ಹಲವಾರು ದಿನಗಳಿಂದ ಸ್ಟಾಕ್ ಮಾರುಕಟ್ಟೆಯಲ್ಲಿ ಭಾರೀ ಏರಿಳಿತ ಕಂಡು ಬರುತ್ತಿದೆ. ಅನಿಶ್ಚಿತ ಪರಿಸ್ಥಿತಿ ಸ್ಟಾಕ್ ಮಾರುಕಟ್ಟೆಯಲ್ಲಿ ನಾವು ಕಾಣುತ್ತಿದ್ದೇವೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2023-2024ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದಾರೆ.
ಇದಾದ ಬಳಿಕ ಸ್ಟಾಕ್ ಮಾರುಕಟ್ಟೆಯಲ್ಲಿ ಹಲವಾರು ಬೆಳವಣಿಗೆ ಕಂಡುಬಂದಿದೆ. ಸಾಮಾನ್ಯವಾಗಿ ಬಜೆಟ್ ಷೇರುಪೇಟೆ ಮೇಲೆ ಪ್ರಭಾವ ಬೀರುತ್ತದೆ. ಅದರಂತೆಯೇ ಈ ವರ್ಷವೂ ಬಜೆಟ್ ಪರಿಣಾಮ ಹೆಚ್ಚಾಗಿಯೇ ಸ್ಟಾಕ್ ಮಾರುಕಟ್ಟೆ ಮೇಲೆ ಬೀರಿದೆ. ಇದೇ ರೇಂಜ್‌ನಲ್ಲಿ ಹಲವಾರು ತಿಂಗಳುಗಳ ಕಾಲ ಸ್ಟಾಕ್ ಮಾರುಕಟ್ಟೆ ಇರುವ ಸಾಧ್ಯತೆಯಿದೆ ಎಂದು ಹೂಡಿಕೆದಾರರು ನಂಬಿದ್ದಾರೆ.
ಈ ನಡುವೆ ಹಲವಾರು ಒಳಉಡುಪು ಸಂಸ್ಥೆಗಳ ಸ್ಟಾಕ್ ಭಾರೀ ಇಳಿಕೆಯಾಗಿದೆ. ರೂಪ, ಲಕ್ಸ್, ಡಾಲರ್ ಮತ್ತು ಜಾಕಿ ಸ್ಟಾಕ್‌ಗಳು 52 ವಾರಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ರೂಪ & ಸಂಸ್ಥೆ 251 ರೂಪಾಯಿ, ಲಕ್ಸ್ ಇಂಡಸ್ಟ್ರೀಸ್ ಸ್ಟಾಕ್ 1311 ರೂಪಾಯಿ, ಪೇಜ್ ಇಂಡಸ್ಟ್ರೀಸ್ (ಜಾಕಿ) ಸ್ಟಾಕ್ 37,170, ಡಾಲರ್ ಇಂಡಸ್ಟ್ರೀಸ್ ಸ್ಟಾಕ್ 363 ರೂಪಾಯಿಗೆ ಇಳಿದಿದೆ. ಒಂದೇ ದಿನದಲ್ಲಿ ಈ ಎಲ್ಲ ಸ್ಟಾಕ್‌ಗಳು 52 ವಾರಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಈ ಸ್ಟಾಕ್‌ಗಳನ್ನು ನೀವು ಖರೀದಿಸಬಹುದೇ?, ಇಲ್ಲಿದೆ ವಿವರ ಮುಂದೆ ಓದಿ....
ಒಳಉಡುಪು ಸ್ಟಾಕ್ ಖರೀದಿಸಬಹುದೇ?
ಒಳಉಡುಪು ಸ್ಟಾಕ್‌ಗಳ ವಿಚಾರಕ್ಕೆ ಬಂದಾಗ ಖರೀದಿ ಮತ್ತು ಮಾರಾಟ ಕರೆಯನ್ನು ನಾವು ನೀಡಲು ಸಾಧ್ಯವಾಗದು. ಆದರೆ ಈ ಸ್ಟಾಕ್‌ಗಳ ಬಗ್ಗೆ ಕೆಲವೊಂದು ಮಾಹಿತಿಗಳನ್ನು ನಾವು ನೀಡುತ್ತೇವೆ. ಈ ಸ್ಟಾಕ್‌ಗಳು ಭಾರೀ ಇಳಿಕೆಯಾಗಲು ಪ್ರಮುಖ ಕಾರಣ ಕಾಟನ್ (ಹತ್ತಿ) ದರ ಏರಿಕೆಯಾಗಿರುವುದು ಆಗಿದೆ. ಇದು ಲಾಭದ ಮೇಲೆ ಪರಿಣಾಮ ಬೀರಿದೆ. ಹತ್ತಿ ಬೆಲೆ ದೀರ್ಘಕಾಲ ಹೆಚ್ಚಳವಾಗಿರಲಾರದು. ಹತ್ತಿ ಬೆಲೆ ಇಳಿಕೆಯಾದರೆ ಈ ಸಂಸ್ಥೆಗಳಿಗೆ ಲಾಭ ಉಂಟಾಗಲಿದೆ. ಇತ್ತೀಚೆಗೆ ಎಮ್ಕಾಯ್ ಗ್ಲೋಬಲ್ ಪೇಜ್ ಇಂಡಸ್ಟ್ರೀಸ್ ಸ್ಟಾಕ್ ಖರೀದಿಗೆ ಸಲಹೆ ನೀಡಿದೆ. ಸ್ಟಾಕ್ ಖರೀದಿ ಮೊತ್ತವನ್ನು ಸಂಸ್ಥೆಯು 48,800 ರೂಪಾಯಿ ಎಂದು ನಿಗದಿಪಡಿಸಿದೆ. ಇತರೆ ಷೇರುಗಳನ್ನು ಖರೀದಿಸುವ ಸಲಹೆ ನೀಡಿಲ್ಲ.
ಈಕ್ವಿಟಿ ಮಾರುಕಟ್ಟೆ ಬೆಳವಣಿಗೆ
ಫೆಡ್ ಹಾಗೂ ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದ ಬಳಿಕ ಈಕ್ವಿಟಿ ಮಾರುಕಟ್ಟೆಯು ಕೊಂಚ ಸರಿಯಾದ ಸ್ಥಿತಿಗೆ ತಲುಪುತ್ತಿದೆ. "ಫೆಡ್ ಆಗಲಿ ಆರ್‌ಬಿಐ ಆಗಲಿ ಮತ್ತೆ ದರವನ್ನು ಹೆಚ್ಚಿಸುವ ನಿರ್ಧಾರ ಮಾಡಿದೆ. ಈ ಮೂಲಕ ಹಣದುಬ್ಬರದ ವಿರುದ್ಧ ಹೋರಾಟ ನಡೆಸುತ್ತಿದೆ. ಇದರ ಪ್ರಭಾವ ಸ್ಟಾಕ್ ಮಾರುಕಟ್ಟೆಗೆ ಬಿದ್ದಿದೆ. ದೇಶೀಯ ಮಾರುಕಟ್ಟೆಗಳನ್ನು ಕಡಿಮೆ ವೆಚ್ಚದಾಯಕವನ್ನಾಗಿಸುತ್ತದೆ. ಹೂಡಿಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಹೂಡಿಕೆ ಮಾಡುವ ನಿರೀಕ್ಷೆಯಿದೆ," ಎಂದು ಎಂ ಕೆ ವೆಲ್ತ್ ಮ್ಯಾನೇಜ್‌ಮೆಂಟ್‌ನ ಸಂಶೋಧನಾ ಮುಖ್ಯಸ್ಥ ಡಾ. ಜೋಸೆಫ್ ಥಾಮಸ್ ತಿಳಿಸಿದ್ದಾರೆ.
ಇಲ್ಲಿ ಗಮನಿಸಿ
ಈ ಮೇಲಿನ ಲೇಖನವನ್ನು ಬರೀ ಮಾಹಿತಿ ನೀಡುವ ಸಲುವಾಗಿ ಪ್ರಕಟಿಸಲಾಗಿದೆ. 52 ವಾರಗಳ ಕನಿಷ್ಠ ಮಟ್ಟಕ್ಕೆ ಕುಸಿದ ಸ್ಟಾಕ್‌ಗಳ ಬಗ್ಗೆ ವಿವರ ನೀಡಿದ್ದೇವೆ. ಈ ಸ್ಟಾಕ್‌ಗಳನ್ನು ಖರೀದಿಸುವ ಸಲಹೆಯನ್ನು ನಾವಿಲ್ಲಿ ನೀಡಿಲ್ಲ. ಯಾವುದೇ ಸ್ಟಾಕ್ ಖರೀದಿ ಮಾಡುವ ಮುನ್ನ ತಜ್ಞರ ಸಲಹೆ ಪಡೆಯುವುದು ಉತ್ತಮ. ಲೇಖನದ ಆಧಾರದ ಮೇಲೆ ನೀವು ಯಾವುದೇ ನಿರ್ಧಾರವನ್ನು ಕೈಗೊಂಡರೂ ಅದರಿಂದ ಉಂಟಾಗುವ ನಷ್ಟಕ್ಕೆ ಗ್ರೇನಿಯಮ್ ಸಂಸ್ಥೆಯಾಗಲಿ ಅಥವಾ ಲೇಖಕರಾಗಲಿ, ಸಂಬಂಧಿತ ಬ್ರೋಕರೇಜ್ ಸಂಸ್ಥೆಯಾಗಲಿ ಜವಾಬ್ದಾರರಾಗಿರುವುದಿಲ್ಲ.


Click it and Unblock the Notifications