ಬೆಂಗಳೂರು, ಆಗಸ್ಟ್ 26: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (KIAL) ಟರ್ಮಿನಲ್ - 2 ವಿಶ್ವದಲ್ಲಿ ಅತ್ಯಂತ ಸುಂದರ ವಿಮಾನ ನಿಲ್ದಾಣಗಳಲ್ಲಿ ಒಂದೆಂಬ ಖ್ಯಾತಿಗೆ ಪಾತ್ರವಾಗಿದೆ. ಟರ್ಮಿನಲ್ -2 ಕಳೆದ ವರ್ಷದಂದು ಆಗಸ್ಟ್ 31 ರಿಂದ ಕಾರ್ಯಾಚರಣೆ ಆರಂಭಗೊಂಡಿತ್ತು. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರ 1ನೇ ಹಂತದ ಯೋಜನೆ 5,000 ಕೋಟಿ ರೂಪಾಯಿ ವೆಚ್ಚದಲ್ಲಿ ಸಾಕಾರಗೊಂಡಿತ್ತು.
2023 ರ ಜನವರಿಯಲ್ಲಿ ಟರ್ಮಿನಲ್ 2 ನಲ್ಲಿ ದೇಶೀಯ ಭಾಗದ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಆದರೆ, ವಿಮಾನ ನಿಲ್ದಾಣದಲ್ಲಿನ ಏಕೈಕ ವಿಶ್ರಾಂತಿ ಕೋಣೆ ಇನ್ನೂ ನಿರ್ಮಾಣ ಹಂತದಲ್ಲಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಇನ್ನು 2024ರ ಜೂನ್ ಹೊತ್ತಿಗೆ, ಟರ್ಮಿನಲ್ - 2 ರಲ್ಲಿ ಬೆಂಗಳೂರಿನ ಡೊಮೆಸ್ಟಿಕ್ ವಿಭಾಗದ ಕಾಮಗಾರಿ ಸಂಪೂರ್ಣಗೊಂಡಿದ್ದು, 080 ಲೌಂಜ್ ಅನ್ನು ತೆರೆದು ಈ ಲಾಂಜ್‌ಗೆ ಅರ್ಹರಾಗಿರುವ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಲಾಯಿತು. 080 ಲೌಂಜ್ ಬಗ್ಗೆ ಅಜಯ್ ಎಂಬವರು ತಮ್ಮ ಬ್ಲಾಗ್ 'ಲೈವ್ ಪ್ರಮ್ ಲಾಂಜ್ ' ರಿವ್ಯೂ ಬರೆದಿದ್ದಾರೆ.

" ನಾನು ಒಂದಷ್ಟು ಬಾರಿ ಲಾಂಜ್‌ಗೆ ಭೇಟಿ ನೀಡಿದ್ದು, ಹೀಗಾಗಿ ನಾನು ವಿಮರ್ಶೆ ಬರೆಯುತ್ತಿದ್ದೇನೆ. ಅರ್ಹ ಏರ್ ಇಂಡಿಯಾ ಗ್ರಾಹಕರು ಬೆಂಗಳೂರು ಟರ್ಮಿನಲ್ 2 ರಲ್ಲಿ ಏರ್ ಇಂಡಿಯಾ ಲೌಂಜ್‌ಗೆ ಪ್ರವೇಶ ಸಿಗುತ್ತದೆ. ಆದರೆ ವಿಸ್ತಾರಾ ಗ್ರಾಹಕರು ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಲಾಂಜ್‌ಗಳನ್ನು ಪ್ರವೇಶಿಸುವವರು 080 ಲಾಂಜ್‌ಗೆ ಹೋಗುತ್ತಾರೆ.
ಬೆಂಗಳೂರು ಏರ್‌ಪೋರ್ಟ್ ಟರ್ಮಿನಲ್ -2 ನಲ್ಲಿ 080 ಲೌಂಜ್ ಟರ್ಮಿನಲ್ 2 ಡಿಪಾರ್ಚರ್ಸ್‌ನಲ್ಲಿದೆ, ಭದ್ರತಾ ತಪಾಸಣೆ ಪ್ರದೇಶದಿಂದ ಸ್ವಲ್ಪ ಆಚೆಗೆ ಇದು ಇದ್ದು, ಬಾಸ್ ಮತ್ತು ಟಿಮ್ ಹಾರ್ಟನ್ಸ್‌ನಂತಹ ಕೆಲವು ಶಾಪ್ ಹಾದುಹೋದ ನಂತರ ಅದು ನಿಮ್ಮ ಎಡಭಾಗದಲ್ಲಿ ಸಿಗುತ್ತದೆ. ನೆಲ ಮಹಡಿಯಲ್ಲಿ, ನೀವು ಲೌಂಜ್ ಇರುವ (mezzanine)ಮೆಜ್ಜನೈನ್ ಮಹಡಿಗೆ ಹೋಗಲು ಎಲಿವೇಟರ್‌ಗಳ ಸೌಲಭ್ಯವಿದೆ. ಈ ಲೌಂಜ್ ಅನ್ನು ಪ್ರವೇಶಿಸಲು ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್ ಅನ್ನು ಬಳಸುವವರಿಗೆ, ಕೆಳ ಮಹಡಿಯಲ್ಲಿ, ನಿಮ್ಮ ಪ್ರವೇಶವನ್ನು ಮೌಲ್ಯೀಕರಿಸಲು ಡ್ರೀಮ್‌ಫೋಕ್ಸ್, ಲಾಂಜ್ ಪ್ರವೇಶ ನಿರ್ವಹಣಾ ಕಂಪನಿಯಿಂದ ಸ್ಥಾಪಿಸಲಾದ ಅನೇಕ ಯಂತ್ರಗಳಿವೆ.
ಬೋರ್ಡಿಂಗ್ ಪಾಸ್ ಮತ್ತು ಕ್ರೆಡಿಟ್/ಡೆಬಿಟ್ ಕಾರ್ಡ್ ನಲ್ಲಿ ನಿಮ್ಮ ಹೆಸರನ್ನು ಹೊಂದಿಸಲು 080 ಲೌಂಜ್ ಭಾರತದ ಮೊದಲ ಲಾಂಜ್‌ಗಳಲ್ಲಿ ಒಂದಾಗಿದೆ ಎಂಬುದನ್ನು ಎಂಬುವುದು ಗಮನಿಸಬೇಕು. ಲಾಂಜ್ ಹಲವು ವಿಭಾಗಗಳನ್ನು ಹೊಂದಿದ್ದು, ಇವೆಲ್ಲವೂ ಬೆಂಗಳೂರಿನಿಂದ ಹಾದುಹೋಗುವ ಪ್ರಯಾಣಿಕರಿಗೆ ಸ್ವಲ್ಪಮಟ್ಟಿಗೆ ಇದರ ಸೌಂದರ್ಯ ಆಸ್ವಾಧಿಸಬಹುದಾಗಿದೆ. ನೀವು ಲಾಂಜ್ ಪ್ರವೇಶಿಸಿದಾಗ, ನಿಮ್ಮ ಎಡಭಾಗದಲ್ಲಿ ಆಸನ ವ್ಯವಸ್ಥೆ ಇದ್ದು, ಇಲ್ಲಿ ಆಹಾರ ಸೇವಿಸಬಹುದು, ಡೆಸ್ಕ್ ವರ್ಕ್ ಮಾಡಬಹುದು ನಿಮ್ಮ ಸಹ-ಪ್ರಯಾಣಿಕರೊಂದಿಗೆ ಇಲ್ಲಿ ಕಾಯಬಹುದಾಗಿದೆ. ಭವಿಷ್ಯದಲ್ಲಿ, ಬೆಂಗಳೂರು ವಿಮಾನ ನಿಲ್ದಾಣದ ಅಧಿಕೃತ ಅಪ್ಲಿಕೇಶನ್ ಆಗಿರುವ BLRpulse ಅಪ್ಲಿಕೇಶನ್ ಅನ್ನು ಬಳಸಿಕೊಂಡು ಇಲ್ಲಿ ಸ್ಥಳವನ್ನು ಮೊದಲೇ ಕಾಯ್ದಿರಿಸಬಹುದು.
ನಿಮಗೆ ವೈ-ಫೈ ಸಂಪರ್ಕ ಕೋಡ್‌ನೊಂದಿಗೆ ಚಿಟ್ ಅಗತ್ಯವಿದ್ದರೆ ಈ ಪ್ರದೇಶದಲ್ಲಿ ಈ ಕೋಣೆಯನ್ನು ಪ್ರವೇಶಿಸಿದಾಗ ಸ್ವಯಂ-ಸೇವಾ ಯಂತ್ರವನ್ನು ಸ್ಥಾಪಿಸಲಾಗಿದೆ. ನೀವು ಕೋಡ್ ಪಡೆಯುವ ಮೊದಲು ನೀವು ಕೆಲವು ದೃಢೀಕರಣವನ್ನು ಮಾಡಬೇಕಾಗಿದೆ. ಲಾಂಜ್‌ನ ಈ ಭಾಗದ ಹಿಂದೆಯೇ ಕೊಡಗು ಕೆಫೆ ಇದ್ದು, ಇಲ್ಲಿ ಬೆಂಗಳೂರಿನ ಕೆಫೆ ಸಂಸ್ಕೃತಿಯ ರೊಟೇಟಿಂಗ್ ಡಿಸ್ಲ್ಪೇ ಇದೆ. ಸದ್ಯಕ್ಕೆ ಇಲ್ಲಿ "ಹಟ್ಟಿ ಕಪ್ಪಿ"ಗೆ ಆತಿಥ್ಯ ನೀಡಲಾಗುತ್ತಿದೆ. ಲೌಂಜ್ ನ ಈ ಭಾಗವು ಉಚಿತವಲ್ಲ; ಇಲ್ಲಿ ಕಾಫಿ ಪಡೆದರೆ ನೀವು ಪಾವತಿಸಬೇಕಾಗುತ್ತದೆ.
ಕೆಫೆ ಮತ್ತು ಲಾಂಜ್ ಪ್ರದೇಶದ ಪಕ್ಕದಲ್ಲಿ ಮ್ಯೂಸಿಕ್ ಟ್ರೀ ಇದ್ದು, ಇದನ್ನು ನೀಲಗಿರಿಯ ಬುಡಕಟ್ಟು ಕುಶಲಕರ್ಮಿಗಳು ಲಂಟಾನಾ ಮರದಿಂದ ರಚಿಸಿದ್ದು, ಇದು ಈ ಪ್ರದೇಶದ ಕಲಾತ್ಮಕ ಪ್ರತಿಭೆಯನ್ನು ಸಂಕೇತಿಸುತ್ತದೆ. ವಾರಾಂತ್ಯದಲ್ಲಿ, ವಿಮಾನ ನಿಲ್ದಾಣವು ಇಲ್ಲಿ ಸ್ಥಳೀಯ ಬ್ಯಾಂಡ್‌ಗಳ ಪ್ರದರ್ಶನಗಳನ್ನು ಆಯೋಜಿಸುತ್ತಿದ್ದು, ವೈಯಕ್ತಿಕವಾಗಿ ನಾನು ಇದರ ಆನಂದ ಪಡೆಯುವ ಸಂದರ್ಭ ನನಗೆ ಒದಗಿ ಬಂದಿಲ್ಲ.
ಕೆಫೆಯ ಮುಂದೆ, ನೀವು ಲೌಂಜ್‌ನ ಬಲಭಾಗವನ್ನು ಪ್ರವೇಶಿಸಿದಾಗ, "ಕೋರ್ಟ್ಯಾರ್ಡ್ ಕ್ಲಬ್" ಕಾಣಸಿಗುತ್ತದೆ. ಕ್ಲಬ್ ಲಾಂಜ್‌ನ ಅತ್ಯಂತ ವಿಶೇಷವಾದ ಭಾಗವಾಗಿದ್ದು ಇಲ್ಲಿಂದ ರನ್‌ವೇ ಕಾರ್ಯಾಚರಣೆಗಳನ್ನು ನೋಡಬಹುದಾಗಿದೆ. ಕ್ಲಬ್ ತನ್ನದೇ ಆದ ಬಾರ್ ಅನ್ನು ಅತ್ಯುತ್ತಮವಾದ ವೈನ್ ಮತ್ತು ಸ್ಪಿರಿಟ್ ಸಂಗ್ರಹವನ್ನು ಹೊಂದಿದ್ದು, ಇಲ್ಲಿಯೂ ಪಾವತಿಸಬೇಕಾಗುತ್ತದೆ.
ನಾವು ಮುಂದೆ ಹೋದಂತೆ, ಕ್ಲಬ್ ವಿಭಾಗದ ಹಿಂಭಾಗದಲ್ಲಿ ಬಲ ಮೂಲೆಯಲ್ಲಿರುವ ಪ್ರದೇಶದಲ್ಲಿ ಬೆಂಗಳೂರಿನ ಉದ್ಯಮಶೀಲತೆಯ ಸಂಸ್ಕೃತಿ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ನಿಮ್ಮ ಲ್ಯಾಪ್‌ಟಾಪ್ ಕೆಲಸ ಮಾಡಲು ವಿದ್ಯುತ್ ಪ್ಲಗ್ ಪಾಯಿಂಟ್‌ಗಳು ಮತ್ತು ಹಾಟ್ ಡೆಸ್ಕ್‌ಗಳ ವಿಶಾಲವಾದ ಪ್ರದೇಶವಿದೆ. ಬಿಸಿನೆಸ್ ಕನೆಕ್ಟ್" ಪ್ರದೇಶದ ಅಂಚುಗಳಲ್ಲಿ ಕೆಲವು ಪಾಡ್‌ಗಳಿವೆ, ಇವುಗಳನ್ನು ನೀವು ಸಂಪೂರ್ಣ ಗೌಪ್ಯತೆಯಿಂದ ಕೆಲಸ ಮಾಡಬಹುದಾಗಿದೆ. ಬ್ಯುಸಿನೆಸ್ ಕನೆಕ್ಟ್ ಪ್ರದೇಶದ ಪಕ್ಕದಲ್ಲಿ ಸ್ನಗ್ ಎಂಬ ರೀಡಿಂಗ್ ಸ್ಥಳವಿದ್ದು ಇಲ್ಲಿ ಹಲವು ಪುಸ್ತಕಗಳೊಂದಿಗೆ ನಿಮ್ಮ ಸಮಯ ಕಳೆಯಬಹುದಾಗಿದೆ. ನೀವು ಓಯಸಿಸ್ ಲೌಂಜ್ ವಿಭಾಗಕ್ಕೆ ಪ್ರವೇಶ ಪಡೆಯಲು ಬಯಸಿದ್ರೆ ಒಮ್ಮೆ ಇಲ್ಲಿರುವ ಪ್ರೋಟೋಕಾಲ್ ಓದಿಕೊಳ್ಳಿ..
ಇದಾದ ಬಳಿಕ ನೀವು ಪಬ್ ಪ್ರವೇಶಿಸುತ್ತೀರಿ, ಇದು ಬೆಂಗಳೂರಿನ ಪಬ್ ಸಂಸ್ಕೃತಿಗೆ ಗೌರವವಾಗಿದೆ. ಅವರು ಅದನ್ನು ರೇಡಿಯೊ ಹೌಸ್ ರೆಟ್ರೊ ಬಾರ್ ಎಂದು ಕರೆಯುತ್ತಾರೆ. ಅಂತಿಮವಾಗಿ, ನೀವು ಎಲ್ಲಾ ಆಹಾರವಿರುವ ಲೌಂಜ್‌ನ ಭಾಗಕ್ಕೆ ಬರಬಹುದಾಗಿದೆ. ್ಇದನ್ನು ಗಾರ್ಡನ್ ಡೈನಿಂಗ್ ಎಂದು ಕರೆಯುತ್ತಾರೆ, ಇದು ಬೆಂಗಳೂರಿನ ಉದ್ಯಾನಗಳಿಗೆ ಗೌರವದ ಸಂಕೇತ ಸ್ಥಳವಾಗಿದೆ. ಇಲ್ಲಿಗೆ ಹೋಗಲು ನೀವು ಓಯಸಿಸ್ ಲೌಂಜ್, ಬಿಸಿನೆಸ್ ಕನೆಕ್ಟ್ ಅಥವಾ ಕ್ಲಬ್ ಮೂಲಕ ಹೋಗಬೇಕಾಗಿಲ್ಲ. ನೀವು ಲಾಂಜ್‌ಗೆ ಪ್ರವೇಶಿಸುತ್ತಿದ್ದಂತೆಯೇ ಒಂದು ಸಣ್ಣ ರೀತಿಯ ಮೇಲ್ಸೇತುವೆ ಇದೆ. ಡೈರೆಕ್ಟ್ ಇಲ್ಲಿದೆ ಪ್ರವೇಶ ಪಡೆದು ಆಹಾರ ಸೇವಿಸಬಹುದಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ನಲ್ಲಿರುವ ಇತರ ಸೌಕರ್ಯಗಳು
ಲೌಂಜ್ ಸಲೂನ್ ಮತ್ತು ಸ್ಪಾ ಅನ್ನು ಸಹ ಹೊಂದಿದೆ, ಇದನ್ನು ವಿಮಾನ ನಿಲ್ದಾಣದ ಲಾಂಜ್‌ಗಾಗಿ ನಿರ್ವಹಿಸುತ್ತದೆ. ಇಲ್ಲಿ ಸೇವೆಗಳು ಉಚಿತವಲ್ಲ. ಪ್ರಯಾಣಕ್ಕೂ ಮೊದಲು ಮೊದಲು ನೀವು ಹೇರ್ಕಟ್, ಬ್ಲೋಡ್ರಿ, ಗಡ್ಡ ಟ್ರಿಮ್ ಅಥವಾ ಮಸಾಜ್ ಸೇವೆ ಇಲ್ಲಿ ಪಡೆಯಬಹುದು. ಒಟ್ಟಾರೆಯಾಗಿ, ಭಾರತದಾದ್ಯಂತ ಅಥವಾ ಜಾಗತಿಕವಾಗಿ ನೋಡುವುದಾದರೆ ಇದಕ್ಕಿಂತ ಉತ್ತಮ ದೇಶೀಯ ವಿಶ್ರಾಂತಿ ಕೊಠಡಿ ಲಭ್ಯವಿಲ್ಲ. 2024 ರಲ್ಲಿ, ಲಾಂಜ್ ಡೊಮೆಸ್ಟಿಕ್ ಲಾಂಜ್‌ಗಳಿಗಾಗಿ ವರ್ಷದ FAB ಏರ್‌ಪೋರ್ಟ್ ಲೌಂಜ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.


Click it and Unblock the Notifications