Infosys: 2030 ರ ವೇಳೆಗೆ 'ಇನ್ಫೋಸಿಸ್‌ ಸ್ಪ್ರಿಂಗ್‌ಬೋರ್ಡ್‌' ಮೂಲಕ ಯುವಜನರಿಗೆ ಅರ್ಧ ಮಿಲಿಯನ್ ಉದ್ಯೋಗ ಸೃಷ್ಟಿಸುವ ಗುರಿ..!

ಇನ್ಫೋಸಿಸ್ ಫೌಂಡೇಶನ್ ಮೂಲಕ ಭಾರತದಲ್ಲಿ ಅರ್ಧ ಮಿಲಿಯನ್‌ಕ್ಕಿಂತ ಹೆಚ್ಚಿನ ಉದ್ಯೋಗಾಕಾಂಕ್ಷಿಗಳು 2030ರ ವೇಳೆಗೆ ಉದ್ಯೋಗ ಪಡೆಯಲು ಅವಕಾಶವನ್ನು ಸೃಷ್ಟಿಸುವ ಇನ್ಫೋಸಿಸ್ ಸ್ಪ್ರಿಂಗ್‌ಬೋರ್ಡ್ ಜೀವನೋಪಾಯ ಕಾರ್ಯಕ್ರಮವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.

ಇನ್ಫೋಸಿಸ್ ಈ ಕಾರ್ಯಕ್ರಮಕ್ಕಾಗಿ ಮೊದಲ ಹಂತದ ಯೋಜನೆಗಾಗಿ ಸುಮಾರು 200 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ನೀಡಿದೆ.

ಇನ್ಫೋಸಿಸ್: 2030 ವೇಳೆಗೆ ಭಾರತದಲ್ಲಿ ಅರ್ಧ ಮಿಲಿಯನ್ ಉದ್ಯೋಗ ಸೃಷ್ಟಿ.

ಇನ್ಫೋಸಿಸ್‌ನ ಪ್ರಮುಖ ಡಿಜಿಟಲ್ ಕಲಿಕಾ ವೇದಿಕೆಯಾದ ಇನ್ಫೋಸಿಸ್ ಸ್ಪಿಂಗ್‌ಬೋರ್ಡ್ ಕಲಿಕೆ ಮತ್ತು ಕೌಶಲ್ಯಕ್ಕೆ ಮಾತ್ರವಲ್ಲದೆ, ಕಲಿಯುವವರಿಗೆ ಸುಸ್ಥಿರ ಜೀವನೋಪಾಯ ಮತ್ತು ವೃತ್ತಿಜೀವನವನ್ನು ಪಡೆದುಕೊಳ್ಳಲು ಹೆಚ್ಚಿನ ಅವಕಾಶವನ್ನು ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇನ್ಫೋಸಿಸ್ ಸ್ಪ್ರಿಂಗ್‌ಬೋರ್ಡ್ ಜೀವನೋಪಾಯ ಕಾರ್ಯಕ್ರಮ

ಇನ್ಫೋಸಿಸ್ ಸ್ಪಿಂಗ್‌ಬೋರ್ಡ್ ಜೀವನೋಪಾಯ ಕಾರ್ಯಕ್ರಮವು STEM ಮತ್ತು STEM ಅಲ್ಲದ ಕೈಗಾರಿಕೆಗಳಲ್ಲಿ ಪದವೀಧರ ಮತ್ತು ಪದವಿಪೂರ್ವ ಯುವಕರಿಗೆ ಉದ್ಯೋಗ ಸೃಷ್ಟಿಯ ಮೇಲೆ ಇದು ಕೆಲಸವನ್ನು ಮಾಡುವಂತಹ ಕಾರ್ಯಕ್ರಮವಾಗಿದೆ.

ಇನ್ಫೋಸಿಸ್ ಸ್ಪಿಂಗ್‌ಬೋರ್ಡ್ ಮೂಲಕ ಈ ಕಾರ್ಯಕ್ರಮವು ಕೃತಕ ಬುದ್ಧಿಮತ್ತೆ(AI) ಮತ್ತು ಯಂತ್ರ ಕಲಿಕೆಯಂತಹ ಹೆಚ್ಚಿನ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಮತ್ತು ಹಣಕಾಸು ಮುಂತಾದ ಕಾರ್ಯಗಳಲ್ಲಿ ಹೆಚ್ಚುವರಿ ಉದ್ಯಮ-ಸಂಬಂಧಿತ ಪಠ್ಯಕ್ರಮವನ್ನು ಉದ್ಯೀಕ್ಷಿಂಗಳಿಗೆ ನೀಡಲು ಇದು ಸಹಾಯಕವಾಗಿದೆ. ಇದರ ಜೊತೆಗೆ ಉದ್ಯೋಗಿಗಳಿಗೆ ಬಹುಮುಖ್ಯವಾದ ಕೌಶಲ್ಯದ ಕೊರೆತೆ ಎಂದರೆ ಸಂವಹನ ಕಲೆ ಇದನ್ನು ಕೂಡು ಕಲಿಸಲಾಗುತ್ತದೆ. ಇದರ ಜೊತಗೆ ಸಮಯ ನಿರ್ವಹಣೆ ಮತ್ತು ಸಂದರ್ಶನ ಹೇಗೆ ನೀಡಬೇಕು ಎಂಬ ಕೌಶಲ್ಯವರಿಗೆ ಹಾಗೂ ಮಾಡ್ಯೂಲ್‌ಗಳು ಕಲಿಯುವವರು ಮತ್ತು ಉದ್ಯೋಗಾಕಾಂಕ್ಷಿಗಳು ಅಗತ್ಯವಾದ ಕೆಲಸದ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯವನ್ನು ಮಾಡುತ್ತದೆ ಎಂದು ಹೇಳಿದ್ದಾರೆ.

ಇನ್ಫೋಸಿಸ್ ಫೌಂಡೇಶನ್ ಈಗಾಗಲೇ ಐಸಿಟಿ ಅಕಾಡೆಮಿ, ಉನ್ನತಿ, ನಿರ್ಮಾಣ್, ಮ್ಯಾಜಿಕ್ ಬಸ್, ಅಗಾ ಖಾನ್ ರೂರಲ್ ಸಪೋರ್ಟ್ ಪ್ರೋಗ್ರಾಂ ಸೆಂಟಮ್, ಸಿಐಐ ಫೌಂಡೇಶನ್ ಮತ್ತು ಎನ್‌ಐಐಟಿ ಫೌಂಡೇಶನ್ ಸೇರಿದಂತೆ ಸುಮಾರು 20 ಅನುಷ್ಠಾನ ಪಾಲುದಾರರೊಂದಿಗೆ ಸಹಯೋಗವನ್ನು ಹೊಂದಿದೆ.

ಈ ಕಾರ್ಯಕ್ರಮದ ಕುರಿತು ಮಾತನಾಡಿದ ಇನ್ಫೋಸಿಸ್ ಫೌಂಡೇಶನ್‌ನ ಟ್ರಸ್ಟಿ ಸುಮಿತ್ ವೀರಮಣಿ, ''ನಮ್ಮ ದೇಶದಲ್ಲಿ ಕೈಗಾರಿಕೆ ಮತ್ತು ಕೃತಕ ಬುದ್ಧಿಮತ್ತೆ (AI) ಯುಗದ ಬೇಡಿಕೆಗಳನ್ನು ಪೂರೈಸಲು ಕೌಶಲ್ಯ ಉಪಕ್ರಮಗಳ ಮೇಲೆ ಕೇಂದ್ರೀಕರಿಸುವುದು ಮತ್ತು ನಂತರ ಕಲಿಕೆಯಿಂದ ಜೀವನೋಪಾಯಕ್ಕೆ ಒಂದು ಮಾರ್ಗವನ್ನು ರೂಪಿಸುವುದು ದೊಡ್ಡ ಅವಕಾಶವಾಗಿದೆ. ಈ ತುರ್ತು ಅಗತ್ಯವನ್ನು ಪೂರೈಸಲು ಇನ್ಫೋಸಿಸ್ ಸ್ವಿಂಗ್ ಬೋರ್ಡ್ ಜೀವನೋಪಾಯ ಕಾರ್ಯಕ್ರಮವನ್ನು ಪರಿಕಲ್ಪನೆ ಮಾಡಲಾಗಿದೆ ಎಂದು ಹೇಳಿದ್ದರೆ.

ಈ ಕಾರ್ಯಕ್ರಮವು ಕಲಿಕೆ ಮತ್ತು ಸುಸ್ಥಿರ ಜೀವನೋಪಾಯವನ್ನು ಬೆಳೆಸುವ ಜೊತಗೆ ಭಾರತದಲ್ಲಿನ ಪ್ರತಿಭಾನ್ವಿತ ಯುವಕರಿಗೆ ಲಾಭದಾಯಕ ವೃತ್ತಿಜೀವನವನ್ನು ಸುರಕ್ಷಿತಗೊಳಿಸಲು ಮತ್ತು ಉಳಿಸಿಕೊಳ್ಳಲು ತಮ್ಮನ್ನು ತಾವು ಕೌಶಲ್ಯಪೂರ್ಣಗೊಳಿಸಲು ಸಬಲೀಕರಣಕ್ಕೆ ಹಾಗೂ ದೇಶದ ಪ್ರಗತಿ ಮತ್ತು ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡಲು ಉದ್ಯೋಗ ಸೃಷ್ಟಿಗೆ ದಾರಿ ಮಾಡಿಕೊಂಡಲು ಸಹಾಉವಾಗುತ್ತದೆ ಎಂದು ಹೇಳಿದ್ದಾರೆ.

ಐಸಿಟಿ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿ ಶ್ರೀಕಾಂತ್ ಮಾತನಾಡಿ,ಇನ್ಫೋಸಿಸ್ ಸ್ಪಿಂಗ್‌ಬೋರ್ಡ್ ಜೀವನೋಪಾಯ ಕಾರ್ಯಕ್ರಮದ ಮೂಲಕ, ಇನ್ಫೋಸಿಸ್ ಫೌಂಡೇಶನ್ ವಿದ್ಯಾರ್ಥಿಗಳ ದೀರ್ಘಾವಧಿಯ ವೃತ್ತಿಜೀವನದ ಯಶಸ್ಸಿಗೆ ಕಾರಣವಾಗುತ್ತದೆ. ಯುವಜನತೆಗೆ ವೃತ್ತಿ ಮತ್ತು ಉದ್ಯೋಗಾವಕಾಶದ ಅವಕಾಶಗಳನ್ನು ಸಕ್ರಿಯಗೊಳಿಸುತ್ತದೆ ಅವರು ಕೆಲಸಲದಲಿ ಶ್ರೇಷ್ಠತೆಯನ್ನು ಸಾಧಿಸಲು ಅವರಿಗೆ ಆತ್ಮವಿಶ್ವಾಸವನ್ನು ಒದಗಿಸುತ್ತದೆ ಎಂದಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರ ಇನ್ಫೋಸಿಸ್ ಫೌಂಡೇಶನ್‌ನ ಈ ಕಾರ್ಯಕ್ರಮವು ಭಾರತದ ಯುವಜನತೆಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+