ನಾಲ್ಕನೇ ತ್ರೈಮಾಸಿಕದ ನಿವ್ವಳ ಆದಾಯವನ್ನು ಇನ್ಫೋಸಿಸ್ ಘೋಷಣೆ ಮಾಡಿದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಇನ್ಫೋಸಿಸ್ ಭಾರೀ ನಷ್ಟವನ್ನು ಕಂಡಿದೆ. ಇನ್ಫೋಸಿಸ್ ಷೇರು ಕುಸಿತವಾದ ಬಳಿಕ ಪ್ರಮುಖ ಷೇರುದಾರರು ಆದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮತ್ತು ಮೂರ್ತಿ ಕುಟುಂಬವು ಭಾರೀ ನಷ್ಟವನ್ನು ಕಂಡಿದೆ. ಸೋಮವಾರ ಷೇರು ಮಾರುಕಟ್ಟೆಯಲ್ಲಿ ಕೆಲವೇ ಸೆಕೆಂಡುಗಳಲ್ಲಿ ಎಲ್‌ಐಸಿ ಹಾಗೂ ಮೂರ್ತಿ ಕುಟುಂಬ ಭಾರೀ ಪ್ರಮಾಣದ ಮೊತ್ತವನ್ನು ಕಳೆದುಕೊಂಡಿದೆ.
ಐಟಿ ಸಂಸ್ಥೆ ಇನ್ಫೋಸಿಸ್‌ನಲ್ಲಿ ಒಟ್ಟು 28,13,85,267 ಷೇರುಗಳನ್ನು ಅಥವಾ ಶೇಕಡ 7.71ರಷ್ಟು ಷೇರುಗಳನ್ನು ಎಲ್‌ಐಸಿ ಹೊಂದಿದೆ. ಗುರುವಾರ ವಹಿವಾಟಿನ ಅಂತ್ಯದಲ್ಲಿ ಎಲ್‌ಐಸಿಯು ಇನ್ಫೋಸಿಸ್‌ನ 39,073 ಕೋಟಿ ರೂಪಾಯಿ ಮೌಲ್ಯದ ಷೇರನ್ನು ಹೊಂದಿದ್ದರು. ಸೋಮವಾರ ಆರಂಭಿಕ ವಹಿವಾಟಿನಲ್ಲಿ ಇನ್ಪೋಸಿಸ್ ಷೇರು ದಿಡೀರನ್ನೇ ಶೇಕಡ 10ರಷ್ಟು ಕುಸಿತ ಕಂಡಿದೆ. ಒಟ್ಟು ಮೌಲ್ಯವು ಸೆಕೆಂಡುಗಳಲ್ಲಿ 3,907 ಕೋಟಿ ರೂಪಾಯಿ ಇಳಿಕೆ ಕಂಡು, 35,166 ಕೋಟಿ ರೂಪಾಯಿಗೆ ತಲುಪಿದೆ.

ಮೂರ್ತಿ ಕುಟುಂಬದಲ್ಲಿ ಎಷ್ಟು ಷೇರು ಇಳಿಕೆ, ಎಷ್ಟು ನಷ್ಟ?
ಮೂರ್ತಿ ಕುಟುಂಬಯ ವಿಚಾರಕ್ಕೆ ನಾವು ಬಂದಾಗ ರೋಹನ್ ಮೂರ್ತಿ ಎಲ್‌ಐಸಿ ಸಂಸ್ಥೆಯಲ್ಲಿ 8,444.47 ಕೋಟಿ ರೂಪಾಯಿ ಮೌಲ್ಯದ ಷೇರನ್ನು ಹೊಂದಿದ್ದಾರೆ. ಆದರೆ ಈ ಷೇರು ಮೌಲ್ಯ 844 ಕೋಟಿ ರೂಪಾಯಿ ಕುಸಿತವಾಗಿ, 7,600 ಕೋಟಿ ರೂಪಾಯಿಗೆ ತಲುಪಿದೆ. ಅಕ್ಷತ ಮೂರ್ತಿಯು ಈ ಬೆಂಗಳೂರು ಮೂಲದ ಸಂಸ್ಥೆಯಲ್ಲಿ ಶೇಕಡ 1.07ರಷ್ಟು ಷೇರನ್ನು ಹೊಂದಿದ್ದು, ಗುರುವಾರ ವೇಳೆಗೆ ಷೇರು ಮೌಲ್ಯ 5,409.58 ಕೋಟಿ ರೂಪಾಯಿ ಆಗಿದೆ. ರೋಹನ್ ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿಯ ಪುತ್ರ, ಅಕ್ಷತಾ ಪುತ್ರಿಯಾಗಿದ್ದಾರೆ.
ನಾರಾಯಣ ಮೂರ್ತಿಯ ಪತ್ನಿ ಸುಧಾ ಎನ್ ಮೂರ್ತಿ ಇನ್ಫೋಸಿಸ್‌ನಲ್ಲಿ ಗುರುವಾರದ ವೇಳೆಗೆ ಒಟ್ಟಾಗಿ ಶೇಕಡ 0.95ರಷ್ಟು ಷೇರನ್ನು ಅಥವಾ 4,797.69 ಕೋಟಿ ರೂಪಾಯಿ ಹೊಂದಿದ್ದಾರೆ. ಈ ಮೌಲ್ಯವು ಸೋಮವಾರದ ವೇಳೆಗೆ 480 ಕೋಟಿ ರೂಪಾಯಿ ಕುಸಿದು 4317.96 ಕೋಟಿ ರೂಪಾಯಿಗೆ ತಲುಪಿದೆ. ಇನ್ನು ನಾರಾಯಣ ಮೂರ್ತಿ ಇನ್ಫೋಸಿಸ್‌ನಲ್ಲಿ ಒಟ್ಟಾಗಿ ಶೇಕಡ 0.46ರಷ್ಟು ಇದ್ದು, ಗುರುವಾರದ ವೇಳೆಗೆ 2,080 ಕೋಟಿ ರೂಪಾಯಿ ಆಗಿದೆ. ಆದರೆ ಸೋಮವಾರ 231.12 ಕೋಟಿ ರೂಪಾಯಿ ಇಳಿಕೆ ಕಂಡು, 2,311.41 ಕೋಟಿ ರೂಪಾಯಿಗೆ ತಲುಪಿದೆ.
ಇನ್ಫೋಸಿಸ್ ಷೇರು ಸುಮಾರು 1,249.75ರಷ್ಟು ಇಳಿಕೆಯಾಗಿದೆ. ಗುರುವಾರ ಷೇರು ಮಾರುಕಟ್ಟೆಯಲ್ಲಿ ಇನ್ಫೋಸಿಸ್ ಷೇರು ಮೌಲ್ಯ 5,76,069 ಕೋಟಿ ರೂಪಾಯಿ ಆಗಿತ್ತು, ಆದರೆ ಸೋಮವಾರದ ವೇಳೆಗೆ 5,18,466 ಕೋಟಿ ರೂಪಾಯಿಗೆ ಇಳಿಕೆಯಾಗಿದೆ. ಇನ್ನು ಎಸ್‌ಬಿಐ ಮ್ಯೂಚುವಲ್ ಫಂಡ್ ಇನ್ಫೋಸಿಸ್ ಹೂಡಿಕೆ ಮೂಲಕ 2,239.55 ಕೋಟಿ ರೂಪಾಯಿ ನಷ್ಟವನ್ನು ಹೊಂದಿದೆ. ಗುರುವಾರ ಈ ಸಂಸ್ಥೆಯು ಇನ್ಫೋಸಿಸ್‌ನ 22,397 ಕೋಟಿ ರೂಪಾಯಿ ಷೇರನ್ನು ಹೊಂದಿತ್ತು. ಆದರೆ ಸೋಮವಾರ ಈ ಷೇರು ಮೌಲ್ಯ 20,157 ಕೋಟಿ ರೂಪಾಯಿಗೆ ಕುಸಿತವಾಗಿದೆ.
ಐಸಿಐಸಿಐ ಪ್ರೊಡೆನ್ಶೀಯರ್ ಎಂಎಫ್ 1,226.79 ಕೋಟಿ ನಷ್ಟವನ್ನು ಕಂಡಿದೆ. ಇದು ಇನ್ಫೋಸಿಸ್‌ನ 11,041 ಕೋಟಿ ರೂಪಾಯಿ ಷೇರನ್ನು ಹೊಂದಿದ್ದಾರೆ. ಸುಧಾ ಗೋಪಾಲಕೃಷ್ಣನ್ ಇನ್ಫೋಸಿಸ್‌ನಲ್ಲಿ 9,53,57,000 ಷೇರು ಅಥವಾ ಶೇಕಡ 2.61ರಷ್ಟು ಷೇರನ್ನು ಹೊಂದಿದ್ದು, 1,324 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಪ್ರಸ್ತುತ 11,917 ಕೋಟಿ ರೂಪಾಯಿ ಮೌಲ್ಯದ ಇನ್ಫೋಸಿಸ್ ಷೇರನ್ನು ಹೊಂದಿದ್ದಾರೆ.


Click it and Unblock the Notifications