ಸಂಪನ್ಮೂಲ ವಿಭಾಗ ಒಳಗೊಂಡಿದೆ. ಉದ್ಯೋಗಿಗಳ ಆರೋಗ್ಯ ರಕ್ಷಣೆಯ ಕಾಳಜಿಯ ದೃಷ್ಟಿಯಿಂದಾಗಿ ಈ ಪ್ರಮುಖ ನಿರ್ಧಾರವನ್ನು ತಗೆದುಕೊಳ್ಳಲಾಗಿದೆ.
ಈ ಹೊಸ ನಿಯಮದಿಂದಾಗಿ ಇನ್ಫೋಸಿಸ್ ಉದ್ಯೋಗಿಗಳು ಕೆಲಸದ ಒತ್ತಡದಿಂದ ನಿರಾಳರಾಗಿದ್ದಾರೆ.


Click it and Unblock the Notifications