ತನ್ನ ಪ್ರತಿಸ್ಪರ್ಧಿ ಟಿಸಿಎಸ್ ಬಳಿಕ ಮಾರುಕಟ್ಟೆಯಲ್ಲಿ ಅತೀ ದೊಡ್ಡ ಐಟಿ ಸಂಸ್ಥೆಯಾದ ಇನ್ಫೋಸಿಸ್ ಕೂಡಾ ತನ್ನ ಎರಡನೇ ತ್ರೈಮಾಸಿಕದ ವರದಿಯನ್ನು ಬಿಡುಗಡೆ ಮಾಡಿದೆ. ಇನ್ಫೋಸಿಸ್ ಹಣಕಾಸು ವರ್ಷ 2024ರ ಸೆಪ್ಟೆಂಬರ್ 2023 ತ್ರೈಮಾಸಿಕದ ತನ್ನ ಹಣಕಾಸು ವರದಿಯನ್ನು ನೀಡಿದೆ.
ತೆರಿಗೆ ಬಳಿಕ ಇನ್ಫೋಸಿಸ್ ನಿವ್ವಳ ಲಾಭವು 6,212 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಆದಾಯವು ತ್ರೈಮಾಸಿಕವಾಗಿ 38,994 ಕೋಟಿ ರೂಪಾಯಿಗೆ ತಲುಪಿದೆ. ಹಣಕಾಸು ವರ್ಷ 2024ರ ಎರಡನೇ ತ್ರೈಮಾಸಿಕದಲ್ಲಿ ಲಾಭವು ಸುಮಾರು ಶೇಕಡ 4.49 ರಷ್ಟು ಏರಿಕೆಯಾಗಿದೆ.

ಹಣಕಾಸು ವರ್ಷ 2024ರ ಮೊದಲ ತ್ರೈಮಾಸಿಕದಲ್ಲಿ ಲಾಭವು 5,945 ಕೋಟಿ ರೂಪಾಯಿ ಆಗಿದೆ. ಎರಡನೇ ತ್ರೈಮಾಸಿಕದಲ್ಲಿ ಮೊದಲ ತ್ರೈಮಾಸಿಕದಿಂದ ಲಾಭವು ಸುಮಾರು ಶೇಕಡ 4.49 ರಷ್ಟು ಏರಿಕೆಯಾಗಿದೆ. ಹಣಕಾಸು ವರ್ಷ 2023 ರಲ್ಲಿ ಎರಡನೇ ತ್ರೈಮಾಸಿಕಕ್ಕೆ ಹೋಲಿಕೆ ಮಾಡಿದಾಗ ಲಾಭವು ಶೇಕಡ 3.17 ರಷ್ಟು ಹೆಚ್ಚಾಗಿ 6,021 ಕೋಟಿ ರೂಪಾಯಿಗೆ ತಲುಪಿದೆ.
ಇನ್ಫೋಸಿಸ್ ನಿವ್ವಳ ಆದಾಯವು ನಿರೀಕ್ಷೆಗೆ ಅನುಗುಣವಾಗಿ ಏರಿಕೆಯಾಗಿದೆ. ಕಂಪನಿಯು 2022-23 ರ ಹಣಕಾಸು ವರ್ಷಕ್ಕೆ ಲಾಭಾಂಶವನ್ನು ಘೋಷಿಸಿದೆ. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಆದಾಯವು ಶೇಕಡ 2.3 ರಷ್ಟು ಬೆಳವಣಿಗೆ ಕಂಡಿದೆ. ವರ್ಷದಿಂದ ವರ್ಷಕ್ಕೆ ಶೇಕಡ 2.5 ರಷ್ಟು ಹೆಚ್ಚಳವಾಗಿದೆ. ಕಂಪನಿಯ ಕಾರ್ಯಾಚರಣೆಯ ಲಾಭವು ಶೇಕಡ 21.2 ರಷ್ಟು ಏರಿಕೆಯಾಗಿದೆ.
ಈ ತ್ರೈಮಾಸಿಕದಲ್ಲಿ ಇನ್ಫೋಸಿಸ್ 7.7 ಬಿಲಿಯನ್ ಡಾಲರ್‌ನ ದೊಡ್ಡ ಡೀಲ್ ಅನ್ನು ಗೆದ್ದುಕೊಂಡಿದೆ. ಎರಡನೇ ತ್ರೈಮಾಸಿಕ ವರದಿಗೂ ಮುನ್ನ ಬಿಎಸ್‌ಇಯಲ್ಲಿ 2.79 ಶೇಕಡ ಕುಸಿದು, ಇನ್ಫೋಸಿಸ್ ಷೇರುಗಳು 1452 ರೂಪಾಯಿಗೆ ವಹಿವಾಟು ಕೊನೆ ಮಾಡಿದೆ. ಇನ್ಪೋಸಿಸ್ ಷೇರುಗಳು ಶುಕ್ರವಾರ ಎರಡನೇ ತ್ರೈಮಾಸಿಕದ ವರದಿಯ ಮೇಲೆ ಪ್ರಭಾವಿತವಾಗುವ ನಿರೀಕ್ಷೆಯಿದೆ.
ಇನ್ಫೋಸಿಸ್ ಮಾರುಕಟ್ಟೆ ಮೌಲ್ಯವು ಅಕ್ಟೋಬರ್ 12, 2023 ರ ಹೊತ್ತಿಗೆ 6.02 ಲಕ್ಷ ಕೋಟಿ ರೂಪಾಯಿಗಿಂತ ಅಧಿಕವಾಗಿದ್ದು, ಟಾಟಾ ಗ್ರೂಪ್ ಬೆಂಬಲಿತ ಪ್ರಮುಖ ಕಂಪನಿ ಟಿಸಿಎಸ್ ನಂತರ ಎರಡನೇ ಅತಿದೊಡ್ಡ ಭಾರತೀಯ ಟೆಕ್ ಸಂಸ್ಥೆಯಾಗಿದೆ.
ಮೊದಲ ತ್ರೈಮಾಸಿಕದಲ್ಲಿ ಇನ್ಫೋಸಿಸ್ ನಿವ್ವಳ ಲಾಭ ಶೇ.11ರಷ್ಟು ಏರಿಕೆ
ಇನ್ಫೋಸಿಸ್ ನಿವ್ವಳ ಲಾಭವು ಮೊದಲ ತ್ರೈಮಾಸಿಕದಲ್ಲಿ ಸುಮಾರು ಶೇಕಡ 11ರಷ್ಟು ಏರಿಕೆಯಾಗಿದೆ. ಮಾರ್ಚ್‌ನಿಂದ ಜೂನ್‌ಗೆ ಅಂತ್ಯವಾದ ತ್ರೈಮಾಸಿಕದಲ್ಲಿ ನಿವ್ವಳ ಲಾಭವು ವರ್ಷದಿಂದ ವರ್ಷಕ್ಕೆ 5,945 ಕೋಟಿ ರೂಪಾಯಿಗೆ ಜಿಗಿತ ಕಂಡಿದೆ ಎಂದು ಇನ್ಫೋಸಿಸ್ ಗುರುವಾರ ವರದಿ ಮಾಡಿದೆ. ಇಕಾನಮಿಕ್ಸ್ ಟೈಮ್ಸ್ ಸಮೀಕ್ಷೆಯ ಪ್ರಕಾರ ಇನ್ಫೋಸಿಸ್ ನಿವ್ವಳ ಲಾಭವು 6,150 ಕೋಟಿ ರೂಪಾಯಿ ಆಗಿರಲಿದೆ ಎಂದು ಅಂದಾಜು ಮಾಡಲಾಗಿತ್ತು. ಆದರೆ ಅಂದಾಜಿಗಿಂತ ಕಡಿಮೆ ಲಾಭವಿದೆ.
ಇನ್ನು ಆದಾಯವು ಜೂನ್‌ನಲ್ಲಿ ಅಂತ್ಯವಾಗುವ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡ 10ರಷ್ಟು ಏರಿಕೆಯಾಗಿ, 37,933 ಕೋಟಿ ರೂಪಾಯಿಗೆ ತಲುಪಿದೆ. ಬೆಳವಣಿಗೆಯನ್ನು ನೋಡಿದ ಹಣಕಾಸು ವರ್ಷ 2024ರ ಆದಾಯದ ಬೆಳವಣಿಗೆಯ ಅಂದಾಜನ್ನು ತೀವ್ರವಾಗಿ ಕಡಿತಗೊಳಿಸಲಿದೆ. ಇನ್ಫೋಸಿಸ್‌ನ ಆದಾಯದಲ್ಲಿ ಶೇಕಡ 1-3.5ರಷ್ಟು ಬೆಳವಣಿಗೆ ಕಂಡಿದೆ. ಆದರೆ ಈ ಹಿಂದೆ ಶೇಕಡ 4-7ರಷ್ಟು ಬೆಳವಣಿಗೆ ಕಂಡಿತ್ತು.


Click it and Unblock the Notifications