ಇನ್‌ಸ್ಟಾಗ್ರಾಮ್ ರೀಲ್ ಎಲ್ಲರೂ ಅತಿಹೆಚ್ಚಾಗಿ ಬಳಕೆ ಮಾಡುತ್ತಾರೆ. ಇತ್ತೀಚಿಗೆ ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ಮಾಡುವುದೇ ಒಂದು ಟ್ರೇಂಡ್ ಆಗಿದ್ದು, ಯುವಜನತೆ ಇನ್‌ಸ್ಟಾಗ್ರಾಮ್ ರೀಲ್ (Instagram Reels) ಮಾಡುವುದರಲ್ಲೇ ಮುಳುಗಿ ಹೋಗಿದ್ದಾರೆ. ಅಂಥವರಿಗೆ ಇನ್ಸ್ಟಾಗ್ರಾಂ ಹೊಸದೊಂದು ಸಿಹಿಸುದ್ದಿ ಘೋಷಿಸಿದೆ.
ಹೌದು, ಪ್ರತಿಯೊಬ್ಬರ ಫೋನಿನಲ್ಲೂ ಈ ಆಪ್ ಇದ್ದೇ ಇರುತ್ತದೆ.ಇನ್ಸ್ಟಾಗ್ರಾಂನಲ್ಲಿ ಕೊನೆಗೂ ಬಂದೆ ಬಿಡ್ತು 90 ಸೆಕೆಂಡ್ ರೀಲ್ ವಿಡಿಯೋ ಮಾಡುವ ಅದ್ಭುತ ಫೀಚರ್! ಜೊತೆಗೆ ಆಡಮ್ ಮೊಸ್ಸೆರಿ ಅವರು ಇನ್ಸ್ಟಾಗ್ರಾಮ್ನಲ್ಲಿಯೇ (Instagram) ಇತರೆ ಅಪ್ಡೇಟ್‌ಗಳನ್ನು ಘೋಷಣೆ ಮಾಡಿದ್ದಾರೆ. ಬನ್ನಿ, ಆ ಹೊಸ ಅಪ್‌ಗ್ರೇಡ್ ಯಾವುದು? ಎಂಬ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ...

ರೀಲ್ ಪ್ರಿಯರಿಗಾಗಿ ಇನ್‌ಸ್ಟಾಗ್ರಾಮ್ ದೊಡ್ಡ ಅಪ್‌ಗ್ರೇಡ್ ಮಾಡಿದೆ. ಇನ್ಮುಂದೆ ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ಲಿಮಿಟ್ ಅನ್ನು 90 ಸೆಕೆಂಡುಗಳಿಂದ 3 ನಿಮಿಷಗಳಿಗೆ ಹೆಚ್ಚಿಸಲಾಗಿದೆ. ಮೆಟಾ ಒಡೆತನದ ಇನ್ಸ್ಟಾಗ್ರಾಮ್ನ ಹೊಸ ಅಪ್ಡೇಟ್ ಅಡಿಯಲ್ಲಿ (Instagram Update) ನೀವು, ಇನ್ಸ್ಟಾಗ್ರಾಮ್ನಲ್ಲಿ 3 ನಿಮಿಷಗಳ ರೀಲ್‌ಗಳನ್ನು ಅಪ್ಲೋಡ್ ಮಾಡಬಹುದು. ಇದರ ಹೊರತಾಗಿ ನಿಮ್ಮ ಸ್ನೇಹಿತರು ಯಾವ ರೀಲ್‌ಗಳನ್ನು ಇಷ್ಟಪಟ್ಟಿದ್ದಾರೆ ಮತ್ತು ಹೆಚ್ಚಿನದನ್ನು ತೋರಿಸಲು ರೀಲ್ಸ್‌ಗಾಗಿ ಸ್ನೇಹಿತರ ಚಟುವಟಿಕೆಯಂತಹ ಇತರೆ ಹೊಸ ಫೀಚರ್‌ಗಳನ್ನು ಇನ್‌ಸ್ಟಾಗ್ರಾಮ್ ಪ್ಲಾಟ್‌ಫಾರ್ಮ್ ಘೋಷಿಸಿದೆ.
ಇನ್ಮುಂದೆ 3 ನಿಮಿಷಗಳ ರೀಲ್ಸ್ ಮಾಡಬಹುದು!
ಆಡಮ್ ಮೊಸ್ಸೆರಿ ಅವರು 3 ನಿಮಿಷಗಳ ರೀಲ್ಸ್ ಮತ್ತು ಇತರೆ ಘೋಷಣೆಗಳನ್ನು ಇನ್ಸ್ಟಾಗ್ರಾಂ ಮೂಲಕವೇ ಪ್ರಕಟಿಸಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ. ನೀವು ಈಗ ಮೂರು ನಿಮಿಷಗಳವರೆಗೆ ರೀಲ್ಸ್‌ಗಳನ್ನು ಅಪ್ಲೋಡ್ ಮಾಡಬಹುದು. ನಾವು ಐತಿಹಾಸಿಕವಾಗಿ ಕೇವಲ 90 ಸೆಕೆಂಡ್ ವರೆಗಿನ ರೀಲ್ಸ್‌ಗಳನ್ನು ಕಿರು ಫಾರ್ಮ್ ವಿಡಿಯೋ ಮೇಲೆ ಕೇಂದ್ರೀಕರಿಸಿದ್ದೇವೆ. ಆದರೆ, ಹೆಚ್ಚು ಅವಧಿಯ ಸ್ಟೋರಿಗಳನ್ನು ಶೇರ್ ಮಾಡಿಕೊಳ್ಳಲು ಬಯಸುವವರಿಗೆ ಇದರಿಂದ ಸ್ವಲ್ಪ ಬೇಸರ ಉಂಟು ಮಾಡಿದೆ.
ಇನ್ಸ್ಟಾಗ್ರಾಂನಲ್ಲಿ ರೀಲ್ಸ್‌ನ 3 ನಿಮಿಷದ ಅವಧಿಯು ಯೂಟ್ಯೂಬ್ (YouTube) ಕಿರುಚಿತ್ರಗಳಿಗೆ ಹೋಲಿಕೆ ಆಗುತ್ತದೆ. ಯೂಟ್ಯೂಬ್ ಪ್ಲಾಟ್‌ಫಾರ್ಮ್ ಕಳೆದ 2024ರ ಅಕ್ಟೋಬರ್‌ನಲ್ಲಿ ಒಂದು ನಿಮಿಷದಿಂದ (60 ಸೆಕೆಂಡುಗಳಿಂದ) 3 ನಿಮಿಷಗಳಿಗೆ ಹೆಚ್ಚಿಸಿತು. ಯುಎಸ್‌ನಲ್ಲಿ ಟಿಕ್‌ಟಾಕ್ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಘೋಷಣೆ ಮಾಡಲಾಗಿದೆ. ಇದನ್ನು ಅಲ್ಲಿ ನಿಷೇಧಿಸಲಾಯಿತು. ಆದರೆ, ಬಳಿಕ ಅದನ್ನು ಆನ್‌ಲೈನ್‌ಗೆ ತರಲಾಯಿತು.
ಬಂದಿವೆ ಇನ್ನೂ ಎರಡು ಹೊಸ ಫೀಚರ್!
ನಿಮ್ಮ ಸ್ನೇಹಿತರು ಮತ್ತು ಫಾಲೋವರ್ಸ್ ಏನನ್ನು ಇಷ್ಟಪಡುತ್ತಾರೆ ಎಂಬುದನ್ನು ಎಕ್ಸ್‌ಪ್ಲೋರ್ ಮಾಡಿ: ಇನ್ಸ್ಟಾಗ್ರಾಂ ಇನ್ನೂ ಎರಡು ಹೊಸ ಫೀಚರ್ ಪರಿಚಯಿಸಿದೆ. ನಿಮ್ಮ ಸ್ನೇಹಿತರು ಮತ್ತು ಫಾಲೋವರ್ಸ್‌ಗಾಗಿ (Discover what your friends and followers are into) ಇದನ್ನು ತರಲಾಗಿದೆ. ರೀಲ್ಸ್ ಟ್ಯಾಬ್‌ನ ಮೇಲಿನ ಬಲ ಮೂಲೆಯಲ್ಲಿರುವ ರೀಲ್‌ಗಳಲ್ಲಿ ನಿಮ್ಮ ಸ್ನೇಹಿತರು ಇಷ್ಟಪಡುವ ವಿಷಯವನ್ನು ನೋಡಲು ಮತ್ತು ತೊಡಗಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಅಂದರೆ, ಸುಲಭಗೊಳಿಸಲಾಗಿದೆ.
ಸಂಭಾಷಣೆ ಪ್ರಾರಂಭಿಸಿ: ನೀವು ಪ್ರತ್ಯುತ್ತರ ಪಟ್ಟಿಯನ್ನು ಸಹ ನೋಡುತ್ತೀರಿ. ಆದ್ದರಿಂದ ನೀವು ಆನಂದಿಸುತ್ತಿರುವ ವಿಷಯದ ಕುರಿತು ನೀವು ಸುಲಭವಾಗಿ ಸಂವಾದಗಳನ್ನು (Start conversations) ಪ್ರಾರಂಭಿಸಬಹುದು. ಇದು ನಿಮ್ಮನ್ನು ಇನ್ನೂ ಫಾಲೋ ಮಾಡದ ಜನರಿಗೆ, ನಿಮ್ಮ ರೀಲ್ಸ್ ನೋಡಲು ಇನ್ನಷ್ಟು ಅವಕಾಶಗಳನ್ನು ನೀಡುತ್ತದೆ.
ವಿಡಿಯೋ ಎಡಿಟ್ ಮಾಡಲು ಹೊಸ ಆಪ್
ಮೂರು ನಿಮಿಷದ ರೀಲ್ಸ್, ಅಪ್ಡೇಟ್ ಮಾಡಿದ ಪ್ರೊಫೈಲ್ ಗ್ರಿಡ್ ಮತ್ತು ರೀಲ್ಸ್ ಟ್ಯಾಬ್‌ನಲ್ಲಿ ಮೀಸಲಾದ ಸ್ನೇಹಿತರ ಫೀಡ್ ಫೀಚರ್‌ಗಳನ್ನು ಇನ್ಸ್ಟಾಗ್ರಾಂನಲ್ಲಿ ಅಪ್‌ಗ್ರೇಡ್ ಮಾಡಲಾಗಿದೆ. ಜೊತೆಗೆ ಇನ್‌ಸ್ಟಾಗ್ರಾಮ್ ವಿಡಿಯೋಗಳನ್ನು ಎಡಿಟ್ ಮಾಡಲು ಹೊಸ ಆಪ್ ಸಹ ಪರಿಚಯಿಸಿದೆ. ಈ ವೈಶಿಷ್ಟ್ಯಗಳನ್ನು ಇನ್‌ಸ್ಟಾಗ್ರಾಮ್ ಮುಖ್ಯಸ್ಥ ಆಡಮ್ ಮೊಸ್ಸೆರಿ ಅವರು ಸರಣಿ ಪೋಸ್ಟ್‌ಗಳಲ್ಲಿ ಘೋಷಿಸಿದ್ದಾರೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications