ಇನ್ಫೋಸಿಸ್ ನಿವ್ವಳ ಲಾಭವು ಸುಮಾರು ಸುಮಾರು ಶೇಕಡ 11ರಷ್ಟು ಏರಿಕೆಯಾಗಿದೆ. ಮಾರ್ಚ್‌ನಿಂದ ಜೂನ್‌ಗೆ ಅಂತ್ಯವಾದ ತ್ರೈಮಾಸಿಕದಲ್ಲಿ ನಿವ್ವಳ ಲಾಭವು ವರ್ಷದಿಂದ ವರ್ಷಕ್ಕೆ 5,945 ಕೋಟಿ ರೂಪಾಯಿಗೆ ಜಿಗಿತ ಕಂಡಿದೆ ಎಂದು ಇನ್ಫೋಸಿಸ್ ಗುರುವಾರ ವರದಿ ಮಾಡಿದೆ. ಇಕಾನಮಿಕ್ಸ್ ಟೈಮ್ಸ್ ಸಮೀಕ್ಷೆಯ ಪ್ರಕಾರ ಇನ್ಫೋಸಿಸ್ ನಿವ್ವಳ ಲಾಭವು 6,150 ಕೋಟಿ ರೂಪಾಯಿ ಆಗಿರಲಿದೆ ಎಂದು ಅಂದಾಜು ಮಾಡಲಾಗಿತ್ತು. ಆದರೆ ಅಂದಾಜಿಗಿಂತ ಕಡಿಮೆ ಲಾಭವಿದೆ.
ಇನ್ನು ಆದಾಯವು ಜೂನ್‌ನಲ್ಲಿ ಅಂತ್ಯವಾಗುವ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡ 10ರಷ್ಟು ಏರಿಕೆಯಾಗಿ, 37,933 ಕೋಟಿ ರೂಪಾಯಿಗೆ ತಲುಪಿದೆ. ಬೆಳವಣಿಗೆಯನ್ನು ನೋಡಿದ ಹಣಕಾಸು ವರ್ಷ 2024ರ ಆದಾಯದ ಬೆಳವಣಿಗೆಯ ಅಂದಾಜನ್ನು ತೀವ್ರವಾಗಿ ಕಡಿತಗೊಳಿಸಲಿದೆ. ಇನ್ಫೋಸಿಸ್‌ನ ಆದಾಯದಲ್ಲಿ ಶೇಕಡ 1-3.5ರಷ್ಟು ಬೆಳವಣಿಗೆ ಕಂಡಿದೆ. ಆದರೆ ಈ ಹಿಂದೆ ಶೇಕಡ 4-7ರಷ್ಟು ಬೆಳವಣಿಗೆ ಕಂಡಿತ್ತು.

ಭಾರತದ ಎರಡನೇ ಅತಿ ದೊಡ್ಡ ಸಾಫ್ಟ್‌ವೇರ್ ಸೇವೆಗಳನ್ನು ಒದಗಿಸುವ ಸಂಸ್ಥೆಯಾದ ಇನ್ಫೋಸಿಸ್‌ನಲ್ಲಿ ಶೇಕಡ 20-22ರಷ್ಟು ಮಾರ್ಜಿನ್ ಇದೆ. ಭಾರತದ ಐಟಿ ದೈತ್ಯ ಸಂಸ್ಥೆಯಾದ ಇನ್ಫೋಸಿಸ್ ತನ್ನ ಕ್ಲೈಂಟ್ ಜೊತೆಗೆ ಎಐ ಸಂಬಂಧಿತ ಡೀಲ್ ಒಂದನ್ನು ಮಾಡಿಕೊಂಡಿದೆ. ಇನ್ಫೋಸಿಸ್ 5 ವರ್ಷಗಳವರೆಗೆ ಒಪ್ಪಂದವನ್ನು ಮಾಡಿಕೊಂಡಿದ್ದು ಇದು 2 ಬಿಲಿಯನ್ ಡಾಲರ್‌ನ ಡೀಲ್ ಎಂದು ಅಂದಾಜು ಮಾಡಲಾಗಿದೆ ಎಂದು ಕಂಪನಿಯು ತಿಳಿಸಿದೆ. ತ್ರೈಮಾಸಿಕ ವರದಿ ಬಿಡುಗಡೆಗೂ ಮುನ್ನ ಈ ಡೀಲ್‌ನ ಘೋಷಣೆ ಮಾಡಲಾಗಿದೆ.
ಇನ್ಫೋಸಿಸ್ ಷೇರು ಮೌಲ್ಯ ಎಷ್ಟಿದೆ?
ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಇನ್ಫೋಸಿಸ್ ನಿವ್ವಳ ಲಾಭವು 5,360 ಕೋಟಿ ರೂಪಾಯಿ ಆಗಿತ್ತು. ಇನ್ನು ಇನ್ಫೋಸಿಸ್ ಲಾಭವು ಶೇಕಡ 2.9ರಷ್ಟು ಕಡಿಮೆಯಾಗಿದೆ. ಇನ್ಫೋಸಿಸ್ ಷೇರುಗಳು ಬಿಎಸ್‌ಇಯಲ್ಲಿ ಶೇ.1.73ರಷ್ಟು ಕುಸಿದು 1,448.85 ರೂಪಾಯಿಗೆ ಕೊನೆಗೊಂಡಿದೆ. ಕಂಪನಿಯ ಎಕ್ಸ್‌ಜೇಂಜ್ ಫೈಲಿಂಗ್ ಪ್ರಕಾರ ಸಂಸ್ಥೆಯ ಡೀಲ್ ಟಿಸಿವಿಯದ್ದಾಗಿದೆ. ಇದು ಸುಮಾರು 2.3 ಬಿಲಿಯನ್ ಡಾಲರ್‌ನ ಡೀಲ್ ಆಗಿದೆ. ರಿಟರ್ನ್ ಆನ್ ಈಕ್ವಿಟಿ (ಆರ್‌ಒಇ) 180 ಮೂಲಾಂಕ ಹೆಚ್ಚಳವಾಗಿದ್ದು ಶೇಕಡ 32.8 ರಿಂದ ಶೇಕಡ 17.3 ಕ್ಕೆ ಇಳಿಕೆ ಆಗಿದೆ.
"ತ್ರೈಮಾಸಿಕ 1ರಲ್ಲಿ ನಾವು ಶೇಕಡ 4.2ರಷ್ಟು ಬೆಳವಣಿಗೆ ಕಂಡಿದ್ದೇವೆ. ಭವಿಷ್ಯದ ಬೆಳವಣಿಗೆ ಸಹಾಯಕವಾದ 2.3 ಬಿಲಿಯನ್ ಡಾಲರ್ ಡೀಲ್ ನಮ್ಮದಾಗಿದೆ. ಈ ಯೋಜನೆಯಿಂದಾಗಿ ನಮ್ಮ ಎಐ ಸಾಮರ್ಥ್ಯವು ಉತ್ತಮವಾಗಿ ವಿಸ್ತರಣೆಯಾಗುತ್ತದೆ. ನಮ್ಮ ಎಐ ಕೊಡುಗೆಯು ಉತ್ತಮವಾಗಿದೆ," ಎಂದು ಇನ್ಫೋಸಿಸ್‌ನ ಸಿಇಒ ಮತ್ತು ಎಂಡಿಯಾದ ಸಲೀಲ್ ಪರೇಖ್ ತಿಳಿಸಿದ್ದಾರೆ.
"ಕೃತಕ ಬುದ್ಧಿಮತ್ತೆ (ಎಐ) ಮತ್ತು ಯಾತ್ರೀಕೃತ ಅಭಿವೃದ್ಧಿ, ಆಧುನೀಕರಣ ಮತ್ತು ನಿರ್ವಹಣಾ ಸೇವೆಗಳನ್ನು ಒದಗಿಸಲು ಇನ್ಫೋಸಿಸ್ ತನ್ನ ಅಸ್ತಿತ್ವದಲ್ಲಿರುವ ಗ್ರಾಹಕರೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. 5 ವರ್ಷಗಳ ಡೀಲ್ ಇದಾಗಿದ್ದು ಒಟ್ಟು ವೆಚ್ಚ ಅಂದಾಜು 2 ಬಿಲಿಯನ್ ಡಾಲರ್ ಎಂದು ಅಂದಾಜು ಮಾಡಲಾಗಿದೆ," ಎಂದು ಇನ್ಫೋಸಿಸ್ ಸಂಸ್ಥೆಯು ಸ್ಟಾಕ್ ಎಕ್ಸ್‌ಚೇಂಜ್‌ಗೆ ಮಾಹಿತಿ ನೀಡಿದೆ.
ಜುಲೈ 21ರ ತ್ರೈಮಾಸಿಕ ವರದಿ
ಇಂದು ಎಚ್‌ಯುಎಲ್, ಇನ್ಫೋಸಿಸ್, ಹಾವೆಲ್ಸ್ ಇಂಡಿಯಾ, ಯುನೈಟೆಕ್ ಸ್ಪಿರಿಟ್ಸ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಂಫಾಸಿಸ್, ಡಾಲ್ಮಿಯಾ ಭಾರತ್, ಪೆರ್‌ಸಿಸ್ಟೆಂಟ್ ಸಿಸ್ಟಮ್, ಕಾಫಾರ್ಜ್, ಐಸಿಐಸಿಐ ಸೆಕ್ಯೂರಿಟೀಸ್, 360 ಒನ್ ವ್ಯಾಮ್, ತನ್ಲಾ ಪ್ಲಾಟ್‌ಫಾರ್ಮ್, ಝೆನ್ಸಾರ್ ಟೆಕ್ನಾಲಜೀಸ್, ಸೌತ್ ಇಂಡಿಯನ್ ಬ್ಯಾಂಕ್ ಜುಲೈ 20ರಂದು ಮೊದಲ ತ್ರೈಮಾಸಿಕ ವರದಿಯನ್ನು ಪ್ರಕಟ ಮಾಡಲಾಗಿದೆ.
ಅಲ್ಟ್ರಾಟೆಕ್ ಸಿಮೆಂಟ್, ಜೆಎಸ್‌ಡಬ್ಲ್ಯೂ ಸ್ಟೀಲ್, ಎಚ್‌ಡಿಎಫ್‌ಸಿ ಲೈಫ್, ಹಿಂದೂಸ್ತಾನ್ ಜಿಂಕ್, ಅಶೋಕ್ ಲೇಲ್ಯಾಂಡ್, ಕ್ರೆಡಿಟ್ಆಕ್ಸೆಸ್ ಗ್ರಾಮೀಣ್, ಔಟ್ಲ್, ತೇಜಸ್ ನೆಟ್‌ವರ್ಕ್ಸ್, ರಾಮಕೃಷ್ಣ ಫೋರ್ಜಿಂಗ್ಸ್, ಗ್ಲೆನ್ಮಾರ್ಕ್ ಲೈಫ್ ಸೈನ್ಸಸ್, ರಾಜಸ್ಥಾನ ಗ್ಲೋಬಲ್ ವೈರ್, ದೊಡ್ಲ ಡೈರಿ ಮೊದಲ ತ್ರೈಮಾಸಿಕದ ವರದಿಯನ್ನು ಜುಲೈ 21 ಪ್ರಕಟಿಸಲಿದೆ.


Click it and Unblock the Notifications