Infosys Q3 Results: ನಿವ್ವಳ ಲಾಭ ಅಂದಾಜಿಗಿಂತ ಅಧಿಕ ಏರಿಕೆ!

ಇನ್ಫೋಸಿಸ್ ಜನವರಿ 12ರಂದು ತನ್ನ ಮೂರನೇ ತ್ರೈಮಾಸಿಕದ ನಿವ್ವಳ ಆದಾಯವನ್ನು ಪ್ರಕಟ ಮಾಡಿದೆ. ಡಿಸೆಂಬರ್‌ನಲ್ಲಿ ಅಂತ್ಯವಾಗುವ ಮೂರನೇ ತ್ರೈಮಾಸಿಕದಲ್ಲಿ ನಿವ್ವಳ ಆದಾಯವು ಶೇಕಡ 13.4ರಷ್ಟು ಏರಿಕೆಯಾಗಿ 6,586 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ದೇಶದ ಎರಡನೇ ಅತೀ ದೊಡ್ಡ ಐಟಿ ಸಂಸ್ಥೆಯ ನಿವ್ವಳ ಆದಾಯವು 5,809 ಕೋಟಿ ರೂಪಾಯಿ ಆಗಿತ್ತು.

ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಸಂಸ್ಥೆಯ ಆದಾಯವು ಶೇಕಡ 20.2ರಷ್ಟು ಏರಿಕೆಯಾಗಿ, 38,318 ಕೋಟಿ ರೂಪಾಯಿಗೆ ತಲುಪಿದೆ. ಇನ್ನು ಕಳೆದ ವರ್ಷ ಮೂರನೇ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಆದಾಯವು 31,867 ಕೋಟಿ ರೂಪಾಯಿ ಆಗಿತ್ತು. Q3 ಲಾಭವು ಸಂಸ್ಥೆಯು ಅಂದಾಜು ಮಾಡಿದ ಲಾಭಕ್ಕಿಂತ ಅಧಿಕವಾಗಿದೆ.

ಬ್ರೋಕರೇಜ್ ಸಂಸ್ಥೆಯು ಇನ್ಫೋಸಿಸ್ ಸಂಸ್ಥೆಯ ಆದಾಯವು ವರ್ಷದಿಂದ ವರ್ಷಕ್ಕೆ ಶೇಕಡ 18ರಷ್ಟು ಏರಿಕೆಯಾಗಿ 37,613 ಕೋಟಿ ರೂಪಾಯಿಗೆ ತಲುಪುವ ಅಂದಾಜು ಮಾಡಿತ್ತು. ತೆರಿಗೆಯ ಬಳಿಕ ನಿವ್ವಳ ಆದಾಯವು ಶೇಕಡ 10.5ರಷ್ಟು ಏರಿಕೆಯಾಗಿ 6,418 ಕೋಟಿ ರೂಪಾಯಿಗೆ ತಲುಪುವ ಅಂದಾಜು ಮಾಡಲಾಗಿತ್ತು. ಆದರೆ ಅಂದಾಜಿಗಿಂತ ಅಧಿಕ ನಿವ್ವಳ ಆದಾಯ ಲಭ್ಯವಾಗಿದೆ.

ಇನ್ಫೋಸಿಸ್ Q3 ಫಲಿತಾಂಶ: ನಿವ್ವಳ ಲಾಭ ಅಂದಾಜಿಗಿಂತ ಅಧಿಕ ಏರಿಕೆ!

ಐಟಿ ಸಂಸ್ಥೆಯ ವರ್ಷದಿಂದ ವರ್ಷದ ಆದಾಯವು ಡಬಲ್ ಡಿಜಿಟ್ ಆಗಿದೆ. ಕಳೆದ ಎಂಟು ತ್ರೈಮಾಸಿಕದಲ್ಲಿ 3.3 ಬಿಲಿಯನ್ ಡಾಲರ್ ಸೇರ್ಪಡೆಯಾಗಿದೆ. ಆದರೆ ಸಂಸ್ಥೆಯ ಆಪರೇಟಿಂಗ್ ಲಾಭವು 21.5 ಶೇಕಡ ಇಳಿದಿದೆ. ಕಳೆದ ವರ್ಷ ಶೇಕಡ 23.5ರಷ್ಟು ಇಳಿಕೆ ಕಂಡಿತ್ತು.

ಎರಡನೇ ತ್ರೈಮಾಸಿಕದ ವರದಿ ಹೀಗಿದೆ

ಬೆಂಗಳೂರು ಮೂಲಕ ಇನ್ಫೋಸಿಸ್ ಟೆಕ್ನಾಲಜೀಸ್ ಸಂಸ್ಥೆಯು ತನ್ನ ಎರಡನೇ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡ 11.1ರಷ್ಟು ಅಧಿಕ ನಿವ್ವಳ ಲಾಭ ಪಡೆದಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಂತ್ಯವಾಗುವ ಎರಡನೇ ತ್ರೈಮಾಸಿಕದಲ್ಲಿ 5,421 ಕೋಟಿ ರೂಪಾಯಿ ನಿವ್ವಳ ಲಾಭ ಬಂದಿದ್ದರೆ, ಈ ವರ್ಷ ಎರಡನೇ ತ್ರೈಮಾಸಿಕದಲ್ಲಿ 6,021 ಕೋಟಿ ರೂಪಾಯಿ ನಿವ್ವಳ ಲಾಭ ಬಂದಿದೆ.

2021ರ ಎರಡನೇ ತ್ರೈಮಾಸಿಕದಲ್ಲಿ ಸಂಸ್ಥೆಯು ಆದಾಯ 29,602 ಕೋಟಿ ರೂಪಾಯಿ ಆಗಿತ್ತು. ಆದರೆ ಈ ವರ್ಷ ಎರಡನೇ ತ್ರೈಮಾಸಿಕದಲ್ಲಿ ಸಂಸ್ಥೆಯ ಆದಾಯ ಶೇಕಡ 23.4ರಷ್ಟು ಹೆಚ್ಚಳವಾಗಿ 36,538 ಕೋಟಿ ರೂಪಾಯಿಗೆ ತಲುಪಿದೆ. ಬಿಎಸ್‌ಇ ಫೈಲಿಂಗ್ ಪ್ರಕಾರ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹೋಲಿಕೆ ಮಾಡಿದಾಗ, ಜುಲೈ-ಸೆಪ್ಟೆಂಬರ್ Q2ನಲ್ಲಿ ಸಂಸ್ಥೆಯ ಆದಾಯವು ಶೇಕಡ 6ರಷ್ಟು ಏರಿಕೆಯಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+