ವರ್ಕ್ ಫ್ರಮ್ ಆಯ್ಕೆ ನೀಡಿದ ಬಳಿಕ ಹಲವಾರು ಉದ್ಯೋಗಿಗಳು ಮೂನ್‌ಲೈಟಿಂಗ್ ಮಾಡುತ್ತಿದ್ದಾರೆ. ಇಂತಹ ಮೂನ್‌ಲೈಟಿಂಗ್ ಮಾಡುವ ಯುವ ಉದ್ಯೋಗಿಗಳಿಗೆ ಶುಕ್ರವಾರ ಇನ್ಫೋಸಿಸ್ ಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಎಚ್ಚರಿಕೆ ನೀಡಿದ್ದಾರೆ. ವರ್ಕ್ ಫ್ರಮ್ ಹೋಮ್ ಮಾಡದಂತೆ ತಿಳಿಸಿದ್ದಾರೆ. ಏಷ್ಯಾ ಇಕಾನಮಿಕ್ ಸಭೆಯಲ್ಲಿ ಈ ಮಾಹಿತಿಯನ್ನು ನಾರಾಯಣ ಮೂರ್ತಿ ನೀಡಿದ್ದಾರೆ. ಯುವ ಉದ್ಯೋಗಿಗಳು ವರ್ಕ್ ಫ್ರಮ್ ಆಫೀಸ್ ಅನ್ನು ಮಾಡಬೇಕು ಎಂದು ತಿಳಿಸಿದ್ದಾರೆ.
ಯುವ ಉದ್ಯೋಗಿಗಳಿಗೆ ಮೆಸೇಜ್ ಅನ್ನು ನೀಡಿದ ಇನ್ಫೋಸಿಸ್ ಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ, "ಮೂನ್‌ಲೈಟಿಂಗ್ ಅಥವಾ ವರ್ಕ್ ಫ್ರಮ್ ಹೋಮ್‌ನಂತಹ ಸಂಸ್ಕೃತಿಗೆ ಯುವಕರು ಒಳಗಾಗಬಾರದು. ಉದ್ಯೋಗಿಗಳು ವರ್ಕ್ ಫ್ರಮ್ ಆಫೀಸ್ ಅನ್ನು ಮಾಡಬೇಕು," ಎಂದು ಹೇಳಿದ್ದಾರೆ. ಯುವ ಜನರು ನೀತಿಯನ್ನು ತಿಳಿದಿರಬೇಕು, ಸೋಮಾರಿತನ್ನು ಬಿಡಬೇಕು. ಅದನ್ನು ತಿಳಿದು ಕಾರ್ಯನಿರ್ವಹಣೆ ಮಾಡಬೇಕು ಎಂದು ಇನ್ಫೋಸಿಸ್ ಸ್ಥಾಪಕರು ಪ್ರೋತ್ಸಾಹಿಸಿದ್ದಾರೆ.

ಉದ್ಯೋಗಿಗಳಿಗೆ ಇನ್ಫೋಸಿಸ್ ಸ್ಥಾಪಕರು ಹೇಳುವುದೇನು?
"ನನ್ನ ಉತ್ಸಾಹಭರಿತ ಬಯಕೆ ಮತ್ತು ವಿನಮ್ರವಾದ ಬಯಕೆ ಏನೆಂದರೆ, ಯುವ ಉದ್ಯೋಗಿಗಳು ಮೂನ್‌ಲೈಟಿಂಗ್‌ನಂತಹ ಟ್ರಾಪ್‌ಗೆ ಒಳಗಾಗಬೇಡಿ. ಹಾಗೆಯೇ ವರ್ಕ್ ಫ್ರಮ್ ಹೋಮ್‌ನ ಟ್ರಾಪ್‌ಗೂ ಬೀಳಬೇಡಿ. ನಾನು ವಾರದಲ್ಲಿ ಮೂರು ಬಾರಿ ಮಾತ್ರ ಆಫೀಸ್‌ಗೆ ಬರುತ್ತೇನೆ, ಉಳಿದ ದಿನ ವರ್ಕ್ ಫ್ರಮ್ ಹೋಮ್ ಮಾಡುತ್ತೇನೆ ಎಂದು ಕೂಡಾ ಹೇಳಬೇಡಿ. ಇದು ನನ್ನ ವಿನಮ್ರ ಬಯಕೆಯಾಗಿದೆ," ಎಂದು ಇನ್ಫೋಸಿಸ್ ಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಹೇಳಿದ್ದಾರೆ.
ಇನ್ಫೋಸಿಸ್ ಆರಂಭದಿಂದಲೇ ಮೂನ್‌ಲೈಟಿಂಗ್ ಸಂಸ್ಕೃತಿಯನ್ನು ವಿರೋಧ ಮಾಡುತ್ತಾ ಬಂದಿದೆ. ಹಾಗೆಯೇ ಮೂನ್‌ಲೈಟಿಂಗ್‌ನಲ್ಲಿ ತೊಡಗಿರುವ ಹಲವಾರು ಉದ್ಯೋಗಿಗಳನ್ನು ಇನ್ಫೋಸಿಸ್ ಉದ್ಯೋಗದಿಂದ ವಜಾ ಮಾಡಿದೆ. ಇನ್ನು ಐಟಿ ಸಂಸ್ಥೆಯು ಇತ್ತೀಚೆಗೆ ಪ್ರತ್ಯೇಕವಾಗಿ ಅಧಿಕ ಹಣವನ್ನು ಪಡೆಯಲು ಬಯಸುವವರಿಗೆ ಹಲವಾರು ಕ್ರಮಗಳನ್ನು ಘೋಷಿಸಿದೆ. ಫ್ರೀಲ್ಯಾನ್ಸಿಂಗ್ ಮಾಡಲು ಬಯಸುವ ಇನ್ಫೋಸಿಸ್ ಉದ್ಯೋಗಿಗಳು ಸಂಸ್ಥೆಯಿಂದ ಪ್ರಯೋಜನ ಪಡೆಯಬೇಕಾಗುತ್ತದೆ.
ಈ ಈವೆಂಟ್‌ನಲ್ಲಿ ಮಾತನಾಡಿದ ನಾರಾಯಣ ಮೂರ್ತಿ, ಭಾರತದಲ್ಲಿ ಪ್ರಾಮಾಣಿಕತೆಯ ಸಂಸ್ಕೃತಿ ಮುಖ್ಯವಾಗಿದೆ. ಯಾವುದೇ ಅಡೆತಡೆಗಳಿಲ್ಲದೆ ವಹಿವಾಟು ನಡೆಸಬೇಕಾಗಿದೆ. "ನಾವು ಶೀಘ್ರ ನಿರ್ಧಾರ ಕೈಗೊಳ್ಳುವಂತಾಗಬೇಕು, ಶೀಘ್ರ ಜಾರಿ ಕೂಡಾ ಮಾಡುವಂತಾಗಬೇಕು, ಯಾವುದೇ ಫೇವರಿಟಿಸಮ್ ಇರಬಾರದು," ಎಂದಿದ್ದಾರೆ.
ಮೂನ್‌ಲೈಟಿಂಗ್ ಎಂದರೇನು?
ಒಂದು ಸಂಸ್ಥೆಯಲ್ಲಿ ಪೂರ್ಣಕಾಲಿಕ ಉದ್ಯೋಗ ಮಾಡಿಕೊಂಡಿರುವಾಗಲೇ, ಸಂಸ್ಥೆಗೆ ಯಾವುದೇ ಮಾಹಿತಿಯನ್ನು ನೀಡದೆಯೇ ಬೇರೆ ಸಂಸ್ಥೆಗಳಲ್ಲಿ ಉದ್ಯೋಗ ಮಾಡುವುದು, ಇನ್ನೊಂದು ಸಂಸ್ಥೆಯಲ್ಲಿ ಅರೆಕಾಲಿಕ ಅಥವಾ ಪೂರ್ಣಕಾಲಿಕವಾಗಿ ಕೆಲಸ ಮಾಡುವುದನ್ನು ಮೂನ್‌ಲೈಟಿಂಗ್ ಎಂದು ಹೇಳಲಾಗುತ್ತದೆ. ಹೆಚ್ಚಾಗಿ ವರ್ಕ್ ಫ್ರಮ್ ಹೋಮ್ ಮಾಡುವವರು ಎರಡು-ಮೂರು ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಣೆ ಮಾಡುವುದು ಕಂಡು ಬಂದಿದೆ. ಇದನ್ನು ಹಲವಾರು ಸಂಸ್ಥೆಗಳು ವಿರೋಧ ಮಾಡಿದೆ.


Click it and Unblock the Notifications