ಸಿಲಿಕಾನ್ ಸಿಟಿ, ಮೆಟ್ರೋ ಸಿಟಿ, ಗಾರ್ಡನ್ ಸಿಟಿ ಬೆಂಗಳೂರನ್ನು ಈಗ ಕಾಸ್ಟ್ಲಿ ಸಿಟಿ ಅಂತಲೂ ಕರೆಯಬಹುದು. ಇಲ್ಲಿ ಜೀವನ ನಡೆಸೋಕೆ ಮನೆ ಮಂದಿಯೆಲ್ಲ ದುಡಿಮೆ ಮಾಡಿದರೂ ಸಾಕಾಗುವುದಿಲ್ಲ. ಖರ್ಚು ಹೆಚ್ಚು, ಆದಾಯ ಕಡಿಮೆ ಈ ವೃತ್ತದಲ್ಲೇ ಸಾಕಷ್ಟು ಮಂದಿಯ ಜೀವನ ಸಾಗುತ್ತಿದೆ. ಎಷ್ಟೋ ಜನರು ಸಂಬಳ ಸಾಕಾಗಲ್ಲ ಎಂದು ಗೋಗರೆಯುತ್ತಿದ್ದಾರೆ. ಆದರೆ ಇಂಥವರ ನಡುವೆ ಇನ್ಫೋಸಿಸ್ ಉದ್ಯೋಗಿಯೊಬ್ಬ ತನ್ನ ಚಿಂತೆಗಳನ್ನೆಲ್ಲ ಬದಿಗಿಟ್ಟು, ಪಾರ್ಟ್ ಟೈಂ ಉದ್ಯೋಗದ ಮೊರೆ ಹೋಗಿದ್ದಾರೆ.

ಹೌದು, ಆದಾಯ ಸಾಕಾಗುವುದಿಲ್ಲ ಎಂದು ಕೊರಗುವುರರ ನಡುವೆ, ಸಾಕಾಗದೇ ಇರುವ ಆದಾಯವನ್ನು ಹೆಚ್ಚಿಸಿಕೊಳ್ಳಲು ಇನ್ಫೋಸಿಸ್ ಉದ್ಯೋಗಿಯು ಗಿಗ್..ಅಂದರೆ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದಾರೆ. ಕೆಲಸದ ನಂತರ ಉಳಿಯುವ ಸಮಯದಲ್ಲಿ ಆತ ಬೈಕ್ ಟ್ಯಾಕ್ಸಿ ಸವಾರನಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಆದಾಯವನ್ನು ಈ ಮೂಲಕ ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ ಜನರನ್ನು ಈ ಟ್ರಾಫಿಕ್ ಎಂಬ ಕಿರಿಕಿರಿಯೇ ಎಬ್ಬಿಸುತ್ತದೆ. ಕಾರ್ಪೊರೇಟ್ ನೌಕರರ ಬೇಗೆಯ ಜೀವನಶೈಲಿ ಮತ್ತು ಟೆಕ್ನಾಲಜಿಯ ವ್ಯಸ್ತತೆಗಳು ಬೆಂಗಳೂರಿಗರೆಲ್ಲರಿಗೂ ಪರಿಚಿತ. ಕೇವಲ ದುಡಿಮೆಗೆ ಮಾತ್ರವಲ್ಲ, ಆತ್ಮತೃಪ್ತಿ, ಸಾಮಾಜಿಕ ಸಂಪರ್ಕ ಮತ್ತು ಜೀವನದ ಹೊಸ ಆಯಾಮಗಳಿಗೆ ಗಿಗ್ ಪಥವನ್ನು ಆರಿಸುತ್ತಿರುವ ಯುವ ಉದ್ಯೋಗಿಗಳು ಇದಕ್ಕೆ ಸಾಕ್ಷಿ.ಇತ್ತೀಚೆಗಿನ ಒಂದು ಲಿಂಕ್ಡ್‌ಇನ್ ಪೋಸ್ಟ್‍ನಲ್ಲಿ ಓಲಾ ಬೈಕ್ ಟ್ಯಾಕ್ಸಿಯಲ್ಲಿ ಸವಾರನಾಗಿ ಬಂದಿದ್ದ ಇನ್ಫೋಸಿಸ್ ಉದ್ಯೋಗಿಯ ಕಥೆ ವೈರಲ್ ಆಗಿದ್ದು, ಇದು ಗಮನ ಸೆಳೆಯುವಂತಹ ಘಟನೆಯಾಗಿದೆ.
ಹೌದು, ಬೆಂಗಳೂರಿನ ಚಾರ್ಮಿಕಾ ನಾಗಲ್ಲ ಎಂಬುವರು ಬೈಕ್ ಟ್ಯಾಕ್ಸಿ ಸವಾರನ, ಇಂಗ್ಲೀಷ್ ಭಾಷೆ ಕೇಳಿ ಬೆರಗಾಗಿದ್ದರು. ಆತ ಫೋನ್‌ನಲ್ಲಿ ಸ್ಟೈಲ್ ಆಗಿ Am I audible? ಎಂದು ಹೇಳಿದ್ದು ಅವರನ್ನು ಎಚ್ಚರಿಸಿತ್ತು. ಆಗಲೇ ಅವರಿಗೆ ತಿಳಿದಿದ್ದು, ಆತ ಇನ್ಫೋಸಿಸ್‌ನ ಫುಲ್ ಟೈಮ್ ಉದ್ಯೋಗಿ ಎಂದು. ಅವರೇ ಹೇಳಿರುವಂತೆ ದಿನದಲ್ಲಿ ಮೊದಲಾದ ಸಮಯವನ್ನು ಮತ್ತು ವಾರಾಂತ್ಯಗಳನ್ನು ಪಾರ್ಟ್ ಟೈಮ್ ಜಾಬ್‌ಗಾಗಿ ಬಳಸಿಕೊಳ್ಳುತ್ತಿದ್ದಾರಂತೆ. ಅಂದರೆ ಪ್ರತಿದಿನ ಎಲ್ಲರೂ ಸೋಷಿಯಲ್ ಮೀಡಿಯಾದಲ್ಲಿ ಸಮಯ ವ್ಯರ್ಥ ಮಾಡುತ್ತಿರುವಾಗ, ಅಂಥವರಲ್ಲಿ ಇವರು ವಿಭಿನ್ನವಾಗಿ ಕಂಡಿದ್ದಾರೆ. ಹಣ ಮಾತ್ರವಲ್ಲ, ಜೀವನವನ್ನು ಬದಲಿ ದೃಷ್ಟಿಕೋನದಿಂದ ನೋಡಲು ಈ ಕೆಲಸ ಸಹಾಯ ಮಾಡುತ್ತಿದೆ ಎಂದರು.
ಇದೇ ರೀತಿಯ ಮತ್ತೊಂದು ಉದಾಹರಣೆಯು ಬಿ2ಬಿ ಇವೆಂಟ್ ಮ್ಯಾನೇಜರ್‌ರಿಂದ ಬಂದಿದೆ. ಕೆಲಸದ ನಂತರ ಖಾಲಿ ಸಮಯದಲ್ಲಿ, ಅವರು ಹೈ ಎಂಡ್ ಬೈಕ್‌ನಲ್ಲಿ ಬರುವ ಗ್ರಾಹಕರಿಗೆ ಸವಾರಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕೆಲವೊಮ್ಮೆ ಪ್ರಯಾಣಿಕರೊಂದಿಗೆ ನಡೆಯುವ ಚಿಕ್ಕ ಚಿಕ್ಕ ಚರ್ಚೆಗಳು ಅವರ ಉದ್ಯೋಗ, ಜೀವನ, ಆಸಕ್ತಿಗಳು ತಮ್ಮದೇ ಆದ ಜ್ಞಾನವನ್ನೂ ಹಂಚಿಕೊಳ್ಳುವ ವೇದಿಕೆಯಾಗಿವೆ ಎಂಬುದನ್ನು ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಂತಹ ನಗರಗಳಲ್ಲಿ ಈ ಪರಿವರ್ತನೆ ಸ್ಪಷ್ಟವಾಗಿ ಕಾಣುತ್ತಿದೆ. ಊಟ ವಿತರಣೆ, ಫ್ರೀಲಾನ್ಸ್ ಟಾಕ್, ಓನ್-ಡಿಮ್ಯಾಂಡ್ ಸೇವೆಗಳ ಮೂಲಕ ಗಿಗ್ ಜಗತ್ತು ಬೇರೊಂದು ಹಂತಕ್ಕೆ ತಲುಪಿದೆ. ಆದರೆ ಇತ್ತೀಚಿನ ಈ ಸವಾರರ ಕಥೆಗಳು ಗಿಗ್ ಆರ್ಥಿಕತೆಯ ಮನುಷ್ಯೀಯ ಮುಖವನ್ನೂ ಬಹಿರಂಗಪಡಿಸುತ್ತವೆ. ಅವರು ಗಟ್ಟಿಯಾದ ಕೋಡ್ ಬರೆಯುವ, ಪವರ್‌ಪಾಯಿಂಟ್ ಸ್ಲೈಡ್ ತಯಾರಿಸುವ ಕೆಲಸದ ಹೊರಗೂ, ಜನರೊಂದಿಗೆ ನೇರ ಸಂಪರ್ಕದಲ್ಲಿರುವ ಹೊಸ ಜಗತ್ತಿನಲ್ಲಿ ಕಾಲಿಡುತ್ತಿದ್ದಾರೆ.
ಬೆಂಗಳೂರು ಈ ಹೊಸ ಚಲನೆಯ ಸಂಕೇತವಾಗಿದೆ. ಗಿಗ್ ಆರ್ಥಿಕತೆ ಕೇವಲ ಹಣ ಸಂಗ್ರಹಿಸುವ ಪರಿಕಲ್ಪನೆಯಲ್ಲ, ಅದು ವ್ಯಕ್ತಿಗತ ಬೆಳವಣಿಗೆಯ ತಳಿ. ಇಂತಹ ಕತೆಗಳು ಇನ್ನಷ್ಟು ಯುವ ಉದ್ಯೋಗಿಗಳಿಗೆ ಪ್ರೇರಣೆಯಾಗಬಹುದು. ಪಾರ್ಟ್ಟೈಮ್ ಗಿಗ್ ಕೆಲಸವು ಕೆಲವರಿಗೆ ಹಣದ ಆಧಾರದ ಮೇಲೆ ಆರಂಭವಾಗಬಹುದು, ಆದರೆ ಸಮಯದ ಸಾಗಣೆಯಲ್ಲಿ ಅದು ಒಂದು ಆತ್ಮ ತೃಪ್ತಿಯ ಮಾರ್ಗವಾಗಿ ರೂಪುಗೊಳ್ಳುತ್ತದೆ. ಇದು ಸಮಾನ ಮನಸ್ಕ ಜನರೊಂದಿಗೆ ಸಂವಾದ ಮಾಡುವ ಅವಕಾಶ ನೀಡುತ್ತದೆ. ನಿರ್ಜೀವ ನಗರ ಸಂಚಾರ ಈಗ ಬದುಕನ್ನು ಅನ್ವೇಷಿಸುವ ವೇದಿಕೆಯಾಗುತ್ತಿದೆ.


Click it and Unblock the Notifications