ಭಾರತದ ಐಟಿ ದೈತ್ಯ ಸಂಸ್ಥೆಯಾದ ಇನ್ಫೋಸಿಸ್ ತನ್ನ ಕ್ಲೈಂಟ್ ಜೊತೆಗೆ ಎಐ ಸಂಬಂಧಿತ ಡೀಲ್ ಒಂದನ್ನು ಮಾಡಿಕೊಂಡಿದೆ. ಇನ್ಫೋಸಿಸ್ 5 ವರ್ಷಗಳವರೆಗೆ ಒಪ್ಪಂದವನ್ನು ಮಾಡಿಕೊಂಡಿದ್ದು ಇದು 2 ಬಿಲಿಯನ್ ಡಾಲರ್‌ನ ಡೀಲ್ ಎಂದು ಅಂದಾಜು ಮಾಡಲಾಗಿದೆ ಎಂದು ಕಂಪನಿಯು ಸೋಮವಾರ ತಡರಾತ್ರಿ ಷೇರು ವಿನಿಮಯ ಕೇಂದ್ರಗಳಿಗೆ ತಿಳಿಸಿದೆ. ಡಿಜಿಟಲ್ ಟ್ರಾನ್ಸ್‌ಫಾರ್ಮೇಷನ್ ಮತ್ತು ಎಐಗೆ ಸಂಬಂಧಿಸಿದ ಡೀಲ್ ಇದಾಗಿದೆ ಎಂದು ತಿಳಿಸಿದೆ.
"ಕೃತಕ ಬುದ್ಧಿಮತ್ತೆ (ಎಐ) ಮತ್ತು ಯಾತ್ರೀಕೃತ ಅಭಿವೃದ್ಧಿ, ಆಧುನೀಕರಣ ಮತ್ತು ನಿರ್ವಹಣಾ ಸೇವೆಗಳನ್ನು ಒದಗಿಸಲು ಇನ್ಫೋಸಿಸ್ ತನ್ನ ಅಸ್ತಿತ್ವದಲ್ಲಿರುವ ಗ್ರಾಹಕರೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. 5 ವರ್ಷಗಳ ಡೀಲ್ ಇದಾಗಿದ್ದು ಒಟ್ಟು ವೆಚ್ಚ ಅಂದಾಜು 2 ಬಿಲಿಯನ್ ಡಾಲರ್ ಎಂದು ಅಂದಾಜು ಮಾಡಲಾಗಿದೆ," ಎಂದು ಇನ್ಫೋಸಿಸ್ ಸಂಸ್ಥೆಯು ಸ್ಟಾಕ್ ಎಕ್ಸ್‌ಚೇಂಜ್‌ಗೆ ಮಾಹಿತಿ ನೀಡಿದೆ.

ಗ್ರಾಹಕರ ಹೆಸರು ಅಥವಾ ಸಂಸ್ಥೆ ಹೆಸರು ಬಹಿರಂಗಪಡಿಸದ ಇನ್ಫೋಸಿಸ್
ಇನ್ನು ಐಟಿ ದೈತ್ಯ ಸಂಸ್ಥೆಯು ತನ್ನ ಗ್ರಾಹಕರ ಹೆಸರನ್ನು ಅಥವಾ ಸಂಸ್ಥೆಯ ಬಗ್ಗೆ ಯಾವುದೇ ಮಾಹಿತಿಯನ್ನು ತಿಳಿಸದೆ ಇರುವುದು ಗಮನಾರ್ಹ. ಐಟಿ ಸಂಸ್ಥೆಯು ಹಣಕಾಸು ವರ್ಷ 2024ರಲ್ಲಿ ಶೇಕಡ 4-7ರಷ್ಟು ಆದಾಯ ಬೆಳವಣಿಗೆ ಕಾಣುವ, ಶೇಕಡ 20-22ರಷ್ಟು ಲಾಭ ಹೊಂದುವ ಗುರಿಯನ್ನು ಹೊಂದಿದೆ. ಇನ್ನು ಇನ್ಪೋಸಿಸ್ ತನ್ನ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡುವುದಕ್ಕೂ ಮುನ್ನ ಈ ಡೀಲ್ ಅನ್ನು ಮಾಡಿಕೊಂಡಿದೆ.
ಈ ವರ್ಷದಲ್ಲಿ ಇನ್ಫೋಸಿಸ್ ಡೀಲ್‌ಗಳು
ಈ ವರ್ಷದಲ್ಲಿ ಈಗಾಗಲೇ ಇನ್ಫೋಸಿಸ್ ಎರಡು ಮೆಗಾ ಡೀಲ್‌ಗಳನ್ನು ಘೋಷಣೆ ಮಾಡಿದೆ. ಈ ಹಿಂದೆ ಬ್ರಿಟಿಷ್ ಆಯಿಲ್ ಆಂಡ್ ಗ್ಯಾಸ್ ಕಂಪನಿ ಬಿಪಿ ಜೊತೆ ಸುಮಾರು 1.5 ಬಿಲಿಯನ್ ಡಾಲರ್ ಡೀಲ್ ಅನ್ನು ಘೋಷಣೆ ಮಾಡಿದೆ. ಅದಾದ ಬಳಿಕ ಡಾನ್ಸ್ಕೆ ಬ್ಯಾಂಕ್ ಜೊತೆ 454 ಮಿಲಿಯನ್ ಡಾಲರ್‌ನ ಡೀಲ್ ಅನ್ನು ಇನ್ಫೋಸಿಸ್ ಘೋಷಿಸಿದೆ. ಈಗ ಎಐ ಸಂಬಂಧಿತ ಡೀಲ್ ಅನ್ನು ತನ್ನ ಗ್ರಾಹಕರೊಂದಿಗೆ ಮಾಡಿಕೊಂಡಿರುವುದಾಗಿ ಇನ್ಫೋಸಿಸ್ ಘೋಷಿಸಿದೆ.
ಇನ್ಫೋಸಿಸ್ ಮೊದಲ ತ್ರೈಮಾಸಿಕ ವರದಿ
ಜುಲೈ 12ರಿಂದ ಹಲವಾರು ಸಂಸ್ಥೆಗಳು ತಮ್ಮ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಲು ಆರಂಭಿಸಿದೆ. ಇನ್ಫೋಸಿಸ್ ಸಂಸ್ಥೆಯ ಜೂನ್‌ನಲ್ಲಿ ಕೊನೆಯಾದ ತ್ರೈಮಾಸಿಕ ವರದಿಯು ಜುಲೈ 20ರಂದು ಪ್ರಕಟ ಮಾಡಲಾಗುತ್ತದೆ. ಈ ತ್ರೈಮಾಸಿಕದಲ್ಲಿ ಸಂಸ್ಥೆ ಬೆಳವಣಿಗೆ ಮಂದಗತಿಯಾಗಿರಬಹುದು ಎಂದು ಹಲವಾರು ತಜ್ಞರುಗಳು ಅಭಿಪ್ರಾಯಿಸಿದ್ದಾರೆ.
ಹಣಕಾಸು ವರ್ಷ 2023-24ನೇ ಮೊದಲ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಸಂಸ್ಥೆಯ ಆದಾಯ ಬೆಳವಣಿಗೆ ಶೇಕಡ 0.8 ಆಗಿರಬಹುದು. ಕಳೆದ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕಕ್ಕೆ ಹೋಲಿಕೆ ಮಾಡಿದಾಗ ಇದು ಕಡಿಮೆ ಬೆಳವಣಿಗೆ ಆಗಿರಲಿದೆ ಎಂದು ಫಿಲಿಪ್ ಕ್ಯಾಪಿಟಲ್ ಅಂದಾಜು ವ್ಯಕ್ತಪಡಿಸಿದೆ. ಬೇಡಿಕೆಯ ಅನಿಶ್ಚಿತತೆಯು ಹಣಕಾಸು ವರ್ಷ 2024ರಲ್ಲಿ ಬಿಎಫ್‌ಎಸ್‌ಐ, ಟೆಲಿಕಾಂ, ಹೈಟೆಕ್ ಮತ್ತು ರಿಟೇಲ್‌ಗಳಲ್ಲಿನ ದುರ್ಬಲ ಆರಂಭಕ್ಕೆ ಕಾರಣವಾಗುತ್ತದೆ ಎಂದು ವರದಿ ಹೇಳಿದೆ.
"ಲಾಭವು ಹೆಚ್ಚಾಗಿರದು ಕಡಿಮೆಯೂ ಆಗಿರದು, ಸ್ಥಿರವಾಗಿರಬಹುದು. ಸಾರಿಗೆ ಹಾಗೂ ಸೌಲಭ್ಯಗಳ ವೆಚ್ಚವು ಅಧಿಕವಾಗಿರಬಹುದು. ಇನ್ಫೋಸಿಸ್‌ನಲ್ಲಿ ಮೊದಲ ತ್ರೈಮಾಸಿಕದಲ್ಲಿ ವೇತನ ಹೆಚ್ಚಳವನ್ನು ನಾವು ಊಹೆ ಮಾಡಿರಲಿಲ್ಲ. ಇನ್ಫೋಸಿಸ್ ತನ್ನ ಮಾರ್ಗದರ್ಶನವನ್ನು ಉಳಿಸಿಕೊಳ್ಳುತ್ತದೆ ಎಂಬ ನಿರೀಕ್ಷೆಯನ್ನು ನಾವು ಹೊಂದಿದ್ದೇವೆ," ಎಂದು ವರದಿಯು ತಿಳಿಸುತ್ತದೆ.
ತ್ರೈಮಾಸಿಕ ವರದಿ
ಇಂಡಸ್‌ಇಂಡ್ ಬ್ಯಾಂಕ್, ಐಸಿಐಸಿಐ ಪ್ರೂ ಲೈಫ್, ಐಸಿಐಸಿಐ ಲೊಂಬಾರ್ಡ್, ಪಾಲಿಕ್ಯಾಬ್ ಇಂಡಿಯಾ, ಎಲ್&ಟಿ ಟೆಕ್, ಸಿಐಇ ಆಟೋಮೋಟಿವ್, ಟಿವಿ18 ಬ್ರಾಡ್‌ಕಾಸ್ಟ್, ಹಿಮಾದ್ರಿ ಸ್ಪೆಷಲ್ ಕೆಮಿಕಲ್, ಜೆಎಸ್‌ಡಬ್ಲ್ಯೂ ಇಸ್ಪಾಟ್ ಸ್ಪೆಷಲ್ ಪ್ರೋಡೆಕ್ಟ್ಸ್, ಮಿಷ್ಟನ್ ಫುಡ್ಸ್, ಔರಮ್ ಪ್ರಾಪ್ಟೆಕ್, ಶೀತಲ್ ಕೂಲ್ ಪ್ರಾಡಕ್ಟ್ಸ್ ಮೊದಲ ಸಂಸ್ಥೆಗಳು ಜುಲೈ 18ರಂದು ತ್ರೈಮಾಸಿಕ ವರದಿ ಪ್ರಕಟಿಸಲಿದೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications