ಬೆಂಗಳೂರಿನಲ್ಲಿ ಮತ್ತೊಂದು ವಿದೇಶಿ ಕಚೇರಿಯು ಭಾರತೀಯ ಮಾರುಕಟ್ಟೆಗೆ ಇಂದು ಎಂಟ್ರಿ ಕೊಟ್ಟಿದೆ. ಶೀಘ್ರವೇ 50 ಉದ್ಯೋಗಿಗಳ ನೇಮಕ ಮಾಡಕೊಳ್ಳಲಿದೆ. ಹೌದು, Inspeq AI ಸ್ಟಾರ್ಟ್ಅಪ್ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಹೌದು, ಡಬ್ಲಿನ್ ಪ್ರಧಾನ ಕಛೇರಿಯ AI ಸುರಕ್ಷತಾ ಸ್ಟಾರ್ಟ್ಅಪ್ Inspeq AI ಗುರುವಾರ ಬೆಂಗಳೂರಿನಲ್ಲಿ ತನ್ನ ಮೊದಲ ಕಚೇರಿಯೊಂದಿಗೆ ಭಾರತದ ಮಾರುಕಟ್ಟೆಗೆ ತನ್ನ ಪ್ರವೇಶವನ್ನು ಘೋಷಣೆ ಮಾಡಿದೆ. ಕಚೇರಿಯು 25 ಸಿಬ್ಬಂದಿಯ ಒಳಗವನ್ನು ಹೊಂದಿದೆ.

ಮುಂದಿನ ಕೆಲವು ತಿಂಗಳುಗಳಲ್ಲಿ ಎಂಜಿನಿಯರಿಂಗ್ (ಸಾಫ್ಟ್‌ವೇರ್ ಮತ್ತು ಸೇವೆ), ಕಾರ್ಯಾಚರಣೆಗಳು ಮತ್ತು ಕ್ರೈಂಟ್ ಫೇಸಿಂಗ್ ಪಾತ್ರಗಳಲ್ಲಿ ಹೆಚ್ಚುವರಿ 50 ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಸಿದ್ದವಾಗಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ಮಾಹಿತಿಯನ್ನು ತಿಳಿಸಿದೆ.
ಡಬ್ಲಿನ್ ಮತ್ತು ಲಂಡನ್‌ನಲ್ಲಿರುವ ಕಚೇರಿಗಳನ್ನು ಅನುಸರಿಸಿ ಇದು ಕಂಪನಿಯ ಮೂರನೇ ಜಾಗತಿಕ ಕಚೇರಿಯಾಗಿದೆ. 2023 ರಲ್ಲಿ ಅಪೂರ್ವ ಕುಮಾರ್ ಮತ್ತು ರಾಮಾನುಜಂ ಮಚರ್ಲ ವಿಜಯಕುಮಾರ್ ಸ್ಥಾಪಿಸಿದ Inspeq Al ಒಂದು AI ಮೂಲಸೌಕರ್ಯ ಸಂಸ್ಥೆಯಾಗಿದೆ.
ಇದು ಡೆವಲಪರ್‌ಗಳು ತಮ್ಮ ಎಂಟರ್‌ಪ್ರೈಸ್ Al ಅಪ್ಲಿಕೇಶನ್‌ಗಳಲ್ಲಿ Al ಅನ್ನು ಸುರಕ್ಷಿತವಾಗಿ ಮತ್ತು ಜವಾಬ್ದಾರಿಯುತವಾಗಿ ಸಂಯೋಜಿಸಲು ಸಹಾಯ ಮಾಡಲು ಇದು ಎಂಟರ್ಪ್ರೈಸ್ ಸಿದ್ದ LLM Ops ಪ್ಲಾಟ್‌ಫಾರ್ಮ್ ಅನ್ನು ಒದಗಿಸುತ್ತದೆ.ಅದೇ ಸಮಯದಲ್ಲಿ ಈ ಅಪ್ಲಿಕೇಶನ್‌ಗನ್ನು ನಿರ್ವಹಣೆ ಮಾಡಲಾಗುತ್ತಾದೆ.
ಈ ಅಪ್ಲಿಕೇಶನ್‌ನಲ್ಲಿ ಪ್ಲಾಟ್‌ಫಾರ್ಮ್ ಜನರೇಟಿವ್ AI ಅಪ್ಲಿಕೇಶನ್‌ಗಳ ಅಭಿವೃದ್ಧಿಯನ್ನು ನಾಲ್ಕು ಪಟ್ಟು ವೇಗಗೊಳಿಸುತ್ತದೆ ಮತ್ತು ಅಭಿವೃದ್ಧಿ ವೆಚ್ಚವನ್ನು ಶೇ.70 ಕಡಿಮೆ ಮಾಡುತ್ತದೆ ಎಂದು ಅವರು ಮಾಹಿತಿಯನ್ನು ತಿಳಿಸಿದ್ದಾರೆ.
ಜವಾಬ್ದಾರಿಯುತ Al ಏಕೀಕರಣಗಳ ಮೂಲಕ ವ್ಯವಹಾರಗಳನ್ನು ಪರಿವರ್ತಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿರುವುದರಿಂದ ಭಾರತವು Inspeq Al ನ ಬೆಳವಣಿಗೆಗೆ ಪ್ರಮುಖ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಭಾವನ್ನು ಬೀರುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದು ವಿಶ್ವದ ಅತ್ಯಂತ ಪ್ರತಿಭಾವಂತ ಎಂಜಿನಿಯರ್‌ಗಳು ಮತ್ತು AI ತಜ್ಞರಿಗೆ ನಲೆಯಾಗಿದೆ ಎಂದೇ ಹೇಳಬಹುದು. Al ಅಭಿವೃದ್ಧಿಯ ನಮ್ಮ ದೃಷ್ಟಿಯನ್ನು ಹಂಚಿಕೊಳ್ಳುವ ತಂಡವನ್ನು ನಿರ್ಮಿಸುವಲ್ಲಿ ನಾವು ಉತ್ತಮ ಸಾಮರ್ಥ್ಯವನ್ನು ಮತ್ತು ಕೌಶಲ್ಯವನ್ನು ನೋಡುತ್ತೇವೆ ಎಂದು Inspeq Al ಸಹ ಸಂಸ್ಥಾಪಕ ಮತ್ತು CEO ಕುಮಾರ್ ಮಾಹಿತಿ ತಿಳಿಸಿದ್ದಾರೆ.
ಇನ್ಮುಂದೆ ರಾಜಧಾನಿಯಲ್ಲೇ ಸಿಗುತ್ತೆ ವೀಸಾ
2025ರ ಜನವರಿಯಲ್ಲಿ ಅಮೇರಿಕಾ ಕಾನ್ಸುಲೇಟ್ ತನ್ನ ಕಚೇರಿಯನ್ನು ಬೆಂಗಳೂರಿನಲ್ಲಿ ಆರಂಬಿಸಲಿದೆ. ಇನ್ಮುಂದೆ ರಾಜಧಾನಿಯಲ್ಲೇ ವೀಸಾ ಸಿಗುತ್ತೆ. ಇದು ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ಬಲಪಡಿಸಲು ಮತ್ತಷ್ಟು ಸಹಾಯಕವಾಗಲಿದೆ ಎಂದು ಕರ್ನಾಟಕ ಕಾಂಗ್ರೆಸ್ ತನ್ನ ಎಕ್ಸ್ ಖಾತೆಯಲ್ಲಿ ಸಂತಸ ಹಂಚಿಕೊಂಡಿದೆ.
ಅಮೆರಿಕಾ ಕಾನ್ಸುಲೇಟ್ ಕಚೇರಿ ಬೆಂಗಳೂರಿನಲ್ಲಿ ಆರಂಭ
2025ರ ಜನವರಿಯಲ್ಲಿ ಅಮೇರಿಕಾ ಕಾನ್ಸುಲೇಟ್ ತನ್ನ ಕಚೇರಿಯನ್ನು ಬೆಂಗಳೂರಿನಲ್ಲಿ ಆರಂಭಿಸಲಿದ್ದು,ಇನ್ಮುಂದೆ ರಾಜಧಾನಿಯಲ್ಲೇ ವೀಸಾ ಸಿಗುತ್ತೆ.ಇದರಿಂದ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ಬಲಪಡಿಸಲು ಮತ್ತಷ್ಟು ಸಹಾಯವಾಗುತ್ತದೆ.
ಅಮೆರಿಕ ಮತ್ತು ಭಾರತ ಬಿಸಿನೆಸ್ ಕೌನ್ಸಿಲ್ (ಯುಎಸ್‌ಐಬಿಸಿ) ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ದೂತವಾಸ ಕಚೇರಿಯನ್ನು ಹೊಂದಿರದ ಏಕೈಕ ದೇಶ ಅಮೆರಿಕವಾಗಿತ್ತು, ಆದರೆ ಈಗ ಕಚೇರಿ ಸ್ಥಾಪನೆಗೆ ನಾವು ಈ ಬಗ್ಗೆ ಶ್ರಮಿಸುತ್ತಿದ್ದೇವೆ.
ಶೀಘ್ರದಲ್ಲಿಯೇ ಒಳ್ಳೆಯ ಸುದ್ದಿಗಳನ್ನು ಘೋಷಿಸುತ್ತೇವೆ ಎಂದರು. ಈಗಾಗಲೇ ನಾವು ಬೆಂಗಳೂರಿನಲ್ಲಿ ಹಲವಾರು ವಿದೇಶಿ ವಾಣಿಜ್ಯವನ್ನು ಹೊಂದಿದ್ದೇವೆ. ನಮ್ಮ ಬದ್ಧತೆಯಂತೆ ಜನವರಿಯಲ್ಲಿ ಬೆಂಗಳೂರಿನಲ್ಲಿ ಕಾನ್ಸುಲೇಟ್ ಕಚೇರಿಯನ್ನು ತೆರೆಯುವುದನ್ನು ಎದುರು ನೋಡುತ್ತಿದ್ದೇವೆ ಎಂದೂ ಅವರು ಮಾತನಾಡಿದ್ದಾರೆ.
US ಕಾನ್ಸುಲೇಟ್ ಸ್ಥಾಪನೆಗೆ ಜನವರಿಯಲ್ಲಿ ಪ್ರಾರಂಭಿಸಲಾಗುತ್ತದೆ ಎಂದು ದಿನಾಂಕವನ್ನು ನಿಗದಿಪಡಿಸಲಾಗಿದೆ.ಭಾರತಕ್ಕೆ ಐಟಿ ಆದಾಯದಲ್ಲಿ ಶೇ.40ರಷ್ಟು ಕೊಡುಗೆ ನೀಡುವ ಐಟಿ ರಾಜಧಾನಿ ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಕೊರತೆಯಿಂದಾಗಿ ನಿವಾಸಿಗಳು ವೀಸಾ ಕೆಲಸಕ್ಕಾಗಿ ಚೆನ್ನೈ ಅಥವಾ ಹೈದರಾಬಾದ್‌ಗೆ ಪ್ರಯಾಣಿಸಲು ಹೋಗುತ್ತಿದ್ದರು.


Click it and Unblock the Notifications