ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಈ ಹಿಂದೆ 2020 ರಲ್ಲಿ ಯುವ ಉದ್ಯೋಗಿಗಳು ವಾರದಲ್ಲಿ 60 ಗಂಟೆ ದುಡಿಯಬೇಕು ಎಂದು ಹೇಳಿದ್ದರು. ಆದರೆ ಈಗ ಆ ಅವಧಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, "ಭಾರತದ ಕೆಲಸದ ಸಂಸ್ಕೃತಿ ಬದಲಾಗಬೇಕು. ಜಾಗತಿಕ ಮಟ್ಟದಲ್ಲಿ ದೇಶವು ಪರಿಣಾಮಕಾರಿಯಾಗಿ ಸ್ಪರ್ಧಿಸಬೇಕಾದರೆ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಸಿದ್ಧರಾಗಿರಬೇಕು," ಎಂದು ಹೇಳಿಕೊಂಡಿದ್ದಾರೆ.
77 ವರ್ಷದ ನಾರಾಯಣ ಮೂರ್ತಿ 3one4 ಕ್ಯಾಪಿಟಲ್‌ನ ಪಾಡ್‌ಕಾಸ್ಟ್ 'ದಿ ರೆಕಾರ್ಡ್' ನ ಮೊದಲ ಸಂಚಿಕೆಯಲ್ಲಿ ಮಾಜಿ ಇನ್ಫೋಸಿಸ್ ಸಿಇಒ ಮೋಹನ್‌ದಾಸ್ ಪೈ ಜೊತೆ ಮಾತನಾಡುತ್ತಾ ಈ ಮೇಲಿನ ಹೇಳಿಕೆ ನೀಡಿದ್ದಾರೆ. ಅಧಿಕ ಕೆಲಸದ ಅವಧಿಯನ್ನು ಹೊಂದಿರುವ ದೇಶಗಳಾದ ಜಪಾನ್ ಮತ್ತು ಜರ್ಮನಿಯನ್ನು ಕೂಡಾ ನಾರಾಯಣ ಮೂರ್ತಿ ಉಲ್ಲೇಖಿಸಿದ್ದಾರೆ. ಹಾಗೆಯೇ ರಾಷ್ಟ್ರ ನಿರ್ಮಾಣ, ತಂತ್ರಜ್ಞಾನ, ಕಂಪನಿ ಇನ್ಫೋಸಿಸ್ ಮತ್ತು ಇತರ ವಿಷಯಗಳ ಬಗ್ಗೆ ಮಾತನಾಡಿದರು.

ಮುಂದಿನ 10, 15 ವರ್ಷಗಳ ತಮ್ಮ ದೃಷ್ಟಿಕೋನದ ಬಗ್ಗೆ ಕೇಳಿದಾಗ ನಾರಾಯಣ ಮೂರ್ತಿ, ಭಾರತದಲ್ಲಿ ಉತ್ಪಾದಕತೆಯನ್ನು ಸುಧಾರಿಸುವ ಮತ್ತು ಕೆಲವು ವಿಚಾರದಲ್ಲಿ ಸರ್ಕಾರದ ವಿಳಂಬವನ್ನು ಕಡಿಮೆ ಮಾಡುವ ಅಗತ್ಯವನ್ನು ಎತ್ತಿ ತೋರಿಸಿದರು. ಭಾರತದಲ್ಲಿ ಉದ್ಯೋಗ ಉತ್ಪಾದಕತೆಯು ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ ಎಂದರು.
"ನಾವು ನಮ್ಮ ಕೆಲಸದ ಉತ್ಪಾದಕತೆಯನ್ನು ಸುಧಾರಿಸದಿದ್ದರೆ, ನಾವು ಸರ್ಕಾರದ ಭ್ರಷ್ಟಾಚಾರವನ್ನು ಕಡಿಮೆ ಮಾಡದಿದ್ದರೆ, ನಾನು ಕೆಲವು ವಿಚಾರ ಓದಿದ್ದೇನೆ. ಅದರ ಸತ್ಯಾಸತ್ಯತೆ ತಿಳಿದಿಲ್ಲ. ಆದರೆ ನಿರ್ಧಾರ ತೆಗೆದುಕೊಳ್ಳುವಲ್ಲಿ ನಮ್ಮ ಸರ್ಕಾರದ ವಿಳಂಬ ಕಡಿಮೆ ಮಾಡದಿದ್ದರೆ, ಅತೀ ಅಧಿಕ ಪ್ರಗತಿಯನ್ನು ಸಾಧಿಸಿದ ದೇಶಗಳೊಂದಿಗೆ ಸ್ಪರ್ಧಿಸಲು ನಮಗೆ ಸಾಧ್ಯವಾಗುವುದಿಲ್ಲ," ಎಂದು ಇನ್ಫೋಸಿಸ್ ಸಂಸ್ಥಾಪಕರು ಹೇಳಿದ್ದಾರೆ.
ಯುವಕರು 70 ಗಂಟೆ ದುಡಿಯಿರಿ
"ಆದ್ದರಿಂದಾಗಿ ನಮ್ಮ ಯುವಕರು 'ಇದು ನನ್ನ ದೇಶ. ನಾನು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಬಯಸುತ್ತೇನೆ' ಎಂದು ಹೇಳಬೇಕು ಎಂಬುದು ನನ್ನ ವಿನಂತಿ," ಎಂದು ಹೇಳಿದರು. ಹಾಗೆಯೇ ಕೆಲವು ಐತಿಹಾಸಿಕ ಉದಾಹರಣೆಗಳನ್ನು ಕೂಡಾ ನಾರಾಯಣ ಮೂರ್ತಿ ಉಲ್ಲೇಖಿಸಿದರು. ಎರಡನೆಯ ಮಹಾಯುದ್ಧದ ನಂತರ ಜರ್ಮನಿ ಮತ್ತು ಜಪಾನ್ ಬೆಳವಣಿಗೆಯನ್ನು ಒತ್ತಿ ಹೇಳಿದರು.
"ಎರಡನೆಯ ಮಹಾಯುದ್ಧದ ನಂತರ ಜರ್ಮನ್ನರು ಮತ್ತು ಜಪಾನಿಯರು ಮಾಡಿದ್ದು ಇದನ್ನೇ. ಪ್ರತಿ ಜರ್ಮನ್ ಪ್ರಜೆಗಳು ಕೆಲವು ವರ್ಷಗಳ ಕಾಲ ಅಧಿಕ ಅವಧಿ ಕೆಲಸ ಮಾಡಿದ್ದಾರೆ," ಎಂದ ನಾರಾಯಣ ಮೂರ್ತಿ, "ನಮ್ಮ ಜನಸಂಖ್ಯೆಯ ಗಮನಾರ್ಹ ಬಹುಪಾಲು ನಮ್ಮ ಯುವಜನರು ಇದ್ದಾರೆ. ಈ ಯುವಜನರು ನಮ್ಮ ದೇಶವನ್ನು ಕಟ್ಟಬಲ್ಲರು. ಆದ್ದರಿಂದಾಗಿ ಬದಲಾವಣೆಗೆ ಈಗ ಅತೀ ಅಗತ್ಯ," ಎಂದು ಅಭಿಪ್ರಾಯಿಸಿದರು.
"ನಾವು ಶಿಸ್ತುಬದ್ಧವಾಗಿರಬೇಕು, ಉತ್ಪಾದಕತೆಯನ್ನು ಸುಧಾರಿಸಬೇಕು. ನಾವು ಮಾಡದಿದ್ದರೆ, ಈ ಬಡ ಸರ್ಕಾರ ಏನು ಮಾಡುಬಲ್ಲದು ಎಂದು ನಾನು ಭಾವಿಸುತ್ತೇನೆ?. ಪ್ರತಿಯೊಂದು ಸರ್ಕಾರವು ಜನರ ಸಂಸ್ಕೃತಿಯಂತೆ ಉತ್ತಮವಾಗಿದೆ. ನಮ್ಮ ಸಂಸ್ಕೃತಿಯು ಹೆಚ್ಚು ದೃಢ ನಿರ್ಧಾರವಾದ ಹೆಚ್ಚು ಶಿಸ್ತು, ಕಷ್ಟಪಟ್ಟು ದುಡಿಯುವೆಡೆ ಬದಲಾಗಬೇಕು," ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ!
ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಹೇಳಿಕೆಯು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. "ಅವರ ಮಾತನ್ನು ಒಪ್ಪಿಕೊಳ್ಳಿ, ನಿಮ್ಮ ಉದ್ಯೋಗ ನೀಡಿದ ಸಂಸ್ಥೆಗಾಗಿ 40 ಗಂಟೆಗಳು ಮತ್ತು ನಿಮ್ಮ ಸ್ವಂತ ಹಿತಾಸಕ್ತಿಗಳಿಗಾಗಿ 30 ಗಂಟೆಗಳ ಕಾಲ ಕೆಲಸ ಮಾಡಿ," ಎಂದು ಒಬ್ಬರ ಕಾಮೆಂಟ್ ಮಾಡಿದ್ದಾರೆ.
ಆದರೆ ಇನ್ನೂ ಕೆಲವರು ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. "ವಾರಕ್ಕೆ 70 ಗಂಟೆ ಕೆಲಸವನ್ನು ನಾನು ಸಂಪೂರ್ಣವಾಗಿ ಒಪ್ಪುವುದಿಲ್ಲ! ವಾರಕ್ಕೆ 70 ಗಂಟೆ ಕೆಲಸ ಮಾಡಿ ನಾವು ನಮ್ಮ ದೇಶವನ್ನು ಅತ್ಯುತ್ತಮ ದೇಶವನ್ನಾಗಿಸಬಹುದು. ಆದರೆ ಅದಕ್ಕೆ ನಾವು ತೆರಬೇಕಾಗಿರುವುದು ಏನು?," ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ.
"ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಿದ ನಂತರ ಆ ವ್ಯಕ್ತಿಯು ಸಾಧಿಸುವುದಾದರೂ ಏನು?. ಉತ್ತಮ ಆರೋಗ್ಯ? ಉತ್ತಮ ಕುಟುಂಬ? ಉತ್ತಮ ಸಂಗಾತಿ? ಸಂತೋಷವೇ? ವ್ಯಕ್ತಿಯು ಏನನ್ನು ಸಾಧಿಸುತ್ತಾನೆ?," ಎಂದು ಪ್ರಶ್ನಿಸಿದ ನೆಟ್ಟಿಗರು, "ಒಬ್ಬ ವ್ಯಕ್ತಿ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಿ ಯಶಸ್ವಿಯಾಗಿದ್ದರೆ, ತಮ್ಮ ಯಶಸ್ಸನ್ನು ಸಮರ್ಥನೆ ಮಾಡಬೇಕು ಎಂದು ಬಯಸುತ್ತೇವೆ," ಎಂದಿದ್ದಾರೆ.
ಇನ್ನು ಕೆಲವರು ಅಧಿಕ ಅವಧಿ ಕೆಲಸವನ್ನು ಸಂಪೂರ್ಣವಾಗಿ ತಿರಸ್ಕರಿಸದಿದ್ದರೂ, "ನಾವು ಮಾಡಿದ ಕೆಲಸಕ್ಕೆ ಸಂಸ್ಥೆಗಳು ಪ್ರತಿ ಗಂಟೆಗೆ ಸಂಬಳ ನೀಡಬೇಕು. ಭಾರತದಲ್ಲಿ ಯಾವ ಸಂಸ್ಥೆಯು ಕೂಡಾ ಹಾಗೆ ಮಾಡಲ್ಲ," ಎಂದು ಹೇಳಿಕೊಂಡಿದ್ದಾರೆ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

Silver Rates India: ಮತ್ತೆ ಗಗನಕ್ಕೇರಿದ ಬೆಳ್ಳಿ ದರ; ದಿಢೀರ್ 5,000 ರೂ. ಹೆಚ್ಚಳ

Karnataka SSLC Exam: ಇಂದಿನಿಂದ ಕರ್ನಾಟಕದಲ್ಲಿ SSLC ಪರೀಕ್ಷೆ; ವಿದ್ಯಾರ್ಥಿಗಳು ಈ ವಿಷಯ ದಿಳಿದೇ ಎಕ್ಸಾಂಗೆ ಹೋಗಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Gold Price Today: ಭಾರತದಲ್ಲಿ ಏರಿಕೆ ಕಂಡ ಚಿನ್ನದ ಬೆಲೆ! ದಿಢೀರ್ 12,000 ರೂ. ಹೆಚ್ಚಳ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ



Click it and Unblock the Notifications