Infosys: ಮತ್ತೆ ಶಾಕ್..! 195 ಉದ್ಯೋಗಿಗಳು ವಜಾ.. 3 ತಿಂಗಳಲ್ಲಿ 800 ಜನರಿಗೆ ಗೇಟ್ ಪಾಸ್.. ಅಸಲಿ ಕಾರಣ ಬಹಿರಂಗ!

Infosys Mysuru Layoffs: ಶಾಕ್‌ ಮೇಲೆ ಶಾಕ್! ಸಾಫ್ಟ್‌ವೇರ್ ದೈತ್ಯ ಇನ್ಫೋಸಿಸ್ (Infosys) ಉದ್ಯೋಗಿಗಳನ್ನು ವಜಾಗೊಳಿಸುತ್ತಲೇ ಇದೆ. ಇದೀಗ ತರಬೇತಿ ಪಡೆಯುತ್ತಿದ್ದ 195 ಜನರನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ವರದಿಗಳು ಆಗುತ್ತಿವೆ. ಒಟ್ಟಾರೆ ಇದುವರೆಗೆ 800 ಜನರಿಗೆ ಗೇಟ್ ಪಾಸ್ ನೀಡಿದೆ.

ಹೌದು, ಇತ್ತೀಚೆಗೆ ಮೈಸೂರಿನಲ್ಲಿರುವ ಐಟಿ ದಿಗ್ಗಜ ಸಂಸ್ಥೆ ಇನ್ಫೋಸಿಸ್‌ನಲ್ಲಿ ತರಬೇತಿಗೆಂದು ಬಂದಿದ್ದ ಫ್ರೆಷರ್ಸ್ ಅಭ್ಯರ್ಥಿಗಳಲ್ಲಿ ಸುಮಾರು 700 ಮಂದಿಯನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಲಾಗಿತ್ತು ಇದರಿಂದಾಗಿ ಈ ವಿಚಾರವು ತೀವು ವಿವಾದ ಸ್ವರೂಪವನ್ನು ಸಹ ಪಡೆದುಕೊಂಡಿತ್ತು.ಇನ್ಪೋಸಿಸ್ ಅಮಾನತು ದೇಶಾದ್ಯಂತ ಚರ್ಚೆಯಾಗಿತ್ತು.ಈವರೆಗೆ ಕಂಪನಿಯು ಕೆಲಸದಿಂದ ತೆಗೆದು ಹಾಕಿದವ ಸಂಖ್ಯೆ 800ಕ್ಕೆ ಏರಿಕೆಯಾಗಿದೆ. ತರಬೇತಿಯಲ್ಲಿ ಉತ್ತೀರ್ಣರಾಗದ ಕಾರಣಕ್ಕೆ ಇವರನ್ನು ವಜಾಗೊಳಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

Infosys: ಮತ್ತೆ ಶಾಕ್..! 195 ಉದ್ಯೋಗಿಗಳು ವಜಾ

ಇನ್ಫೋಸಿಸ್ ಬಿಪಿಎಂ ತರಬೇತಿಗಾಗಿ ಅಪ್‌ಗ್ರಾಡ್‌ನೊಂದಿಗೆ ಮತ್ತು ಐಟಿ ತರಬೇತಿಗಾಗಿ ಎನ್‌ಐಐಟಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಇನ್ಫೋಸಿಸ್ ಕಂಪನಿಯು ಮೈಸೂರು ಕ್ಯಾಂಪಸ್‌ನಲ್ಲಿ 680 ಜನರಿಗೆ ತರಬೇತಿ ನೀಡುತ್ತಿತ್ತು. ಅದರಲ್ಲಿ 195 ಜನರನ್ನು ಆಂತರಿಕ ಪರೀಕ್ಷೆಯಲ್ಲಿ ಫೇಲ್ ಆದ ಕಾರಣ ಕೆಲಸದಿಂದ ತೆಗೆದುಹಾಕಿದೆ. ಮಾಧ್ಯಮ ವರದಿಗಳ ಪ್ರಕಾರ, ಕಳೆದ ಏಪ್ರಿಲ್ 29 ರಂದು ಕಂಪನಿಯ ಇಮೇಲ್ ಮೂಲಕ ಈ ವಿಷಯವನ್ನು ತರಬೇತಿದಾರರಿಗೆ ಮಾಹಿತಿಯನ್ನು ತಿಳಿಸಲಾಗಿದೆ. ಈ ಹಿಂದೆ ಫೆಬ್ರವರಿಯಲ್ಲಿ 300ಕ್ಕೂ ಹೆಚ್ಚು ಜನರನ್ನು, ಮಾರ್ಚ್‌ನಲ್ಲಿ 30-35 ಜನರನ್ನು, ಏಪ್ರಿಲ್ 18 ರಂದು 240 ಟ್ರೈನಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಈಗ ಮತ್ತೆ 195 ಜನರನ್ನು ತೆಗೆದುಹಾಕಲಾಗಿದೆ. ಇದರಿಂದಾಗಿ ಕೆಲಸ ಕಳೆದುಕೊಂಡ ಉದ್ಯೋಗಿಗಳ ಸಂಖ್ಯೆ 800ಕ್ಕೆ ಏರಿಕೆಯಾಗಿದೆ.

ಉ ಮೈಸೂರು Infosys ತರಬೇತಿ ಕೇಂದ್ರದಲ್ಲಿ ಕೆಲಸ ಕಳೆದುಕೊಂಡ ಸುಮಾರು 250 ಜನರು ಈಗ UpGrad ಮತ್ತು NIIT ಸಂಸ್ಥೆಗಳ ಸಹಾಯದಿಂದ ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ತರಬೇತಿ ಪಡೆಯುತ್ತಿದ್ದಾರೆ. ಈ ಪೈಕಿ, ಸುಮಾರು 150 ಜನರು ಬೇರೆ ಉದ್ಯೋಗಗಳಿಗೆ ನೋಂದಾಯಿಸಿ, ಹೊಸ ಅವಕಾಶಗಳತ್ತ ಮುಖ ಮಾಡಿದ್ದಾರೆ.

Infosys ಸಂಸ್ಥೆಯು BPM ವಿಭಾಗದ ತರಬೇತಿಗಾಗಿ UpGrad ಜೊತೆಗೆ ಮತ್ತು IT ತರಬೇತಿಗಾಗಿ NIIT ಜೊತೆಗೆ ವಿಶೇಷ ತರಬೇತಿ ಒಪ್ಪಂದಗಳನ್ನು ಮಾಡಿಕೊಂಡಿದೆ. ಕಂಪನಿಯಿಂದ ಹೊರಬಿದ್ದ ಯುವ ಉದ್ಯೋಗಿಗಳಿಗೆ ಮರುಪ್ರವೇಶದ ಸಾಧ್ಯತೆ ಕಲ್ಪಿಸುವ ಉದ್ದೇಶದಿಂದ ಈ ತರಬೇತಿಗಳನ್ನು ನೀಡಲಾಗುತ್ತಿದೆ.

ಈ ಕಾರ್ಯಕ್ರಮಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆ ಮತ್ತು ಉದ್ಯೋಗ ಯೋಗ್ಯತೆಯನ್ನು ಹೆಚ್ಚಿಸುವಂತೆ ರೂಪಗೊಂಡಿವೆ.

ಕಂಪನಿಯು ಈ ವರ್ಷ ಕೇವಲ 0% ರಿಂದ 3% ರಷ್ಟು ಆದಾಯದ ಬೆಳವಣಿಗೆಯನ್ನು ಮಾತ್ರ ನಿರೀಕ್ಷಿಸುತ್ತಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾದ ಕಾರಣಕ್ಕೆ ಟ್ರೈನಿಗಳನ್ನು ಕೆಲಸದಿಂದ ತೆಗೆಯಲಾಗಿದೆ ಎಂದು ಕಂಪನಿ ಹೇಳಿದೆ.

ಕಂಪನಿ ಕೊಟ್ಟ ಕಾರಣವೇನು..?

ಕೆಲಸದಿಂದ ವಜಾ ಮಾಡಲಾದ ಟ್ರೈನಿ ಉದ್ಯೋಗಿಗಳಿಗೆ ಕಳುಹಿಸಲಾದ ಇಮೇಲ್‌ನಲ್ಲಿ ಅವರು ಈ ರೀತಿಯಾಗಿ ಕಾರಣವನ್ನು ಕೊಟ್ಟಿದ್ಧಾರೆ. ನೀವು ಹೆಚ್ಚುವರಿ ತರಬೇತಿ ಸಮಯ, ಅನುಮಾನಗಳನ್ನು ಪರಿಹರಿಸುವ ಸೆಷನ್‌ಗಳು, ಹಲವಾರು ಮಾಕ್ ಅಸೆಸ್‌ಮೆಂಟ್‌ಗಳು ಮತ್ತು ಮೂರು ಪ್ರಯತ್ನಗಳ ಹೊರತಾಗಿಯೂ 'ಜೆನೆರಿಕ್ ಫೌಂಡೇಶನ್ ತರಬೇತಿ ಕಾರ್ಯಕ್ರಮ'ದಲ್ಲಿ ಅರ್ಹತಾ ಮಾನದಂಡಗಳನ್ನು ಪೂರೈಸಿಲ್ಲ. ಆದ್ದರಿಂದ, ನೀವು ಅಪ್ರೆಂಟಿಸ್‌ಶಿಪ್ ಕಾರ್ಯಕ್ರಮದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಕಾರಣವನ್ನು ಕೊಟ್ಟಿದ್ದಾರೆ.

ಫೆಬ್ರವರಿ 27 ರಂದು, ಕರ್ನಾಟಕ ಕಾರ್ಮಿಕ ಇಲಾಖೆಯು ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ, ತರಬೇತಿ ಪಡೆದವರ ನಿರ್ಗಮನಕ್ಕೆ ಸಂಬಂಧಿಸಿದ ಯಾವುದೇ ಕಾರ್ಮಿಕ ಕಾನೂನು ಉಲ್ಲಂಘನೆಗಳಿಂದ ಇನ್ಫೋಸಿಸ್ ಅನ್ನು ಮುಕ್ತಗೊಳಿಸಿತು.

ಇನ್ಫೋಸಿಸ್ ಇಲ್ಲಿಯವರೆಗೆ ಕಂಪನಿಯು ಅಸ್ತಿತ್ವದಲ್ಲಿರುವ ನೀತಿಯನ್ನು ಅನುಸರಿಸುತ್ತಿದೆ, ಅದರ ಪ್ರಕಾರ ಹೊಸಬರು ಮೌಲ್ಯಮಾಪನದಲ್ಲಿ ವಿಫಲವಾದರೆ ಸಂಸ್ಥೆಯಲ್ಲಿ ಮುಂದುವರಿಯಲು ಸಾಧ್ಯವಾಗುವುದಿಲ್ಲ ಎಂದು ಹೇಳುತ್ತಾ ಬಂದಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+