ನವದೆಹಲಿ, ಫೆಬ್ರವರಿ 2: ಕೇಂದ್ರ ಸರ್ಕಾರವು 2022-23ನೇ ಸಾಲಿನಲ್ಲಿ ಹಿಂದಿನ ವರ್ಷಕ್ಕಿಂತ ಶೇ.35ರಷ್ಟು ಬಂಡವಾಳ ವೆಚ್ಚದ ಹಂಚಿಕೆಯನ್ನು ಹೆಚ್ಚಿಸಿದೆ. ಇದರಿಂದ 7.5 ಲಕ್ಷ ಕೋಟಿ ರೂಪಾಯಿ ಹೆಚ್ಚಿದ ಹಿನ್ನೆಲೆ ಮೂಲಸೌಕರ್ಯ ಕಂಪನಿಗಳ ಷೇರುಗಳನ್ನು ರೀ-ರೇಟಿಂಗ್ ಮಾಡಲಾಗಿದೆ.
ಬಂಡವಾಳದ ಸರಕುಗಳು, ನಿರ್ಮಾಣ, ಕಟ್ಟಡ ಸಾಮಗ್ರಿಗಳು ಮತ್ತು ವಾಣಿಜ್ಯ ವಾಹನಗಳ ವಿಭಾಗದಲ್ಲಿ ಹೆಚ್ಚಿನ ಖರ್ಚು ಕಂಪನಿಗಳಿಗೆ ಅದೃಷ್ಟವನ್ನು ಪುನರುಜ್ಜೀವನಗೊಳಿಸಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ. L&T, ಅಲ್ಟ್ರಾಟೆಕ್ ಸಿಮೆಂಟ್, JSW ಸ್ಟೀಲ್, ಸೀಮೆನ್ಸ್ ಮತ್ತು PNC ಇನ್ಫ್ರಾಟೆಕ್ ಅವರ ಉನ್ನತ ಕಂಪನಿಗಳಾಗಿವೆ. ಒಟ್ಟಾರೆ ಬಂಡವಾಳ ವೆಚ್ಚದಲ್ಲಿ ಶೇ.15-20 ಹೆಚ್ಚಳವನ್ನು ಮಾರುಕಟ್ಟೆಗಳು ನಿರೀಕ್ಷಿಸಿದ್ದವು.
"ಕೇಂದ್ರ ಬಜೆಟ್ ಪೂರೈಕೆ-ಬದಿಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸ್ಪಷ್ಟವಾದ ಲಕ್ಷ್ಯ ವಹಿಸಿದೆ. ಇದರ ಜೊತೆ ಆರ್ಥಿಕತೆಯಲ್ಲಿ ಹೊಸ ಹೂಡಿಕೆಯನ್ನು ಬೆಂಬಲಿಸಲು ಬಂಡವಾಳ ವೆಚ್ಚಗಳ ಹಂಚಿಕೆಯನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದೆ. ಅನುದಾನ ಸೇರಿದಂತೆ ಎಫ್‌ವೈ 23ರಲ್ಲಿ ಒಟ್ಟು ಕ್ಯಾಪೆಕ್ಸ್ ಮೊತ್ತ 10.68 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾಗುತ್ತಿದೆ," ಎಂದು ಶೇರ್‌ಖಾನ್‌ನ ಬಂಡವಾಳ ಮಾರುಕಟ್ಟೆ ತಂತ್ರದ ಮುಖ್ಯಸ್ಥ ಗೌರವ್ ದುವಾ ಹೇಳಿದ್ದಾರೆ.

ಯಾರಿಗೆ ಹೆಚ್ಚು ಲಾಭ?:
"ಇಂಜಿನಿಯರಿಂಗ್ ಮತ್ತು ನಿರ್ಮಾಣ ಸಂಸ್ಥೆಗಳು ಮತ್ತು ಎಲ್ & ಟಿ, ಪಿಎನ್‌ಸಿ ಇನ್ಫ್ರಾ, ಜೆಎಸ್‌ಡಬ್ಲ್ಯೂ ಸ್ಟೀಲ್, ಅಲ್ಟ್ರಾಟೆಕ್, ದಾಲ್ಮಿಯಾ ಭಾರತ್ ಮುಂತಾದ ಕಟ್ಟಡ ಸಾಮಗ್ರಿ ಕಂಪನಿಗಳಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ," ಎಂದು ಶೇರ್‌ಖಾನ್‌ನ ಬಂಡವಾಳ ಮಾರುಕಟ್ಟೆ ತಂತ್ರದ ಮುಖ್ಯಸ್ಥ ಗೌರವ್ ದುವಾ ಹೇಳಿದ್ದಾರೆ. ಈ ಹಿನ್ನೆಲೆ L&T, IRB ಇನ್‌ಫ್ರಾಸ್ಟ್ರಕ್ಚರ್, ಸೀಮೆನ್ಸ್, HCC, ಅಲ್ಟ್ರಾಟೆಕ್, ಶ್ರೀ ಸಿಮೆಂಟ್, ಅಂಬುಜಾ ಸಿಮೆಂಟ್ಸ್, ದಾಲ್ಮಿಯಾ ಭಾರತ್, JSW ಸ್ಟೀಲ್, SAIL ಮತ್ತು ಜಿಂದಾಲ್ ಸ್ಟೀಲ್ ಮತ್ತು ಪವರ್‌ನಂತಹ ಷೇರುಗಳ ಬೆಲೆಯಲ್ಲಿ ಶೇ. 4 ರಿಂದ 7ರಷ್ಟು ಏರಿಕೆ ಕಂಡಿದೆ.
ಕೇಂದ್ರ ಬಜೆಟ್ 2022-23ರಲ್ಲಿ ಹಂಚಿಕೆ:
ಎಕ್ಸ್‌ಪ್ರೆಸ್‌ವೇಗಳು, ರಾಷ್ಟ್ರೀಯ ಹೆದ್ದಾರಿಯನ್ನು 25,000 ಕಿಮೀ ವಿಸ್ತರಿಸುವುದು, ಮಲ್ಟಿ ಮಾದರಿ ಪಾರ್ಕ್‌ಗಳಲ್ಲಿ ಹೊಸ ಯೋಜನೆಗಳು, ಮೂರು ವರ್ಷಗಳಲ್ಲಿ 100 ಕಾರ್ಗೋ ಟರ್ಮಿನಲ್‌ಗಳು, ಹೊಸ ರೈಲುಗಳು ಮತ್ತು ರೋಪ್‌ವೇಗಳ ಮಾಸ್ಟರ್ ಪ್ಲಾನ್ ಅನ್ನು ಹಣಕಾಸು ಸಚಿವರು ಘೋಷಿಸಿದರು. ರಸ್ತೆಗಳ ಹಂಚಿಕೆಯು ಶೇ.50ಕ್ಕಿಂತ ಹೆಚ್ಚಾಗಿದೆ. ಬಜೆಟ್ ಪ್ರಾಥಮಿಕವಾಗಿ ಹೆಚ್ಚಿದ ಹಂಚಿಕೆಯೊಂದಿಗೆ ಮೂಲಸೌಕರ್ಯ ವೆಚ್ಚದ ಅಗತ್ಯತೆಗಳನ್ನು ಪರಿಹರಿಸಿದೆ. ಈಗ ಗತಿ ಶಕ್ತಿ ಯೋಜನೆಯ ಮೂಲಕ ಹೊಸ ಮೂಲಸೌಕರ್ಯ ಯೋಜನೆಗಳ ಕಡೆಗೆ ಗಮನ ಹರಿಸಲಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಉತ್ಪಾದನೆ, ವ್ಯಾಪಾರ ಬೆಳವಣಿಗೆಗೆ ಪೂರಕ:
"ಹಣಕಾಸಿನ ಕ್ಯಾಪೆಕ್ಸ್‌ನಲ್ಲಿ ಶೇೇ.35.4ರಷ್ಟು ಬೆಳವಣಿಗೆಯು ಮೂಲಸೌಕರ್ಯ, ಬಂಡವಾಳ ಸರಕುಗಳು, ಕೈಗಾರಿಕಾ, ಲೋಹಗಳು ಮತ್ತು ಉತ್ಪಾದನೆಯಂತಹ ಕ್ಷೇತ್ರಗಳಿಗೆ ವ್ಯಾಪಾರ ಬೆಳವಣಿಗೆಗೆ ಪೂರವಾಗಿದೆ," ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ. "ಟಾಟಾ ಸ್ಟೀಲ್, ಎಲ್ & ಟಿ, ಸೀಮೆನ್ಸ್, ಹಿಂಡಾಲ್ಕೊ, ಕೆಎನ್‌ಆರ್, ಪಿಎನ್‌ಸಿ ಇನ್‌ಫ್ರಾ, ಭಾರತ್ ಫೋರ್ಜ್‌ನಂತಹ ಸ್ಟಾಕ್‌ಗಳು ಮೂಲಸೌಕರ್ಯಗಳ ವೆಚ್ಚದ ಕೆಲವು ದೊಡ್ಡ ಫಲಾನುಭವಿಗಳಾಗಿವೆ."
"ಮೂಲಸೌಕರ್ಯಗಳ ಮೇಲಿನ ಹೆಚ್ಚಿನ ವೆಚ್ಚವು ನಿರ್ಮಾಣ, ಬಂಡವಾಳ ಸರಕುಗಳು, ಲೋಹಗಳು, ಸಿಮೆಂಟ್ ಮತ್ತು ಪೈಪ್ ತಯಾರಕರಾದ ಎಬಿಬಿ, ಸೀಮೆನ್ಸ್, ಎಲ್ & ಟಿ, ಎಸಿಸಿ, ಅಲ್ಟ್ರಾಟೆಕ್ ಮುಂತಾದವುಗಳಿಗೆ ಉತ್ತಮವಾಗಿದೆ," ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸಂಶೋಧನಾ ಮುಖ್ಯಸ್ಥ ದೀಪಕ್ ಜಸಾನಿ ಹೇಳಿದ್ದಾರೆ.
ಮನೆ ನಿರ್ಮಾಣ, ಪ್ರತಿ ಮನೆಗೆ ನಳದ ವ್ಯವಸ್ಥೆ:
ಕೇಂದ್ರ ಸರ್ಕಾರವು ವಸತಿ ಯೋಜನೆಯಡಿಯಲ್ಲಿ ಕೈಗೆಟುಕುವ ದರದಲ್ಲಿ ಮನೆ ನಿರ್ಮಾಣಕ್ಕಾಗಿ ವಸತಿ ಯೋಜನೆಗಳಿಗೆ 48,000 ಕೋಟಿ ರೂಪಾಯಿ ನಿಗದಿಪಡಿಸಿದೆ. ಇದರಿಂದ ಸಿಮೆಂಟ್ ಕಂಪನಿಗಳ ಭವಿಷ್ಯ ಉಜ್ವಲವಾಗಲಿದೆ. ಅದೇ ರೀತಿ 38 ದಶಲಕ್ಷ ಕುಟುಂಬಗಳಿಗೆ ನಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಲು 60,000 ಕೋಟಿ ರೂಪಾಯಿ ಹಣ ಹಂಚಿಕೆ ಮಾಡಲಾಗಿದ್ದು, ಪೈಪ್ ತಯಾರಕ ಕಂಪನಿಗಳಿಗೆ ಇದರಿಂದ ಲಾಭವಾಗಲಿದೆ. ವಿಶ್ಲೇಷಕರ ಪ್ರಕಾರ ಫಿನೋಲೆಕ್ಸ್ ಇಂಡಸ್ಟ್ರೀಸ್, ಸುಪ್ರೀಂ ಇಂಡಸ್ಟ್ರೀಸ್, ಆಸ್ಟ್ರಲ್, ಪ್ರಿನ್ಸ್ ಪೈಪ್ಸ್ ಕಂಪನಿಗಳ ವಹಿವಾಟು ಹೆಚ್ಚಾಗುವ ನಿರೀಕ್ಷೆಯಿದೆ.


Click it and Unblock the Notifications